ಮಲ್ಲಮ್ಮನ ಬೆಳವಡಿ (ಬೆಳಗಾವಿ ಜಿಲ್ಲೆ): ಗ್ರಾಮದಲ್ಲಿ ಶನಿ ದೇವರ ಮೂರ್ತಿ ಎಂದು ಶತಮಾನಗಳಿಂದ ಪೂಜೆ ಮಾಡಿಕೊಂಡು ಬಂದಿದ್ದ ವೀರಗಲ್ಲು ಒಂದನ್ನು 9ನೇ ತರಗತಿ ವಿದ್ಯಾರ್ಥಿನಿ ಲಕ್ಷ್ಮೀ ಪ್ರಕಾಶ ಹುಂಬಿ ಪತ್ತೆ ಮಾಡಿದ್ದಾಳೆ.

ಪ್ರತಿ ದಿನ ದೇವಸ್ಥಾನಕ್ಕೆ ಬರುತ್ತಿದ್ದ ಬಾಲಕಿ ಕಲ್ಲಿನ ಮೂರ್ತಿಯನ್ನು ಈಚೆಗೆ ಸ್ವಚ್ಛಗೊಳಿಸಿದಳು. ಶಾಲೆಯಲ್ಲಿ ಕಲಿತ ಇತಿಹಾಸದ ಪಾಠಕ್ಕೆ ಅದನ್ನು ಹೋಲಿಕೆ ಮಾಡಿ ನೋಡಿದಳು. ಛತ್ರಪತಿ ಶಿವಾಜಿಯ ಸೈನಿಕರು ಬೆಳವಡಿಯ ಸಂಸ್ಥಾನದ ಗೋವುಗಳನ್ನು ಕದ್ದು ಓಡಿಸಿಕೊಂಡು ಹೋಗುವಾಗ ಮಲ್ಲಮ್ಮ ತನ್ನ ಸೈನ್ಯದೊಂದಿಗೆ ಹೋರಾಡಿ ಅವುಗಳನ್ನು ರಕ್ಷಣೆ ಮಾಡಿದ ವೀರಗಲ್ಲು ಇರಬಹುದು ಎಂಬ ಸಂದೇಹ ಬಂತು. ವಿಷಯವನ್ನು ತಮ್ಮ ತಂದೆಗೆ ತಿಳಿಸಿದಳು. ಹಿರಿಯರು ಬಂದು ಪರಿಶೀಲಿಸಿದಾಗ ಅದು ಐತಿಹಾಸಿಕ ಕುರುಹು ಎಂದು ಗೊತ್ತಾಗಿದೆ.

‘ವೀರಗಲ್ಲು ಪತ್ತೆ ಹಚ್ಚಿದ ಬಾಲಕಿಯ ಪ್ರಜ್ಞೆ ಪ್ರಶಂಸಾರ್ಹ. ಆದರೆ, ಇದು ಬೆಳವಡಿ ಮಲ್ಲಮ್ಮನಿಗೆ ಸಂಬಂಧಿಸಿದ್ದಲ್ಲ. ಆ ಸಂಸ್ಥಾನದ ವೀರನೊಬ್ಬನಿಗೆ ಸಂಬಂಧಿಸಿದೆ. ಶಾಸನ ತಜ್ಞರಾದ ಹನುಮಾಕ್ಷಿ ಗೋಗಿ ಹಾಗೂ ಲಕ್ಷ್ಮಣ ತೇಲಗಾವಿ ಅವರೂ ಇದನ್ನು ಖಾತ್ರಿ ಮಾಡಿದ್ದಾರೆ’ ಎಂದು ಬೆಳವಡಿ ಸಂಸ್ಥಾನ ಹಾಗೂ ದೇಸಗತಿಗಳ ಕುರಿತು ಪಿಎಚ್ಡಿ ಮಾಡಿರುವ ಬಾಳಪ್ಪ ಈರಪ್ಪ ಚಿನಗುಡಿ ಅಭಿಪ್ರಾಯಪಟ್ಟಿದ್ದಾರೆ.

‘12 ಅಥವಾ 13ನೇ ಶತಮಾನದ ಈ ವೀರಗಲ್ಲು ಮೂರು ಭಾಗ ಹೊಂದಿದೆ. ಗೋವುಗಳ ರಕ್ಷಣೆಗಾಗಿ ವೀರನು ಯುದ್ಧ ಮಾಡುತ್ತಿರುವುದು ಕೆಳಭಾಗದಲ್ಲಿದೆ. ಎರಡನೇ ಭಾಗದಲ್ಲಿ ವೀರಮರಣ ಹೊಂದಿದ ಅವನನ್ನು ವಿಮಾನ (ಪಲ್ಲಕ್ಕಿ)ದಲ್ಲಿ ಕುಳ್ಳಿರಿಸಿ ಅಪ್ಸರೆಯರು ನೃತ್ಯ ಹಾಗೂ ಸಂಗೀತ ವಾದ್ಯಗಳೊಂದಿಗೆ ಕೈಲಾಸಕ್ಕೆ ಕರೆದುಕೊಂಡು ಹೋಗುವ ಕೆತ್ತನೆ ಇದೆ. ಮೇಲ್ಭಾಗದಲ್ಲಿ ವೀರನಿಗೆ ಸ್ವರ್ಗ ಪ್ರಾಪ್ತಿ ಆಗಿದ್ದು, ಅಲ್ಲಿ ಶಿವಲಿಂಗ, ನಂದಿ ಇದೆ. ಇಬ್ಬರು ದೇವಧೂತರು ಶಿವಲಿಂಗವನ್ನು ಪೂಜಿಸುತ್ತಿದ್ದಾರೆ. ಎಡ, ಬಲದಲ್ಲಿ ಸೂರ್ಯ– ಚಂದ್ರರ ಚಿತ್ರಗಳಿದ್ದು, ವೀರನ ಸಾಹಸವು ಸೂರ್ಯ– ಚಂದ್ರ ಇರುವವರೆಗೂ ಶಾಶ್ವತ ಎಂಬುದನ್ನು ಬಿಂಬಿಸುತ್ತಿದೆ. ವೀರಗಲ್ಲಿನ ಮಧ್ಯದ ಪಟ್ಟಿಗಳಲ್ಲಿ ಶ್ಲೋಕಗಳು ಅಥವಾ ಅದಕ್ಕೆ ಸಂಬಂಧಿಸಿದ ವಿವರಣೆಗಳು ಇರಬಹುದು. ಅವು ಓದಲಾಗದಷ್ಟು ನಾಶವಾಗಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.