ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಚುನಾವಣೆ: ಎಎಪಿಯಿಂದ 26 ಅಂಶಗಳ ‘ಸಂಕಲ್ಪ ಪತ್ರ’ ಬಿಡುಗಡೆ

Last Updated 24 ಆಗಸ್ಟ್ 2021, 15:53 IST
ಅಕ್ಷರ ಗಾತ್ರ

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ)ದಿಂದ 26 ಅಂಶಗಳ ಪ್ರಣಾಳಿಕೆ(ಸಂಕಲ್ಪ ಪತ್ರ)ಯನ್ನು ಮುಖಂಡ ರೋಮಿ‌ ಭಾಟಿ ಮಂಗಳವಾರ ಬಿಡುಗಡೆ ಮಾಡಿದರು.

‘ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಪಕ್ಷ ಹೊಂದಿದೆ. ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ನೋಡಿಕೊಳ್ಳಲಾಗುವುದು. ಇದಕ್ಕಾಗಿ ಮತದಾರರು ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಬೇಕು’ ಎಂದು ಕೋರಿದರು.

ಪಕ್ಷದ ಬೆಳಗಾವಿ ಉಸ್ತವಾರಿ ವಿ.ಲಕ್ಷ್ಮೀಕಾಂತ ರಾವ್ ಮಾತನಾಡಿ, ‘ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ನಮ್ಮ ಪಕ್ಷವು ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದೆ. 28 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಪಕ್ಷೇತರ ಅಭ್ಯರ್ಥಿಗಳು ನಮ್ಮೊಂದಿಗೆ ಇದ್ದಾರೆ. ನವದೆಹಲಿಯಲ್ಲಿ ಮಾಡಿರುವ ಅಭಿವೃದ್ಧಿ ಉಪಕ್ರಮಗಳನ್ನು ಇಲ್ಲೂ ಅನುಷ್ಠಾನಗೊಳಿಸುವ ಉದ್ದೇಶ ಹೊಂದಿದ್ದೇವೆ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕಪಾಡಿಯಾ, ಉಪಾಧ್ಯಕ್ಷ‌ ವಿಜಯ ಪಾಟೀಲ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ತವಾಬ್ ಶೇಖ, ಜಿಲ್ಲಾ ಮಾಧ್ಯಮ ಸಂಚಾಲಕ ಅನೀಶ ಸೌದಾಗಾರ ಹಾಗೂ ಅಭ್ಯರ್ಥಿಗಳು ಇದ್ದರು.

ಸಂಕಲ್ಪಗಳು

* ಭ್ರಷ್ಟಾಚಾರ ರಹಿತ, ಜನಸ್ನೇಹಿ ಸೇವೆ.

* ಸರ್ಕಾರಿ ಸೇವೆಗಳು ಮನೆ ಬಾಗಿಲಿಗೆ.

* ದಿನದ 24 ಗಂಟೆಯೂ ಸ್ಪಂದಿಸುವ ಸಹಾಯವಾಣಿ.

* ಮನವಿಗಳನ್ನು ಪರಿಹರಿಸಲು ಏಕಗವಾಕ್ಷಿ ಪದ್ಧತಿ.

* ನಗರದ ಪ್ರತಿ ಕುಟುಂಬಕ್ಕೆ ಸಮರ್ಪಕ ನೀರು ಸರಬರಾಜು.

* ಪ್ರತಿ ವಾರ್ಡ್‌ನಲ್ಲೂ ಮೊಹಲ್ಲಾ ಕ್ಲಿನಿಕ್‌ಗಳ ಆರಂಭ. ಅಲ್ಲಿ 40 ಪರೀಕ್ಷೆಗಳು ಉಚಿತ.

* ಸರ್ಕಾರಿ ಶಾಲೆಗಳನ್ನು ವಿಶ್ವ ದರ್ಜೆಗೆ ಏರಿಸಲಾಗುವುದು. ಹೊಸದಾಗಿ ಶಾಲೆಗಳ ನಿರ್ಮಾಣ.

* ಮಹಿಳೆಯರಿಗೆ ನಗರ ವ್ಯಾಪ್ತಿಯಲ್ಲಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ.

* ಎಲ್ಲ ಉದ್ಯಾನಗಳಲ್ಲೂ ಜಿಮ್‌ ನಿರ್ಮಾಣ ಹಾಗೂ ಮಕ್ಕಳ ಆಟಿಕೆಗಳ ಅಳವಡಿಕೆ.

* 100 ಆಟೊರಿಕ್ಷಾ ನಿಲ್ದಾಣಗಳ ನಿರ್ಮಾಣ, ವೈ–ಫೈ ವ್ಯವಸ್ಥೆ.

* ಹೊಸದಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ. ಲಭ್ಯ ಕ್ರೀಡಾ ಸೌಲಭ್ಯಗಳನ್ನು ಉನ್ನತ ದರ್ಜೆಗೆ ಏರಿಸಲಾಗುವುದು.

* ಸ್ವಚ್ಛ ಬೆಳಗಾವಿ ನಿರ್ಮಾಣಕ್ಕೆ ಸಂಕಲ್ಪ.

* ಮಹಿಳಾ ಸಂಘಗಳಿಗೆ ₹ 1 ಲಕ್ಷದವರೆಗೆ ಸಾಲ.

* ವಾಹನಗಳ ನಿಲುಗಡೆಗೆ ವ್ಯವಸ್ಥೆ.

* ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌.

* ಎಲ್ಲ ವಾರ್ಡ್‌ಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ.

* ಆಶ್ರಯ ಕಾಲೊನಿಗಳು ಮತ್ತು ಅಕ್ರಮ–ಸಕ್ರಮ ಬಡಾವಣೆಗಳಿಗೆ ಮೂಲಸೌಲಭ್ಯ.

* ಉದ್ದಿಮೆ ಪರವಾನಗಿ ಪ್ರಮಾಣ ಇಳಿಕೆ.

* 10 ದಿನಗಳೊಳಗೆ ಕಟ್ಟಡ ಪರವಾನಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT