ಸವದತ್ತಿ: ಆನ್ಲೈನ್ನಲ್ಲಿ ಭಾರಿ ರಿಯಾಯಿತಿಯೊಂದಿಗೆ ಔಷಧಿ ಮಾರಾಟ ಮಾಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಇಲ್ಲಿನ ಔಷಧಿ ಪೂರೈಕೆದಾರರ ಸಂಘದ ಸದಸ್ಯರು ಬುಧವಾರ ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ ನಡೆಸಿದರು. ನಂತರ ಗ್ರೇಡ್-2 ತಹಶೀಲ್ದಾರ್ ಎಂ.ಎನ್. ಮಠದ ಅವರಿಗೆ ಮನವಿ ಸಲ್ಲಿಸಿದರು.

ನಾವು ವೈದ್ಯರ ಸಲಹೆ ಮೇರೆಗೆ ಮಾತ್ರ ಔಷಧಿಗಳನ್ನು ವಿತರಿಸುತ್ತೇವೆ. ಶಾಸನಬದ್ಧ ನಿಯಮಗಳನ್ನು ಅನುಸರಿಸುತ್ತೇವೆ. ಆದರೆ ಆನ್ಲೈನ್ ಮಾರಾಟದಲ್ಲಿ ಇವುಗಳನ್ನು ಪಾಲಿಸುತ್ತಿಲ್ಲ. ಕಾರಣ ಯುವಕರು ಮತ್ತು ವ್ಯಸನಿಗಳಿಗೆ ನಿಷೇಧಿತ ಔಷಧಿಗಳು ಸುಲಭ ರೀತಿಯಲ್ಲಿ ಸಿಗುತ್ತಿವೆ. ಇದು ಸಮಾಜದ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಹೇಳಿದರು.

ಕೇಂದ್ರ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕೆಂದು ಅವರು ಮನವಿಯಲ್ಲಿ ಕೋರಿದರು.

ಮಹೇಶ ಮುಂಗರವಾಡಿ, ಅಮರೇಶ್ವರ ನಾವದಗಿ, ನಾರಾಯಣ ಪೋತದಾರ, ಜ್ಞಾನದೇವ ಕಾತ್ರಾಳ, ಈರಣ್ಣ ಕುರಟ್ಟಿ, ಶಂಕರ ಬೋನಗೇರಿ, ಗುರು ವಾಂಗಿ, ಮುನ್ನಾ ಗೋಲಂದಾಜ, ಸಂತೋಷ ಸೇಠ, ಶ್ರೀಕಾಂತ ತೊರಗಲ್ಲಮಠ, ಬಸವರಾಜ ಅಳಗೋಡಿ, ಸಂದೀಪ ಸಬನೀಸ್ ಹಾಗೂ ಪ್ರಮುಖರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-21-1009861287

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.