ಸವದತ್ತಿ: ಕೃಷಿ ಅಭಿವೃದ್ಧಿಯಾದರೆ ಆಹಾರ ಉತ್ಪಾದನೆ ಹೆಚ್ಚುತ್ತದೆ. ಗ್ರಾಮೀಣ ಆರ್ಥಿಕತೆ ಬಲವಾಗುತ್ತದೆ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಅಶ್ವತ್ ವೈದ್ಯ ಹೇಳಿದರು.

ಇಲ್ಲಿನ ಟಿಎಪಿಸಿಎಂಎಸ್ನಲ್ಲಿ ಶನಿವಾರ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರ ಕಲ್ಯಾಣವೇ ದೇಶದ ಆರ್ಥಿಕ ಭದ್ರತೆಯ ಮೂಲ ಆಧಾರವಾಗಿದೆ. ಕೃಷಿಯೇ ದೇಶದ ಬಹುಜನರ ಜೀವನೋಪಾಯವಾಗಿದ್ದು, ಆಹಾರ ಭದ್ರತೆ ಹಾಗೂ ಗ್ರಾಮೀಣ ಆರ್ಥಿಕ ಚಟುವಟಿಕೆಗಳಿಗೆ ಕೃಷಿಯೇ ಬೆನ್ನೆಲುಬಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯ, ಬೆಳೆ ನಾಶ, ಸಾಲ ಬಾಧೆ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿವೆ ಎಂದರು.

ಕೃಷಿ ಎಡಿ ಎಸ್.ವಿ. ಪಾಟೀಲ ಮಾತನಾಡಿ, ಭೂಮಿಯಲ್ಲಿನ ನೀರಿನ ತೇವಾಂಶ ಪರೀಕ್ಷಿಸಿ ಹದವಿದ್ದರೆ ಮಾತ್ರ ರೈತರು ಬಿತ್ತನೆ ಕಾರ್ಯ ನಡೆಸಬೇಕು. ಈ ವರ್ಷ ಯೂರಿಯಾ ರಸಗೊಬ್ಬರವನ್ನು ಯೂರಿಯಾ ಡಿಸ್ಟ್ರಿಬ್ಯೂಷನ್ ಆ್ಯಪ್ ಮುಖಾಂತರ, ಎಫ್ಐಡಿ ( ರೈತರ ಗುರುತಿನ ಸಂಖ್ಯೆ) ಇರುವ ರೈತರಿಗೆ, ಜಮೀನು ಹೊಂದಿರುವ ಆಧಾರದ ಮೇಲೆ ಎಕರೆಗೆ 1 ಚೀಲ ರಸಗೊಬ್ಬರ ವಿತರಿಸಲಾಗುವುದು. ಎಫ್ಐಡಿ ಇಲ್ಲದಿದ್ದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಮಾಡಿಸಿಕೊಳ್ಳಬಹುದು ಎಂದರು.

ತಾಲ್ಲೂಕಿನಲ್ಲಿ ಒಟ್ಟು 13 ಬಿತ್ತನೆ ಬೀಜ ವಿತರಣಾ ಕೇಂದ್ರಗಳನ್ನು ತೆರೆದಿದ್ದು, ಹೆಸರು, ಉದ್ದು, ಗೋವಿನ ಜೋಳ ಬೀಜಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದೆ. ಸಾವಯವ, ನೈಸರ್ಗಿಕ ಕೃಷಿ ಅನುಸರಿಸಿ, ಮಣ್ಣು, ಮನುಷ್ಯ ಹಾಗೂ ಪರಿಸರದ ಆರೋಗ್ಯ ರಕ್ಷಿಸಿ ಭೂಮಿಯನ್ನು ಫಲವತ್ತತೆಯಿಂದ ಬೆಳೆಸಿ ಎಂದರು.

ತಹಶೀಲ್ದಾರ್ ಎಮ್.ಎನ್. ಹೆಗ್ಗನ್ನವರ, ಭರಮಣ್ಣ ಅಣ್ಣಿಗೇರಿ, ಶಿವಕುಮಾರ ರಾಠೋಡ, ಚಿದಂಬರ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.