ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ ಸಭಾಂಗಣ ದೇಣಿಗೆ

₹15 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಸಭಾಂಗಣ ಕಟ್ಟಿಸಿಕೊಟ್ಟ ಸುರೇಶ ಯಾದವ
Last Updated 27 ಸೆಪ್ಟೆಂಬರ್ 2022, 4:41 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸಾಮಾಜಿಕ ಕಾರ್ಯಕರ್ತ ಸುರೇಶ ಯಾದವ ಅವರು ರಾಮತೀರ್ಥ‌ ನಗರದ ಕರ್ನಾಟಕ ಪಬ್ಲಿಕ್ ಶಾಲೆಗೆ ₹15 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಸಭಾಂಗಣ ನಿರ್ಮಿಸಿಕೊಟ್ಟಿದ್ದಾರೆ. ಇದರ ಉದ್ಘಾಟನಾ ಸಮಾರಂಭ ಸೆ.27ರಂದು ನಡೆಯಲಿದೆ.

ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಕೊಠಡಿಗಳ ಕೊರತೆ ಉಂಟಾಗಿತ್ತು. ವರಾಂಡದಲ್ಲೇ‌ ಮಕ್ಕಳಿಗೆ ಪಾಠ ಮಾಡಲಾಗುತ್ತಿತ್ತು. ಈ ಸಮಸ್ಯೆ ನೀಗಿಸಲು ಸುರೇಶ ಅವರು ಒಂದು ಸಭಾಂಗಣ ನಿರ್ಮಿಸಿಕೊಟ್ಟಿದ್ದಾರೆ. ಈ ಹಿಂದೆ ಕೂಡ ಅವರು ಇದೇ ಶಾಲೆಗೆ ಎರಡು ಶೌಚಗೃಹ ನಿರ್ಮಿಸಿಕೊಟ್ಟಿದ್ದರು.

2006ರಲ್ಲಿ ಈ ಶಾಲೆ ನಿರ್ಮಿಸಲಾ
ಗಿದೆ. ಆರಂಭದಲ್ಲಿ ಶಿವಾಲಯದ ಕಟ್ಟೆ ಮೇಲೆ ನಡೆಯುತ್ತಿತ್ತು. ಒಂದು ವರ್ಷದ ನಂತರ ಹೊಸ ಕಟ್ಟಡಕ್ಕೆ ಸ್ಥಳಾಂತರವಾಯಿತು. ಇಲ್ಲಿ 1ರಿಂದ 10ನೇ ತರಗತಿಯಲ್ಲಿ 703 ಮಕ್ಕಳು ಅಭ್ಯಸಿಸುತ್ತಿದ್ದಾರೆ. ಕೊಳಚೆ ಪ್ರದೇಶದ ಮಕ್ಕಳು ಹಾಗೂ ಬಡ ಮಕ್ಕಳೇ ಹೆಚ್ಚಾಗಿ ಬರುತ್ತಾರೆ. ಕನ್ನಡದ ಜೊತೆಗೆ ಆಂಗ್ಲ ಮಾಧ್ಯಮವೂ ಇದೆ.

ಕೊಠಡಿಗಳಾಗಿ ಬಳಸುತ್ತೇವೆ: ‘ನಮ್ಮಲ್ಲಿ ಪ್ರಾಥಮಿಕ ವಿಭಾಗಕ್ಕೆ ಆರು ಕೊಠಡಿಗಳಿವೆ. ಜಾಗದ ಕೊರತೆಯಿಂದ ತರಗತಿಗೆ ವರಾಂಡ ಬಳಸುತ್ತಿದ್ದೇವೆ. ಹಾಗಾಗಿ ತರಗತಿ ಕೊಠಡಿ ನಿರ್ಮಿಸಿ
ಕೊಡುವಂತೆ ದಾನಿಗಳನ್ನು‌ ಕೋರಿ
ದ್ದೇವು. ಇದಕ್ಕೆ ಸ್ಪಂದಿಸಿ ಸುರೇಶ ಯಾದವ ಸಭಾಂಗಣ ನಿರ್ಮಿಸಿದ್ದಾರೆ. ಅಲ್ಲಿ ಕಾರ್ಯಕ್ರಮ ಸಂಘಟಿಸುತ್ತೇವೆ. ಅಲ್ಲದೆ ಸಭಾಂಗಣವನ್ನೇ ವಿಭಾಗಿಸಿ, ಐದು ತರಗತಿ ಕೊಠಡಿಗಳಾಗಿ ಬಳಸಿ
ಕೊಳ್ಳಲು ತೀರ್ಮಾನಿಸಿದ್ದೇವೆ. ಇದರಿಂದಾಗಿ ಅನುಕೂಲವಾಗುತ್ತದೆ’ ಎಂದು ಮುಖ್ಯಶಿಕ್ಷಕಿ ಎನ್.ಆರ್.ಮೆಳವಂಕಿ 'ಪ್ರಜಾವಾಣಿ'ಗೆ ತಿಳಿಸಿದರು.

ಬುಡಾ ಆಯುಕ್ತರಿಂದ ದತ್ತು: ಜಿಲ್ಲಾಮಟ್ಟದ ಅಧಿಕಾರಿಗಳು ಒಂದು ಸರ್ಕಾರಿ ಶಾಲೆ ದತ್ತು ಪಡೆದು, ಶೈಕ್ಷಣಿಕ ಹಾಗೂ ಭೌತಿಕವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸಿದೆ. ಬುಡಾ ಆಯುಕ್ತ ಪ್ರೀತಂ‌‌ ನಸ್ಲಾಪುರೆ ಇದನ್ನು ಇತ್ತೀಚೆಗೆ ದತ್ತು ಪಡೆದಿದ್ದಾರೆ.

ಖಾಸಗಿ ಶಾಲೆ ಅಬ್ಬರದ ನಡುವೆಯೂ, ಈ ಶಾಲೆ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿದೆ. ಇದರ ಸುಧಾರಣೆಗೆ ದಾನಿಗಳೂ ಕೈಜೋ ಡಿಸುತ್ತಿದ್ದಾರೆ. ಸರ್ಕಾರವೂ ಇತ್ತ ಗಮನ ಹರಿಸಬೇಕು. ಹೆಚ್ಚಿನ‌ ಕೊಠಿ ನಿರ್ಮಿಸಿಕೊಡಬೇಕು ಎಂದು ಈರಣ್ಣ ಜಗಜಂಪಿ, ರಾಜೇಂದ್ರ ಹಲಗಿ, ಮಾರುತಿ ಭಾಸ್ಕರ್ ಮತ್ತು ದೊಂಢಿಬಾ ಮಾವರಕರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT