ಶನಿವಾರ, ನವೆಂಬರ್ 23, 2019
18 °C

ಕೆರೆಗಳ ಅಭಿವೃದ್ಧಿಗೆ ಅನುದಾನ: ಮನವಿ

Published:
Updated:

ಬೆಳಗಾವಿ: ಹೊರವಲಯದ ಬಸವನಕುಡಚಿಯ 3, ಅಲಾರವಾಡ, ಕಣಬರಗಿ, ಮುತ್ಯಾನಟ್ಟಿಯ ತಲಾ ಒಂದು ಸೇರಿ 6 ಕೆರೆಗಳು ಪ್ರವಾಹದಿಂದ ಹಾನಿಗೊಳಗಾಗಿವೆ. ಅವುಗಳ ದುರಸ್ತಿಗಾಗಿ ಅನುದಾನ ಬಿಡುಗಡೆ ಮಾಡುವಂತೆ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಬುಧವಾರ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

‘ಕೆರೆಗಳ ಹಾನಿಯಿಂದ ಸುತ್ತಮುತ್ತಲಿನ ಬೆಳೆಗಳು ಹಾನಿಯಾಗಿ ರೈತರಿಗೆ ನಷ್ಟ ಸಂಭವಿಸಿದೆ. ಅವುಗಳ ಅಭಿವೃದ್ಧಿಗೆ ತಕ್ಷಣ ₹ 3 ಕೋಟಿ ವಿಶೇಷ ಅನುದಾನ ನೀಡಬೇಕು’ ಎಂದು ಕೋರಿದರು.

ಯಳ್ಳೂರು ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆ ಯೋಜನೆಗೆ ಅಗತ್ಯ ಅನುದಾನ ನೀಡುವಂತೆ ಶಾಸಕ ಅಭಯ ಪಾಟೀಲ ಮನವಿ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)