ಬೆಳಗಾವಿ: ‘ಕರುನಾಡ ಕುರುಬಗೌಡ್ರು’ ಹಾಗೂ ‘ಬಂಡಾಯ ಧ್ವನಿ’ ಎಂಬ ನಕಲಿ ಫೇಸ್ಬುಕ್ ಖಾತೆಗಳಲ್ಲಿ ಶಾಸಕ, ಮಾಜಿ ಸಚಿವ ಜಾರಕಿಹೊಳಿ ವಿರುದ್ದ ಅವಹೇಳನಕಾರಿ ಪೋಸ್ಟ್ ಹಾಕಿರುವುದಕ್ಕೆ ಸಂಬಂಧಿಸಿ, ವಾಲ್ಮೀಕಿ ಸಮಾಜದ ಮುಖಂಡ ರಾಜಶೇಖರ ತಳವಾರ ಅವರು ಬೆಳಗಾವಿ ಸಿಇಎನ್ ಅಪರಾಧ ಠಾಣೆಯಲ್ಲಿ ಶನಿವಾರ ರಾತ್ರಿ ದೂರು ದಾಖಲಿಸಿದ್ದಾರೆ.
.ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಂದು ವಾಕ್ಯದ ಕಾರ್ಯಸೂಚಿ: ಸತೀಶ ಜಾರಕಿಹೊಳಿ.
‘ಇವೆರಡೂ ಖಾತೆಗಳಲ್ಲಿ ‘ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ವಿರುದ್ದ 37 ಶಾಸಕರಿಂದ ಸತೀಶ ಜಾರಕಿಹೊಳಿ ಸಹಿ ಸಂಗ್ರಹಿಸಿದ್ದಾರೆ’ ಎಂದು ಆರೋಪಿಸಲಾಗಿದೆ. ಆದರೆ, ಸ್ವತಃ ಸತೀಶ ಜಾರಕಿಹೊಳಿ ಅವರೇ ಈ ಆರೋಪ ತಳ್ಳಿಹಾಕಿದ್ದಾರೆ. ಸತೀಶ ಜಾರಕಿಹೊಳಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ’ ಎಂದು ಆಪಾದಿಸಿದ್ದಾರೆ.

ಕುರುಬ ಮತ್ತು ವಾಲ್ಮೀಕಿ ಜನಾಂಗದ ಮಧ್ಯೆ ಭಿನ್ನಾಭಿಪ್ರಾಯ ಉಂಟುಮಾಡುವ ಜತೆಗೆ, ಸಮಾಜದಲ್ಲಿ ಶಾಂತಿಗೆ ಭಂಗ ತರಲು ಮತ್ತು ದೊಂಬಿಗೆ ಯತ್ನಿಸಲು ಇಂಥ ಸುಳ್ಳು ಸುದ್ದಿಗಳನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಸುಳ್ಳು ಸುದ್ದಿ ಹರಡುವವರು ಹಾಗೂ ನಕಲಿ ಫೇಸ್ಬುಕ್ ಖಾತೆಗಳಲ್ಲಿ ಸಚಿವರ ಅವಹೇಳನಕಾರಿ ಪೋಸ್ಟ್ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜಶೇಖರ ತಳವಾರ ಒತ್ತಾಯಿಸಿದ್ದಾರೆ.
.ಸಿದ್ದರಾಮಯ್ಯ ವಿರುದ್ಧ 37 ಮಂದಿ ಸಹಿ: ಸತೀಶ ಜಾರಕಿಹೊಳಿ ಸ್ಪಷ್ಟನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.