ಗುರುವಾರ , ನವೆಂಬರ್ 26, 2020
22 °C

ರೈತರ ಸಮಸ್ಯೆ ಆಲಿಸದ ಆರ್.ಅಶೋಕ್: ಸಂತ್ರಸ್ತರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಅತಿವೃಷ್ಟಿಯಿಂದ ಹಾನಿಗೊಳಗಾದ ಚಿಕ್ಕೋಡಿ ತಾಲ್ಲೂಕಿಗೆ ಸೋಮವಾರ ಭೇಟಿ ನೀಡಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರು ರೈತರ ಸಮಸ್ಯೆ ಆಲಿಸದೆ ಕೃಷ್ಣಾ ನದಿಯಲ್ಲಿ ಬೋಟಿನಲ್ಲಿ ಸುತ್ತಾಡಿ ಹೋದರು. ಇದು ಸಂತ್ರಸ್ತರು ಹಾಗೂ ರೈತರ ಅಸಮಾಧಾನಕ್ಕೆ ಕಾರಣವಾಯಿತು.

ಯಡೂರ, ಯಡೂರವಾಡಿ, ಮಾಂಜರಿ, ಇಂಗಳಿ ಗ್ರಾಮಗಳಲ್ಲಿ ಬೆಳೆ ಹಾನಿ ಪರಿಶೀಲನೆ ನಡೆಸುತ್ತಾರೆಂದು ರೈತರು ನಿರೀಕ್ಷಿಸಿದ್ದರು. ತಮ್ಮ ಸಮಸ್ಯೆ ಆಲಿಸುತ್ತಾರೆಂದು ಕಾದಿದ್ದರು. ಆದರೆ, ಸಚಿವರು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹಾಗೂ ಅಧಿಕಾರಿಗಳೊಂದಿಗೆ ಲೈಫ್‌ ಜಾಕೆಟ್‌ ಧರಿಸಿ, ಕೃಷ್ಣಾ ನದಿ ತೀರದಲ್ಲಿ ಬೋಟ್‍ ಮೂಲಕ ಪ್ರವಾಹದ ಪರಿಸ್ಥಿತಿ ಅವಲೋಕಿಸಿದರು.

ಹುಕ್ಕೇರಿ ‍ಪಟ್ಟಣದ ಪುರಸಭೆ ಸುತ್ತಮುತ್ತಲಿನ ಪ್ರದೇಶದಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು. ಇದನ್ನು ತೋರಿಸಲು ಮತ್ತು ಅಹವಾಲು ಹೇಳಿಕೊಳ್ಳಲು ಪುರಸಭೆ ಸದಸ್ಯರು ಹಾಗೂ ಸಂತ್ರಸ್ತರು ಕಾದಿದ್ದರು. ಆದರೆ, ಸಚಿವರು ಅಲ್ಲಿಗೆ ಬರಲಿಲ್ಲ. ಬೈಪಾಸ್‌ನಲ್ಲಿ ಎರಡು ಕಡೆಗಳಲ್ಲಿ ಬೆಳೆ ಹಾನಿ ವೀಕ್ಷಣೆ ಮಾಡಿ ಚಿಕ್ಕೋಡಿಯತ್ತ ತೆರಳಿದರು. ಇದರಿಂದ, ಸಚಿವರಿಗೆ ಕಾದಿದ್ದವರಿಗೆ ಭಾರಿ ನಿರಾಸೆಯಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು