ಸವದತ್ತಿ: ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಸೋಮವಾರ ಬಸವ ಜಯಂತಿ ನಿಮಿತ್ತ ಜೋಡೆತ್ತುಗಳ, ಜಗದ್ಗುರು ಬಸವೇಶ್ವರರ ಭಾವಚಿತ್ರ ಮತ್ತು ವಾದ್ಯಮೇಳಗಳ ಭವ್ಯ ಮೆರವಣಿಗೆಗೆ ಶಾಸಕ ವಿಶ್ವಾಸ್ ವೈದ್ಯ ಚಾಲನೆ ನೀಡಿದರು.

‘ಬಸವೇಶ್ವರ ಮಹಾರಾಜ ಕೀ ಜೈ’ ಎನ್ನುವ ಘೋಷವಾಕ್ಯಗಳನ್ನು ಕೂಗಿ ನೆರೆದವರಲ್ಲಿ ಉತ್ಸಾಹ ತುಂಬಿದರು. ಬಳಿಕ ಮಾತನಾಡಿದ ಅವರು, ‘ಸಮಾಜದಲ್ಲಿನ ಅನಿಷ್ಠ ಪದ್ಧತಿ ಹಾಗೂ ಮೌಢ್ಯದ ವಿರುದ್ಧ ಹೋರಾಟ ನಡೆಸಿ ಸರ್ವರಿಗೂ ಸಮ ಬಾಳು, ಸಮ ಪಾಲು ಎಂಬ ತತ್ವದಡಿ ಸಮಾಜ ಸುಧಾರಣೆಗೆ ವಚನ ಸಾಹಿತ್ಯದ ಮೂಲಕ ಕ್ರಾಂತಿ ಮೊಳಗಿಸಿದವರು ಬಸವಣ್ಣ. ಇವರು ಸಮಾನತೆ ಮತ್ತು ಪ್ರಜಾಪ್ರಭುತ್ವದ ಪರಿಕಲ್ಪನೆ ರೂಪಗೊಳಿಸಿದರು. ಬಸವಾದಿ ಶರಣರ ಅರಿವು, ಆಚಾರ, ಜೀವನಾನುಭವಗಳಿಂದ ವಚನಗಳನ್ನು ರಚಿಸುವ ಮೂಲಕ ಸಾಮಾನ್ಯರ ಬದುಕು ಹಸನುಗೊಳಿಸಲು ಮುಂದಾದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ, ಅವರ ಪ್ರಸಿದ್ಧಿಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಿದ್ದು ಶ್ಲಾಘನೀಯ’ ಎಂದರು.

ಬಿಡಿಸಿಸಿ ನಿರ್ದೇಶಕ ವಿರೂಪಾಕ್ಷ ಮಾಮನಿ, ‘ಶಾಂತಿ ಮತ್ತು ಸಮಾನತೆಯ ಸಂದೇಶಗಳಿಂದ ಜಗಜ್ಯೋತಿಯಾಗಿ ಬೆಳೆದವರು ಬಸವಣ್ಣ. ಅವರ ಅಂದಿನ ವಚನ ಸಾಹಿತ್ಯದ ಮೆಲುಕುಗಳು ಇಂದು ನಿತ್ಯ ಜೀವನದ ಕಾನೂನುಗಳಾಗಿವೆ’ ಎಂದು ಹೇಳಿದರು.

ಗಾಂಧಿ ಚೌಕ ಹತ್ತಿರ ಸವದತ್ತಿಯ ಶರಣ ಸಂಗಮದ ಪ್ರಮುಖ ಬಸವರಾಜ ಕಪ್ಪಣ್ಣವರ ಅವರಿಂದ ಮೆರವಣಿಗೆಯಲ್ಲಿ ಪಾಲ್ಗೊಂಡ ಜಾನುವಾರುಗಳಿಗೆ ದಾನ ನೀಡಲಾಯಿತು. ಮೆರವಣಿಗೆಯಲ್ಲಿ ಸೇರಿದ ಅಸಂಖ್ಯಾತ ಜನರಿಗೆ ಶರಣ ಸಂಗಮದಿಂದ ಮಜ್ಜಿಗೆ ದಾಸೋಹ ನಡೆಯಿತು.

ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ, ಪಿಐ ಸುರೇಶ ಬೆಂಡೆಗುಂಬಳ, ಪಿಎಸ್ಐ ಕೆ.ಎಂ. ಬನ್ನೂರ, ಬಸವರಾಜ ಅರಮನಿ, ಮಂಜುನಾಥ ಪಾಚಂಗಿ, ಅಲ್ಲಮಪ್ರಭು ಪ್ರಭುನವರ, ಡಾ. ಎನ್.ಸಿ. ಬೆಂಡಿಗೇರಿ, ಪೌರಾಯುಕ್ತ ಸಂಗನಬಸಯ್ಯ, ಲಕ್ಷ್ಮಣರಾವ ಕುಲಕರ್ಣಿ, ಎಲ್.ಎಸ್. ನಾಯಕ, ನಾಗಪ್ಪ ಪ್ರಭುನವರ, ಭರಮಣ್ಣ ಅಣ್ಣಿಗೇರಿ, ರಾಜಶೇಖರ ನಿಡವಣಿ, ಬಸವರಾಜ ಪುಟ್ಟಿ, ನಿಂಗಪ್ಪ ಮೇಟಿ, ಎಫ್.ವೈ. ಗಾಜಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-21-1478110929

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.