ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಅಮಿತ್ ಶಾ ಕಾರ್ಯಕ್ರಮ ಹಿನ್ನೆಲೆ: ವಾಹನ ಸಂಚಾರ ನಿರ್ಬಂಧ, ಮಾರ್ಗ ಬದಲಾವಣೆ

Last Updated 16 ಜನವರಿ 2021, 9:50 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಜ.17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ, ಬೆಳಿಗ್ಗೆ 7ರಿಂದ ಬಿಜೆಪಿ ಜನಸೇವಕ ಸಮಾವೇಶ ಸಮಾರೋಪ ಮುಕ್ತಾಯದವರೆಗೂ ಎಲ್ಲ ಮಾದರಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಮಾರ್ಗ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಕೆ. ತ್ಯಾಜರಾಜನ್ ತಿಳಿಸಿದ್ದಾರೆ.

* ನಿಪ್ಪಾಣಿ, ಅಥಣಿ, ಚಿಕ್ಕೋಡಿ, ಸಂಕೇಶ್ವರ, ಯಮಕನಮರಡಿ, ಕಾಕತಿ ಕಡೆಯಿಂದ ಬರುವವರು ಎಲ್ಲ ಮಾದರಿಯ ವಾಹನಗಳು ರಾಷ್ಟ್ರೀಯ ಹೆದ್ದಾರಿ-4ರ ಮೂಲಕ ಶ್ರೀನಗರ ಗಾರ್ಡನ್, ಶಿವಬಸವನಗರ ರಸ್ತೆಗೆ ಬಂದು ಜನರನ್ನು ಇಳಿಸಬೇಕು. ಕೆಎಲ್‌ಇ ಕ್ರಾಸ್ ಮೂಲಕ ಸಾಗಿ ಹಿಂಡಾಲ್ಕೊ ಕೆಳಸೇತುವೆ ದಾಟಿ ಹಿಂಡಾಲ್ಕೊ ಮೈದಾನದಲ್ಲಿ ನಿಲ್ಲಿಸಬೇಕು.

* ಗೋಕಾಕ, ಕಣಬರ್ಗಿ ಕಡೆಯಿಂದ ಬರುವ ಎಲ್ಲ ಮಾದರಿಯ ವಾಹನಗಳು ಬೆಮುಲ್ ಕ್ರಾಸ್ ಮೂಲಕ ಸಿದ್ನಾಳರ ಮನೆ ಕ್ರಾಸ್ ಮಾರ್ಗವಾಗಿ ಆಂಜನೇಯ
ನಗರ ಮುಖ್ಯ ರಸ್ತೆ ಸೇರಿ ಮಹಾಂತ ಭವನ ಬಳಿಯ ಸ್ಥಳದಲ್ಲಿ ನಿಲ್ಲಿಬೇಕು.

* ಬಾಗಲಕೋಟೆ, ರಾಮದುರ್ಗ, ಯರಗಟ್ಟಿ ಕಡೆಗಳಿಂದ ನಗರಕ್ಕೆ ಬರುವ ಎಲ್ಲ ಮಾದರಿಯ ವಾಹನಗಳು ಮೋದಗಾ, ಮರಕಟ್ಟಿ ಕ್ರಾಸ್, ಚಂದನಹೊಸೂರು, ತಾರಿಹಾಳ, ಹಲಗಾ ಮಾರ್ಗವಾಗಿ ಬಂದು ಅಲಾರವಾಡ ಸರ್ವಿಸ್ ರಸ್ತೆ, ಹಳೆ ಪಿ.ಬಿ ರಸ್ತೆ, ಜೀಜಾಮಾತಾ ವೃತ್ತ, ಶನಿಮಂದಿರ, ಖಾನಾಪುರ ರಸ್ತೆ ಮೂಲಕ ಸಿಪಿಇಡಿ ಮೈದಾನದಲ್ಲಿ ನಿಲ್ಲಿಸಬೇಕು.

* ಹುಬ್ಬಳ್ಳಿ, ಧಾರವಾಡ, ಬೈಲಹೊಂಗಲ, ಸವದತ್ತಿ, ಕಿತ್ತೂರು, ಹಿರೇಬಾಗೇವಾಡಿ ಕಡೆಗಳಿಂದ ಬರುವ ಎಲ್ಲ ಮಾದರಿಯ ವಾಹನಗಳು ಅಲಾರವಾಡ ಸರ್ವಿಸ್ ರಸ್ತೆ, ಹಳೆ ಪಿ.ಬಿ. ರಸ್ತೆ, ಶನಿ ಮಂದಿರ, ಖಾನಾಪುರ ರಸ್ತೆ ಮೂಲಕ ಸಿಪಿಇಡಿ ಮೈದಾನ ಸೇರಬೇಕು.

* ಕಾರವಾರ, ಹಳಿಯಾಳ, ಖಾನಾಪುರ ಮಾರ್ಗವಾಗಿ ಬರುವವರು ವಾಹನಗಳನ್ನುಸಿಪಿಇಡಿ ಮೈದಾನದಲ್ಲಿ ನಿಲ್ಲಿಸಬೇಕು.

* ವೆಂಗುರ್ಲಾ, ಸಾವಂತವಾಡಿ, ಸುಳಗಾ ಕಡೆಗಳಿಂದ ಬರುವ ವಾಹನಗಳನ್ನು ಸಿಪಿಇಡಿ ಮೈದಾನದಲ್ಲಿ ನಿಲ್ಲಿಸಬೇಕು.

* ನಗರದಿಂದ ಧಾರವಾಡ, ಹುಬ್ಬಳ್ಳಿ, ಸವದತ್ತಿ, ಬೈಲಹೊಂಗಲ, ಯರಗಟ್ಟಿ, ಬಾಗಲಕೋಟೆ, ವಿಜಯಪುರ, ಗೋಕಾಕ, ಸಂಕೇಶ್ವರ, ಅಥಣಿ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಹಳೆ ಪಿ.ಬಿ. ರಸ್ತೆಯಲ್ಲಿ ಸಾಗಿ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಸೇರಿ ಸಾಗಬೇಕು.

* ಕೆಎಲ್‌ಇ ಆಸ್ಪತ್ರೆಗೆ ಬರುವ ಆಂಬುಲೆನ್ಸ್‌ ಕೆಎಲ್‌ಇ ಕ್ರಾಸ್ ಹಾಗೂ ಕೃಷ್ಣದೇವರಾಯ ವೃತ್ತದ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಸಂಪೂರ್ಣವಾಗಿ ವಾಹನ ಸಂಚಾರ ನಿರ್ಬಂಧಿಸಿದ ಮಾರ್ಗಗಳು

* ರಾಣಿ ಚನ್ನಮ್ಮ ವೃತ್ತದಿಂದ ಅಂಬೇಡ್ಕರ್ ರಸ್ತೆ, ಕೃಷ್ಣದೇವರಾಯ ವೃತ್ತ.

* ರಾಯಣ್ಣ ವೃತ್ತದಿಂದ ಕೃಷ್ಣದೇವರಾಯ ವೃತ್ತದ ಹಳೆ ಪಿ.ಬಿ. ರಸ್ತೆ.

* ಹಳೆ ಪಿ.ಬಿ. ರಸ್ತೆ ನ್ಯಾಯಮಾರ್ಗದಿಂದ ಮರಾಠಾ ಮಂಡಳ ಕಡೆಗೆ.

* ಮರಾಠಾ ಮಂಡಳ ರಸ್ತೆಯಲ್ಲಿ ಮಹೇಶ್ವರ ದೃಷ್ಟಿದೋಷವುಳ್ಳ ಮಕ್ಕಳ ಶಾಲೆಯ ಕ್ರಾಸ್.

* ಗ್ಯಾಂಗವಾಡಿ ವೃತ್ತದಿಂದ ರಾಮದೇವ್ ಹೋಟಲ್‌ವರೆಗೆ.

* ಶಿವಬಸವ ನಗರ ಕೆಪಿಟಿಸಿಎಲ್ ಕಲ್ಯಾಣಮಂಟಪ ಎದುರಿನ ಸ್ಮಾರ್ಟ್‌ ಸಿಟಿ ಮಾದರಿ ರಸ್ತೆಗೆ ಎಸ್‌ಜಿಬಿಐಟಿ ಕಡೆಯಿಂದ.

* ಕೆಪಿಟಿಸಿಎಲ್ ರಸ್ತೆಯಲ್ಲಿ ಶಿವಬಸವ ಕ್ರಾಸ್ ಹತ್ತಿರ ಕೆಎಲ್‌ಇ ದಂತ ವೈದ್ಯಕೀಯ ಕಾಲೇಜು.

* ಹಿಂಡಾಲ್ಕೊ ಕೆಳಸೇತುವೆ ಸರ್ವಿಸ್ ರಸ್ತೆ ಕಡೆಯಿಂದ ಕೆಎಲ್‌ಇ.

* ಬಾಕ್ಸೈಟ್ ರಸ್ತೆಯಲ್ಲಿ ಶಿವಾಲಯ ಕ್ರಾಸ್‌.

* ನೆಹರೂ ನಗರ (ಎಪಿಎಂಸಿ ರಸ್ತೆ) 1ನೇ ಹಾಗೂ 2ನೇ ಕ್ರಾಸ್‌ನಿಂದ ಕೆಎಲ್‌ಇ ರಸ್ತೆ.

* ಲಕ್ಷ್ಮಿ ಕಾಂಪ್ಲೆಕ್ಸ್ ಕಡೆಯಿಂದ ಆಸ್ಪತ್ರೆ ರಸ್ತೆ ಕಡೆಗೆ ಎಲ್ಲ ಮಾದರಿಯ ವಾಹನಗಳಿಗೆ ನಿಷೇಧವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT