ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತಿ: ಕುಸ್ತಿ ಪಂದ್ಯಾವಳಿ ಉದ್ಘಾಟನೆ

Last Updated 13 ಸೆಪ್ಟೆಂಬರ್ 2019, 14:55 IST
ಅಕ್ಷರ ಗಾತ್ರ

ಅಥಣಿ: ‘ಸಮೀಪದ ಸತ್ತಿ ಗ್ರಾಮ ಭಾವೈಕ್ಯದ ಸಂಗಮವಾಗಿದೆ. ಇಲ್ಲಿನ ಮೊಮ್ಮಗ ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿ ಆಗಿರುವುದು ಹೆಮ್ಮೆಯ ಸಂಗತಿ’ ಎಂದು ಬಿಜೆಪಿ ಯುವ ಮೋರ್ಚಾ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದ ಸವದಿ ಹೇಳಿದರು.

ಸತ್ತಿ ಗ್ರಾಮದಲ್ಲಿ ಬುರಾನಸಾಹೇಬರ ಉರುಸ್‌ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರವಾಹ ಬಂದು ಹೋದರೂ ಗ್ರಾಮದ ಜನರ ಕ್ರೀಡಾ ಪ್ರೀತಿ ಅಭಿಮಾನ ಕಡಿಮೆಯಾಗಿಲ್ಲದಿರುವುದು ಅಭಿನಂದನಾರ್ಹ. ಗ್ರಾಮೀಣ ಕ್ರೀಡೆಗಳು ಉಳಿಯಬೇಕು, ಬೆಳೆಯಬೇಕು’ ಎಂದರು.

ಬಬಲಾದಿ ಮಠದ ಷಣ್ಮುಖಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀಶೈಲ ಗಸ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಜಡೆಪ್ಪ ಕುಂಬಾರ, ಮುಖಂಡರಾದ ಪರಪ್ಪ ಚಮಕೇರಿ, ಬಾಹುಸಾಬ ಗಾಯಕವಾಡ, ಅಸ್ಕರ ಅತ್ತಾರ, ಸಂಜೀವ ಗಡ್ಯಾಗೋಳ, ಅನಂತಕುಮಾರ ಪಾಟೀಲ, ಮೋಹನ ದೊಡ್ಡಮನಿ, ಬುರಾನ್ ಜಮಲಬಾಯಿ, ಬಸಪ್ಪ ಮುಡಸಿ, ಸತ್ಯಪ್ಪ ಮಳಲಿ, ಸಂಜೀವ ನಾವಿ, ಮುದಕಪ್ಪ ನಂದೇಶ್ವರ, ಶ್ರೀಶೈಲ ಜಕ್ಕಪ್ಪನವರ, ಮಲ್ಲಪ್ಪ ಹಂಚಿನಾಳ, ಪ್ರಶಾಂತ ಅಕ್ಕೊಳ, ಪ್ರದೀಪ ನಂದಗಾಂವ, ಹಣಮಂತ ಲಿಂಗರೆಡ್ಡಿ, ಬಸವರಾಜ ಭಜರಂಗಿ, ನೌಶಾದ ಪಾಟೀಲ, ಡಾ.ಬಿ.ಎಸ್. ಅಜ್ಜನಗಿ, ಬಸಪ್ಪ ತಮದಡ್ಡಿ, ಉರುಸ್‌ ಸಮಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT