ಅಥಣಿ (ಬೆಳಗಾವಿ ಜಿಲ್ಲೆ): ಭಾರತೀಯ ಅರಣ್ಯ ಸೇವೆಯ (ಐಎಫ್ಎಸ್) 2025ನೇ ಸಾಲಿನ ಪರೀಕ್ಷೆಯಲ್ಲಿ ತಾಲ್ಲೂಕಿನ ಸವದಿ ಗ್ರಾಮದ ಬಸವರಾಜ ಕೆಂಪವಾಡ (25) ಅವರು ಮೊದಲ ರ್ಯಾಂಕ್ ಪಡೆದಿದ್ದಾರೆ.

ಕೃಷಿ ಕುಟುಂಬದ ಯುವಕರೊಬ್ಬರು ಮಾಡಿದ ಸಾಧನೆ ಇಡೀ ಊರಲ್ಲೇ ಸಂಭ್ರಮ ಮೂಡಿಸಿದೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಶುಕ್ರವಾರ ಫಲಿತಾಂಶ ಪ್ರಕಟಿಸಿದೆ.

ಬಾಲ್ಯದಿಂದಲೂ ಕಲಿಕೆಯಲ್ಲಿ ಮುಂದಿದ್ದ ಬಸವರಾಜ ಸವದಿಯ ಖಾಸಗಿ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ, ರಾಯಬಾಗ ತಾಲ್ಲೂಕಿನ ಅಳಗವಾಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗೆ ಅಭ್ಯಸಿಸಿದರು.

ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಖಾಸಗಿ ಕಾಲೇಜಿನಲ್ಲಿ ಪಿಯುಸಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸರ್ಕಾರಿ ಕಾಲೇಜಿನಲ್ಲಿ ಬಿ.ಎಸ್ಸಿ (ಅರಣ್ಯ) ಓದಿದರು. ನಂತರ ಅಧ್ಯಯನಕ್ಕಾಗಿ ಬೆಂಗಳೂರಿನತ್ತ ಮುಖ ಮಾಡಿದರೂ ಕೋಚಿಂಗ್ ಪಡೆಯದೇ ಸ್ವಯಂ ಅಧ್ಯಯನ ಕೈಗೊಂಡರು.

ಐಎಫ್ಎಸ್ ಪರೀಕ್ಷೆಯಲ್ಲಿ ಸಾಧನೆ ಮೆರೆದ ಅವರು ‘ಪ್ರಜಾವಾಣಿ’ ಜತೆಗೆ ಸಂತಸ ಹಂಚಿಕೊಂಡರು.

‘ನಮ್ಮದು ಕೃಷಿ ಕುಟುಂಬ. ಸಹಜವಾಗಿ ಅರಣ್ಯ ಸಂರಕ್ಷಣೆಯತ್ತ ಆಸಕ್ತಿ ಇತ್ತು. ಹಾಗಾಗಿಯೇ ಬಿ.ಎಸ್ಸಿ (ಅರಣ್ಯ) ಅಭ್ಯಸಿಸಿ, ಐಎಫ್ಎಸ್ ಪರೀಕ್ಷೆಗಾಗಿ ತಯಾರಿ ನಡೆಸಿದೆ. ಕೋಚಿಂಗ್ ಸೆಂಟರ್ಗೆ ಹೋಗದೆ ಸಾಧಿಸುವ ಛಲವಿತ್ತು. ಹಾಗಾಗಿ ಬೆಂಗಳೂರಿನಲ್ಲಿ ರೂಮ್ ಮಾಡಿಕೊಂಡು, ಗ್ರಂಥಾಲಯದಲ್ಲಿ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 12ರವರೆಗೆ ಅಧ್ಯಯನ ಮಾಡುತ್ತಿದ್ದೆ. ಎರಡು ವರ್ಷಗಳ ನಿರಂತರ ಪ್ರಯತ್ನಕ್ಕೀಗ ಫಲ ಸಿಕ್ಕಿದೆ’ ಎಂದು ಬಸವರಾಜ ಸಂತಸ ಹಂಚಿಕೊಂಡರು.

‘ಇದು ನನ್ನ ಎರಡನೇ ಪ್ರಯತ್ನ. ತಯಾರಿ ಮಾಡಿಕೊಳ್ಳದೆ ಮೊದಲ ಪೂರ್ವಭಾವಿ ಪರೀಕ್ಷೆಯಲ್ಲೂ ಉತ್ತೀರ್ಣ ಆಗಿರಲಿಲ್ಲ. ಆಗಿನ ತಪ್ಪು ಸರಿಪಡಿಸಿಕೊಂಡು, ಈಗ ಯೋಜನಾಬದ್ಧವಾಗಿ ಅಭ್ಯಸಿಸಿದೆ’ ಎಂದರು.

‘ಎರಡು ವರ್ಷ ಯಾವುದೇ ಸಮಾರಂಭಕ್ಕೆ ಹೋಗಿರಲಿಲ್ಲ. ಇಡೀ ದಿನ ಅಧ್ಯಯನಕ್ಕಾಗಿ ಮೀಸಲಿಟ್ಟಿದ್ದೆ. ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ದೂರವಿದ್ದೆ. ಆದರೆ, ಯೂಟ್ಯೂಬ್ನಲ್ಲಿ ಅಧ್ಯಯನಕ್ಕೆ ಪೂರಕ ಮಾಹಿತಿ ಬಳಸಿಕೊಳ್ಳುತ್ತಿದ್ದೆ’ ಎಂದು ಹೇಳಿದರು.

‘ಐಎಎಸ್ ಅಧಿಕಾರಿ ಆಗಬೇಕೆಂಬ ಆಸೆಯಿಂದ ಈಚೆಗೆ ಎದುರಿಸಿದ್ದ ಪರೀಕ್ಷೆಯಲ್ಲಿ ನಿರಾಸೆಯಾಗಿತ್ತು. ಆದರೆ, ಈ ಪರೀಕ್ಷೆ ಫಲಿತಾಂಶದ ಸಂತಸ ಅದನ್ನೆಲ್ಲ ಮರೆಯಿಸಿದೆ. ನನ್ನ ಸಾಧನೆಯನ್ನು ಹೆತ್ತವರು, ಸ್ನೇಹಿತರು ಮತ್ತು ನನಗೆ ಪ್ರಾಥಮಿಕ ವಿಭಾಗದಿಂದ ಪದವಿ ಹಂತದವರೆಗೆ ಮಾರ್ಗದರ್ಶನ ನೀಡಿದ ಎಲ್ಲ ಗುರುವೃಂದಕ್ಕೆ ಸಮರ್ಪಿಸುತ್ತೇನೆ’ ಎಂದರು.

ಭವಿಷ್ಯದಲ್ಲಿ ಐಎಎಸ್ ಅಧಿಕಾರಿ ಆಗಬೇಕು ಎಂಬುದೂ ಬಸವರಾಜ ಅವರ ಕನಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.