ಸಂಕೇಶ್ವರ: 11 ವರ್ಷಗಳಿಗೊಮ್ಮೆ ನಡೆಯುವ ಇಲ್ಲಿನ ಐತಿಹಾಸಿಕ ಪ್ರಸಿದ್ದ ಲಕ್ಷ್ಮೀದೇವಿ ಜಾತ್ರೆ ಈ ಬಾರಿ 2027ರ ಮೇ 4ರಿಂದ ಮೇ 15ರವರೆಗೆ ನಡೆಯಲಿದೆ ಎಂದು ಲಕ್ಷ್ಮೀದೇವಿ ಜಾತ್ರಾ ಉತ್ಸವ ಕಮಿಟಿಯ ಹಕ್ಕುದಾರರಾದ ಕುನಾಲ ಪಾಟೀಲ ತಿಳಿಸಿದರು.

ಮೇ4ರಂದು ಧ್ವಜಾರೋಹಣ , ಹಾಲಕಂಬ ನಿಲ್ಲಿಸುವುದು, ಸೀಮೆಯಿಂದ ಲಕ್ಷ್ಮಿದೇವಿ ತರುವುದು, ಅಕ್ಕಿ ಬಿಳುವ ಕಾರ್ಯಕ್ರಮ ನಡೆಯಲಿದೆ.

ಮೇ 11ರಂದು ಮುಖ್ಯ ಅತಿಥಿಗಳಿಂದ ದೇವಿಗೆ ಪೂಜೆ, ಹಕ್ಕುದಾರರ ಮನೆಗಳಿಗೆ ತೆರಳಿ ಉಡಿ ತುಂಬಿಸಿಕೊಳ್ಳುವ ಕಾರ್ಯಕ್ರಮ, ಮೇ 12ರಂದು ಲಕ್ಷ್ಮೀದೇವಿಯ ಪ್ರತಿಷ್ಠಾಪನೆ, 13 ಮತ್ತು 14 ರಂದು ಸಾರ್ವಜನಿಕರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.

ಮೇ15ರಂದು ಲಕ್ಷ್ಮೀ ದೇವಿಯ ಮೆರವಣಿಗೆ ನಡೆದು ಸೀಮೆಗೆ ಕಳಿಸುವ ಕಾರ್ಯಕ್ರಮ ನಡೆಯಲಿದೆ. ಜಾತ್ರೆಯ ಸಂಬಂಧ ಪಟ್ಟಣದಲ್ಲಿ ಮೂಲಸೌಕರ್ಯಗಳಿಗಾಗಿ ಈಗಾಗಲೇ ಶಾಸಕ ನಿಖಿಲ ಕತ್ತಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ. ಸಂಸದರ ನಿಧಿಯಿಂದಲೂ ಜಾತ್ರೆಸೌಕರ್ಯಗಳಿಗಾಗಿ ಹಣ ನೀಡಲು ವಿನಂತಿಸಲಾಗುವುದು ಜಾತ್ರಾ ಕಮಿಟಿಯ ಪದಾಧಿಕಾರಿಗಳು ತಿಳಿಸಿದರು.

ಲಕ್ಷ್ಮೀದೇವಿ ಜಾತ್ರಾ ಉತ್ಸವ ಕಮಿಟಿಯ ಅಧ್ಯಕ್ಷ ಎಸ್.ಎಸ್.ಶಿರಕೋಳಿ, ಪದಾಧಿಕಾರಿಗಳಾದ ಸುನೀಲ ಪರ್ವತರಾವ್, ಬಸನಗೌಡ ಪಾಟೀಲ, ಹಕ್ಕುದಾರರಾದ ಅಪ್ಪಾಸಾಹೇಬ ಶೆಟ್ಟಿಮನಿ, ಗಿರೀಶ ಕುಲಕರ್ಣಿ, ಸಂತೋಷ ಹವಾಲ್ದಾರ, ಬಾಳಕೃಷ್ಣ ಕುಲಕರ್ಣಿ, ದೀಪಕ ಅಸೋದೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-21-271171971

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.