ಸಂಕೇಶ್ವರ: ಪಟ್ಟಣದ ನಿಡಸೋಸಿ ರಸ್ತೆ ಸುಧಾರಣೆ ಹಾಗೂ ವಿಸ್ತರಣೆ ಕಾಮಗಾರಿಯಲ್ಲಿ ತಾರತಮ್ಯ ನಡೆದಿದೆ ಎಂಬ ಆರೋಪದ ಕಾರಣ, ಎರಡು ಗುಂಪುಗಳ ನಡುವೆ ಬುಧವಾರ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಪಟ್ಟಣದಿಂದ ನಿಡಸೋಸಿ ಮಾರ್ಗವಾಗಿ ನಡೆಯುತ್ತಿರುವ ಅಗಲೀಕರಣವು ಪಂಚಾಚಾರ್ಯ ಶಾಲೆಯಿಂದ ಬಸ್ ನಿಲ್ದಾಣದವರೆಗೆ 14 ಮೀಟರ್ ವಿಸ್ತೀರ್ಣ ಕಾರ್ಯ ನಡೆಯುತ್ತಿದೆ. ಆದರೆ ಬಸ್ ನಿಲ್ದಾಣದ ಹತ್ತಿರ ಮುಸ್ಲಿಂ ಸಮಾಜದವರು ಸರ್ಕಾರ ತಮಗೆ ನೀಡಿರುವ ಸ್ಮಶಾನ ಜಾಗದಲ್ಲಿ ಅಂಗಡಿಗಳನ್ನು ಮತ್ತು ಶಾಪಿಂಗ್ ಕಾಂಪ್ಲೆಕ್ಸ್ಗಳನ್ನು ನಿರ್ಮಿಸಿದ್ದು, ಇಲ್ಲಿ 10 ಮೀಟರ್ ಮಾತ್ರ ವಿಸ್ತೀರ್ಣ ಇದೆ. ಇದರಿಂದ ಲೋಕೋಪಯೋಗಿ ಇಲಾಖೆಯ ಕಾರ್ಯಸೂಚಿಯಂತೆ ರಸ್ತೆ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕ ರಸ್ತೆಯ ಸಂಬಂಧ ಹಿಂದೂ– ಮುಸ್ಲಿಮರ ನಡುವೆ ಭೇದ ಮಾಡುವುದು ಸರಿಯಲ್ಲ ಎಂದು ಹಿಂದೂ ಸಂಘಟನೆಗಳ ಮುಖಂಡರು ಹುಕ್ಕೇರಿ ತಹಶೀಲ್ದಾರ್, ಸಿ.ಪಿ.ಐ ಹಾಗೂ ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು.

ಪಟ್ಟಣದ ವ್ಯಾಪ್ತಿಯವರೆಗೆ ಇಡೀ ರಸ್ತೆ ಏಕರೂಪದ ಅಳತೆಯಲ್ಲಿ ನಿರ್ಮಾಣವಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಎರಡು ಗುಂಪುಗಳ ನಡುವೆ ಆರೋಪ ಪ್ರತ್ಯಾರೋಪ ನಡೆದು, ಹುಕ್ಕೇರಿ ತಹಶೀಲ್ದಾರ ಬಲರಾಮ ಕಟ್ಟಿಮನಿ ಸ್ಥಳಕ್ಕೆ ಧಾವಿಸಿ, ಎರಡೂ ಗುಂಪುಗಳ ಮನವಿ ಸ್ವೀಕರಿಸಿದರು. ಕಾಮಗಾರಿ ಅಳತೆಯ ಬಗ್ಗೆ ಪರಿಶೀಲನೆ ನಡೆಸಿ, ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಸಮಸ್ಯೆಯನ್ನು ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.

ಮುಖಂಡರಾದ ಗಜಾನನ ಕ್ವಳ್ಳಿ, ಅಮರ ನಲವಡೆ, ಸುನೀಲ ಪರ್ವತರಾವ, ಶಿವಾನಂದ ಮುಡಶಿ, ಶ್ರೀಕಾಂತ ಹತನೂರಿ, ರೋಹನ ನೇಸರಿ, ದೀಪಕ ಭಿಸೆ, ಚಿದಾನಂದ ಲಟ್ಟಿ, ರಾಜು ಸಾನೆ, ಹರುಣ ಮುಲ್ಲಾ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಪ್ರವೀಣ ಮಡ್ಯಾಳ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ, ಸಂಕೇಶ್ವರ ಠಾಣೆ ಸಿಪಿಐ ಶಿವಶಂಕರ ಅವಜಿ, ಕಂದಾಯ ನಿರೀಕ್ಷಕ ಎ.ಎಂ.ಕಮತನೂರ, ಗ್ರಾಮ ಲೆಕ್ಕಾಧಿಕಾರಿ ಎನ್. ಆರ್. ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.