ಬುಧವಾರ, ಅಕ್ಟೋಬರ್ 28, 2020
23 °C

ಸವದತ್ತಿ: 16,382 ಹೆಕ್ಟೇರ್‌ ಆಹುತಿ

ಬಸವರಾಜ ಶಿರಸಂಗಿ Updated:

ಅಕ್ಷರ ಗಾತ್ರ : | |

Prajavani

ಸವದತ್ತಿ: ತಾಲ್ಲೂಕಿನಲ್ಲಿ 16,382 ಹೆಕ್ಟೇರ್‌ ಬೆಳೆಯನ್ನು ಮಳೆ ಆಹುತಿ ಪಡೆದಿದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳಿಂದ ಜಂಟಿ ಬೆಳೆ ಹಾನಿ ಸಮೀಕ್ಷೆ ನಡೆಸಲಾಗಿದೆ. ಹೆಸರು, ಹತ್ತಿ, ಗೋವಿನಜೋಳ, ಉದ್ದು, ಸೋಯಾಅವರೆ, ಈರುಳ್ಳಿ, ಕಬ್ಬು ಬೆಳೆ ಸಹಿತ ಒಟ್ಟು 70,749 ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆಯಾಗಿದೆ.

ಅತಿವೃಷ್ಟಿಯಿಂದ ಹೆಸರು, ಉದ್ದು, ಸೋಯಾಅವರೆಗೆ ಅತಿ ಹೆಚ್ಚು ಹಾನಿಯಾಗಿದೆ. ಗೋವಿನಜೋಳ ಮತ್ತು ಹತ್ತಿ ಬೆಳೆಗಳ ಹಾನಿ ಪ್ರಮಾಣ  ಕಡಿಮೆಯಿದೆ. ಜೂನ್‌ 1ರಿಂದ ಸೆ.21ರವರೆಗೆ 282 ಮಿ.ಮೀ. ಮಳೆ ಸುರಿಯಬೇಕಿತ್ತು. ಆದರೆ ಶೇ 21ರಷ್ಟು ಹೆಚ್ಚಾಗಿ ಅಂದರೆ 482 ಮಿ.ಮೀ. ಮಳೆ ಸುರಿದಿದೆ. ಸೆ.1ರಿಂದ ಬುಧವಾರದವರೆಗೆ 68 ಮಿ.ಮೀ. ಆಗಬೇಕಿತ್ತು. ಆದರೆ, 136 ಮಿ.ಮೀ. ಸುರಿದಿದೆ. ಆಗಾಗ ಮತ್ತೆ ಮಳೆಯಾಗುತ್ತಿರುವುದು ಅನ್ನದಾತರ ಆತಂಕ ಮತ್ತಷ್ಟು ಹೆಚ್ಚಿಸಿದೆ.

***

4 ಎಕರೆಯಲ್ಲಿ ಬೆಳೆದ ಈರುಳ್ಳಿ ಅತಿಯಾದ ಮಳೆಯಿಂದ ಕೊಳೆತಿದೆ. ಸಾಲ ಉಳಿದಿದೆ, ಭವಿಷ್ಯಕ್ಕೆ ಭಗವಂತನೆ ಗತಿ ಎನ್ನುವಂತಹ ಸ್ಥಿತಿ ಬಂದಿದೆ

-ಫಕ್ಕೀರಪ್ಪ ಬನಚೋಡಿ, ಕುರುವಿನಕೊಪ್ಪ ರೈತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು