ಸವದತ್ತಿ: ನೂತನ ತಂತ್ರಜ್ಞಾನ ಹಾಗೂ ಸಿಇಐಆರ್ ಪೋರ್ಟಲ್ ವ್ಯವಸ್ಥೆಯ ಸಹಾಯದಿಂದ ಕಳುವಾದ ಮೊಬೈಲ್ಗಳನ್ನು ತ್ವರಿತವಾಗಿ ಪತ್ತೆ ಹಚ್ಚುವುದು ಸಾಧ್ಯವಾಗುತ್ತಿದೆ. ಆದಾಗ್ಯೂ ಜನತೆ ಎಚ್ಚರಿಕೆಯಿಂದ ಮೊಬೈಲ್ ಬಳಕೆ ಮಾಡಬೇಕೆಂದು ಡಿವೈಎಸ್ಪಿ ಚಿದಾನಂದ ಮಡಿವಾಳರ ಹೇಳಿದರು.

ಕಳುವಾದ 52 ಮೊಬೈಲ್ ಗಳನ್ನು ಸೋಮವಾರ ಇಲ್ಲಿನ ಪೊಲೀಸ್ ಠಾಣೆಯ ಆವರಣದಲ್ಲಿ ಮಾಲಿಕರಿಗೆ ಹಸ್ತಾಂತರಿಸಲು ಜರುಗಿದ ಸಭೆಯಲ್ಲಿ ಮಾತನಾಡಿದರು.

ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಿ ಸೈಬರ್ ವಂಚನೆಗಳ ಬಗ್ಗೆ ಜಾಗರೂಕರಾಗಿರ ಬೇಕು ಎಂದು ಸಲಹೆ ನೀಡಿದ ಅವರು, ಪೊಲೀಸ್ ಇಲಾಖೆ ಸಾರ್ವಜನಿ ಕರ ಸೇವೆಗೆ ಸದಾ ಸಿದ್ಧವಾಗಿದೆ. ಕಳೆದುಹೋದ ವಸ್ತುಗಳ ಕುರಿತು ತಕ್ಷಣ ಮಾಹಿತಿ ನೀಡಿದರೆ ಶೀಘ್ರ ಪತ್ತೆ ಕಾರ್ಯಾಚರಣೆ ಕೈಗೊಳ್ಳಲು ಅನುಕೂಲವಾಗುತ್ತದೆ. ಮೊಬೈಲ್ ಕಳೆದುಹೋದ ತಕ್ಷಣ ಸಾರ್ವಜನಿಕರು ಸಮೀಪದ ಪೊಲೀಸ್ ಠಾಣೆಗೆ ತಕ್ಷಣ ದೂರು ನೀಡಬೇಕು. ಹಲವರು ಮೊಬೈಲ್ ಸಿಗುವುದಿಲ್ಲ ಎಂಬ ನಿರಾಶೆಯಿಂದ ದೂರು ದಾಖಲಿಸುವುದಿಲ್ಲ. ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಮೊಬೈಲ್ ಕಳೆದುಹೋಗಿರುವ ಕುರಿತು ಬಂದ ದೂರುಗಳ ಆಧಾರದಲ್ಲಿ ವಿಶೇಷ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಮಾಹಿತಿ ನೀಡಿದರು.

ಪತ್ತೆಗಾಗಿ ಎಸ್.ಪಿ ಹೆಚ್ಚುವರಿ ಎಸ್.ಪಿ ಹಾಗೂ ರಾಮದುರ್ಗ ಡಿವೈಎಸ್ಪಿ ಇವರ ಮಾರ್ಗದರ್ಶನದಲ್ಲಿ ಇಲ್ಲಿನ ಪಿಆಯ್ ಸುರೇಶ ಬೆಂಡೆಗುಂಬಳ ನೇತೃತ್ವದಲ್ಲಿ ಪಿಎಸ್ಐ ಕಲ್ಮೇಶ ಬನ್ನೂರ, ಪಿಎಸ್ಐ ಎಲ್.ಆರ್. ಗೌಡಿ ಮತ್ತು ಸಿಬ್ಬಂದಿಗಳಾದ ಉದ್ದಪ್ಪ ಪೂಜೇರ, ಅಮರ ಸಾರಾಪೂರೆ, ಮಹೇಶ ಮಾಳಳ್ಳಿ, ವಿನೋದ ದೇಸಾಯಿಪಟ್ಟಿ ತಂಡವು ಕಳುವಾದ ಮೊಬೈಲ್ ಪತ್ತೆ ಮಾಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-21-1973838551

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.