ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾನಂದವಾಡಿ: ವಿವಿಧೆಡೆ ಗಣರಾಜ್ಯೋತ್ಸವ

Last Updated 26 ಜನವರಿ 2022, 14:33 IST
ಅಕ್ಷರ ಗಾತ್ರ

ಪರಮಾನಂದವಾಡಿ: ಗ್ರಾಮದ ವಿವಿಧೆಡೆ ಗಣರಾಜ್ಯೋತ್ಸವವನ್ನು ಸಂಘ– ಸಂಸ್ಥೆ ಮತ್ತು ಶಾಲಾ– ಕಾಲೇಜುಗಳಲ್ಲಿ ಸರಳವಾಗಿ ಬುಧವಾರ ಆಚರಿಸಲಾಯಿತು.

ಶಿವಬಸವ ಕೃಪಾ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದಲ್ಲಿ ಮಲ್ಲಿಕಾರ್ಜುನ ಕುಂಚನೂರ ಪೂಜೆ ಸಲ್ಲಿಸಿದರು. ಶಶಿಧರ ಮೂಡಲಗಿ ಧ್ವಜಾರೋಹಣ ನೆರವೇರಿಸಿದರು.

ಗುರುದೇವ ಸಿದ್ದೇಶ್ವರ ದಿವ್ಯಜೀವನ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ರಾವಸಾಬ ಗಂಡೊಶಿ ಫೋಟೊಗಳಿಗೆ ಪೂಜೆ ಸಲ್ಲಿಸಿದರೆ, ವಾಮಣ್ಣ ಹಟ್ಟಿಮನಿ ಧ್ವಜಾರೋಹಣ ಮಾಡಿದರು. ಗುರುದೇವ ಬ್ರಹ್ಮಾನಂದ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಡಾ.ಎ.ಎಸ್. ಉತ್ನಾಳ ಪೂಜೆ ಮತ್ತು ಸೂರ್ಯಕಾಂತ ಚೌಗಲಾ ಧ್ವಜಾರೋಹಣ ನೆರವೇರಿಸಿದರು.

ಕನಕದಾಸ ಕೋ-ಆಪ್ ಅರ್ಬನ್ ಸೊಸೈಟಿಯಲ್ಲಿ ಬಿಬನಸಾಬ ರಾಜಾಪೂರೆ ಪೂಜೆ, ಸಿದ್ದಾರೂಢ ದಳವಾಯಿ ಧ್ವಜಾರೋಹಣವನ್ನು ಮಾಡಿದರು. ಗ್ರಾಮ ಪಂಚಾಯ್ತಿಯಲ್ಲಿ ಸುಜಾತಾ ಭಜಂತ್ರಿ ಪೂಜೆ, ಸುಮಿತ್ರಾ ಪಟ್ಟಣಕೊಡಿ ಧ್ವಜಾರೋಹಣ ಮಾಡಿದರು. ಮಹಾಲಕ್ಷ್ಮಿ ಕೋ ಆಪ್ ಕ್ರೆಡಿಟ್‌ ಸೊಸೈಟಿಯಲ್ಲಿ ನಂದೇಶ್ವರ ಪಾಲಭಾವಿ ಪೂಜೆ ಸಲ್ಲಿಸಿದರು. ಬಸಪ್ಪ ಕೋಣೆ ಧ್ವಜಾರೋಹಣ ಮಾಡಿದರು.

ಭುವನೇಶ್ವರಿ ವಿವಿಧೋದ್ದೇಶಗಳ ಸೊಸೈಟಿಯಲ್ಲಿ ಮೌಲಾಲಿ ಮುಲ್ಲಾ ಪೂಜೆ ಮತ್ತು ನಾಭೀರಾಜ ಸಾಜನೆ ಧ್ವಜಾರೋಹಣ ಮಾಡಿದರು. ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಬಾಳಪ್ಪ ನಾಯಿಕ ಪೂಜಿಸಿದರು. ಡಾ.ಸಚಿನ ಸೌಂದಲಗಿ ಧ್ವಜಾರೋಹಣ ನೆರವೇರಿಸಿದರು.

ಎಸ್.ಆರ್. ದಳವಾಯಿ ಸಂಯುಕ್ತ ಪ್ರೌಢಶಾಲೆ, ಪಿಯು ಕಾಲೇಜು ಹಾಗೂ ಪದವಿ ಕಾಲೇಜಿನಲ್ಲಿ ಎನ್.ಬಿ. ಕುಸನಾಳೆ ಪೂಜೆ ಸಲ್ಲಿಸಿದರು. ವಿಜಯ ದಳವಾಯಿ ಧ್ವಜಾರೋಹಣ ಮಾಡಿದರು. ಮಹಾಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮು ಹಕ್ಕಿ ಪೂಜಿಸಿದರೆ, ಅಭಿಜಿತರಾವ ಶಿರಗೂರಕರ ಧ್ವಜಾರೋಹಣ ಮಾಡಿದರು. ಮಹಾಲಕ್ಷ್ಮಿ ಪಿ.ಕೆ.ಪಿ.ಎಸ್.ನಲ್ಲಿ ಶರದ ಕೌಲಗುಡ್ಡ ಪೂಜೆ ನೆರವೇರಿಸಿದರು. ಬಾಳಾಸಾಹೇಬ ಚೌಗಲಾ ಧ್ವಜಾರೋಹಣ ಮಾಡಿದರು.

ನವೋದಯ ವಿವಿಧ ಉದ್ದೇಶಗಳ ಸಹಕಾರಿ ಸಂಘದಲ್ಲಿ ನಿಂಗಪ್ಪ ದಳವಾಯಿ ಪೂಜೆ ಮತ್ತು ಅಭಿಜಿತರಾವ ಶಿರಗೂರಕರ ಧ್ವಜಾರೋಹಣ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT