ಮೂಡಲಗಿ: ‘ಸಸ್ಯ ಸಂತೆಯಲ್ಲಿ ವಿವಿಧ ಹಣ್ಣಿನ ಸಸಿಗಳು ಸೇರಿದಂತೆ ಅಲಂಕಾರಿಕ ಹೂವುಗಳ ಸಸಿಗಳು ದೊರೆಯುತ್ತಿದ್ದು, ಜನರು ಸಂತೆಯ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಂ.ಜಿ. ಕೆರುಟಗಿ ಹೇಳಿದರು.
ತಾಲ್ಲೂಕಿನ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಏರ್ಪಡಿಸಿರುವ ಮೂರು ದಿನಗಳ ಸಸ್ಯ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇಲ್ಲಿ ದೊರೆಯುವ ಎಲ್ಲ ಸಸಿಗಳು ಗುಣಮಟ್ಟದಾಗಿದ್ದು ಜನರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಜುಲೈ 26ರ ವರೆಗೆ ಸಸ್ಯ ಸಂತೆ ಇರುವುದು ಎಂದರು.
ಮೊದಲ ಎರಡು ದಿನ ವಿವಿಧೆಡಯಿಂದ ಆಗಮಸಿದ ರೈತರು ಹಾಗೂ ಜನಸಾಮಾನ್ಯರು ಸಹ ಸಾಕಷ್ಟು ಸಸಿಗಳನ್ನು ಖರೀದಿಸಿದರಲ್ಲದೆ ಮಹಾವಿದ್ಯಾಲಯದ ವಿಜ್ಞಾನಿಗಳಿಂದ ಸಸ್ಯಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡರು.
ಆಪೂಸ್, ಮಲ್ಲಿಕಾ ಮಾವು, ಪೇರಲ, ನೇರಳೆ, ಸೀತಾಫಲ, ಕಾಗ್ಝಿಮ ತಳಿಯ ಲಿಂಬು, ಚಿಕ್ಕು, ರೆಡ್, ಸ್ವೀಟ್ ಹುಣಸೆ ಮತ್ತು ತರಕಾರಿ, ಹೂವುಗಳ ಸೇರಿದಂತೆ ನೂರಾರು ತರಹದ ಸಸಿಗಳ ಘಮಲು ಸಸ್ಯ ಸಂತೆಯಲ್ಲಿ ಗಮನ ಸೆಳೆದವು.
ಸಸ್ಯ ಸಂತೆಯಲ್ಲಿ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.