ಸವದತ್ತಿ: ಕ್ಷಯರೋಗ ಕುರಿತಾದ ತಪ್ಪು ಕಲ್ಪನೆಗಳಿಂದ ದೂರವಿರಿ. ರೋಗದ ಲಕ್ಷಣ ಕಂಡಲ್ಲಿ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೌನೇಶ್ವರ ಅರ್ಕಸಾಲಿ ಹೇಳಿದರು.

ವಿವೇಕಾನಂದ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜರುಗಿದ ವಿಶ್ವ ಕ್ಷಯರೋಗ ನಿರ್ಮೂಲನೆ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಸಿದ್ದೇಶ್ವರ ಡೋಣಿ ಮಾತನಾಡಿ, ಎರಡು ವಾರಕ್ಕಿಂತ ಮೇಲ್ಪಟ್ಟ ಕೆಮ್ಮು, ಸಾಯಂಕಾಲ ಜ್ವರ, ಹಸಿವು ಆಗದದೇ ಇರುವುದು ಕ್ಷಯ ರೋಗದ ಆರಂಬಿಕ ಲಕ್ಷಣಗಳಾಗಿವೆ ಎಂದರು.

ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಡಾ.ರಾಜೇಂದ್ರ ಚಟ್ನಿಸ್ ಮಾತನಾಡಿದರು. ರಾಜಶೇಖರ ತುರಾದಿ, ವಿಠ್ಠಲ ಮಾಳೇದ, ಮುರಗೇಶ ಕರಜಗಿಮಠ, ಮಂಜುನಾಥ ಹಟ್ಟಿ, ವಿಜಯಲಕ್ಷ್ಮಿ ಹಳ್ಳಿಕೇರಿ, ಪುಷ್ಪಾ ನರೋಟಿ ಹಾಗೂ ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-21-57093840

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.