ಸಂಕೇಶ್ವರ: ಜನ ಗಣತಿಯು ದೇಶದಾದ್ಯಂತ ಆರಂಭವಾಗಿದ್ದು, ಗಣತಿದಾರರು ತಮ್ಮ ಮನೆಗೆ ಬಂದಾಗ ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ ನಿಖರ ಮಾಹಿತಿ ನೀಡಿ ಸಹಕರಿಸಬೇಕು ಎಂದು ಪ್ರಧಾನ ಜನಗಣತಿ ಅಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ ಹೇಳಿದರು.

ಪುರಸಭೆಯ ವ್ಯಾಪ್ತಿಯಲ್ಲಿ ಮನೆಗಣತಿ ಕಾರ್ಯದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗಣತಿ ಕಾರ್ಯದ ಮೇಲ್ವಿಚಾರಕರಾದ ಮಹೇಶ ಪೂಜಾರ ಮಾತನಾಡಿ, ಗಣತಿದಾರರು ತಮ್ಮ ಬಂದಾಗ, ಮನೆ ನಿರ್ಮಾಣದ ಸ್ಥಿತಿಗತಿ ಮತ್ತು ವಸತಿ ಸೌಕರ್ಯ ಸೇರಿದಂತೆ ಒಟ್ಟು 34 ವಿವಿಧ ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಸಂಕೇಶ್ವರ ಪುರಸಭೆಯ ವ್ಯಾಪ್ತಿಯಲ್ಲಿ 11ಜನ ಮೇಲ್ವಿಚಾರಕಾರಿ, ಗಣತಿದಾರರಾಗಿ 60 ಜನ ಕಾರ್ಯನಿರ್ವಹಿಸುತ್ತಿದ್ದು, ಈ ಗಣತಿ ಕಾರ್ಯವು ಮೇ 15ರ ವರೆಗೆ ನಡೆಯಲಿದೆ ಎಂದರು.

ಗಣತಿದಾರರಾದ ಹಸನ್ ಕಾಲೇಕಾಜಿ, ಎ.ಎಸ್.ಪರೀಟ್, ಇದ್ರೀಶನ್ ದೊಡಮನಿ, ಪೊಲೀಸ್ ಇಲಾಖೆ ಸಿಬ್ಬಂದಿ ಬಿ.ಕೆ. ನಾಗನೂರೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-21-1080465199

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.