ಸವದತ್ತಿ: ಸವದತ್ತಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಎರಡನೇ ದಿನ ಮಂಗಳವಾರ ಬೆಳಿಗ್ಗೆಯಿಂದ ರೈತರ ಹಾಗೂ ಪ್ರಮುಖರ ಮನೆಗೆ ತೆರಳಿ ಉಡಿ ತುಂಬುವ ಕಾರ್ಯಕ್ರಮ ಅದ್ದೂರಿಯಾಗಿ ಆರಂಭವಾಯಿತು.

ಗ್ರಾಮದೇವಿ ಪಲ್ಲಕ್ಕಿ ಹೊತ್ತು ಸಾಗಿದ ಭಕ್ತರು 16 ರೈತ ಕುಟುಂಬ, ಬಾಬುದಾರರು ಹಾಗೂ ಪ್ರಮುಖರಿರುವ ಬಂಡಿ ಓಣಿ, ಒಕ್ಕಲುತನ ಓಣಿ, ಪದಕಿ ಓಣಿ ಹಾಗೂ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಭ್ರಮದ ಮೆರವಣಿಗೆಯೊಂದಿಗೆ ಹೊನ್ನಾಟ ನಡೆಸಲಾಯಿತು.

ದೇವಿಯ ಜಾತ್ರಾ ಮೆರವಣಿಗೆಯಲ್ಲಿ ಪದಕಿ ಗಲ್ಲಿಯಲ್ಲಿ ಭಾಗವಹಿಸಿದ ಮಹಿಳೆಯರ ನೃತ್ಯ ನೋಡುಗರ ಗಮನ ಸೆಳೆಯಿತು. ಹಲವೆಡೆಯಿಂದ ಆಗಮಿಸಿದ್ದ ಕುಟುಂಬ ಸದಸ್ಯರು, ಸಂಬಂಧಿಕರು ಕುಣಿತಕ್ಕೆ ಹೆಜ್ಜೆ ಹಾಕಿದರು. ದೇವಿಯರ ಪಲ್ಲಕ್ಕಿಗಳ ಮೆರವಣಿಗೆ ಉದ್ದಕ್ಕೂ ಜೈ ಕಾರ ಹಾಗೂ ಉಧೋ ಉಧೋ ಘೋಷಣೆಗಳು ಮೊಳಗಿದವು.

ದೇವಿಯರ ಮೆರವಣಿಗೆ ಮಧ್ಯದಲ್ಲಿ ಪಲ್ಲಕ್ಕಿಗೆ ವಿವಿಧ ಮನೆಗಳ ಕುಟುಂಬದವರು ನೀರು ಹರಿಸಿ, ಪೂಜೆ, ಮಾಲಾರ್ಪಣೆ ಸಲ್ಲಿಸಿದರು. ಹರಕೆ ಹೊತ್ತವರೂ ಸಹ ಪಾಲ್ಗೊಂಡು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಹಾಗೂ ಹರಕೆ ತೀರಿಸಿದರು. ಕೊನೆಗೆ ದೇವಿಯರ ಪಲ್ಲಕ್ಕಿಗಳು ಕಟ್ಟಿ ಓಣಿಯ ಜಾತ್ರಾ ಉತ್ಸವದ ಕಟ್ಟೆಗೆ ಬಂದು ಸೇರಿದವು.

ಉದ್ಘಾಟನಾ ಕಾರ್ಯಕ್ರಮ: ಸೋಮವಾರ ಸಂಜೆ ಕಾಡಸಿದ್ದೇಶ್ವರ ವೇದಿಕೆಯಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವವನ್ನು ಶಾಸಕ ವಿಶ್ವಾಸ್ ವೈದ್ಯ ಉದ್ಘಾಟಿಸಿದರು. ಬಿಡಿಸಿಸಿ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು.

ಕಮೀಟಿ ಅಧ್ಯಕ್ಷ ವಿ.ಕೆ. ಮಾಮನಿ, ಕನ್ಹೇರಿ ಅದೃಶ್ಯ ಕಾಡಸಿದ್ಧೇಶ್ವರ ಶ್ರೀ ಮಾತನಾಡಿದರು. ನಯಾನಗರ ಸುಖದೇವಾನಂದ ಆಶ್ರಮದ ಸಿದ್ಧಲಿಂಗ ಶ್ರೀ, ಮೂಲಿಮಠದ ಮಲ್ಲಿಕಾರ್ಜುನ ಶ್ರೀ, ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಶ್ರೀ, ದಂಡಪಾಣಿ ದೀಕ್ಷಿತರು, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಭರಮಗೌಡ ಕಾಗೆ, ತಹಶೀಲ್ದಾರ ಎಂ.ಎನ್. ಹೆಗ್ಗನ್ನವರ, ಪೌರಾಯುಕ್ತ ಸಂಗನಬಸಯ್ಯ, ಇಒ ಆನಂದ ಬಡಕುಂದ್ರಿ ಹಾಗೂ ಪ್ರಮುಖರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-21-2032227683

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.