ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಬೀಜ: ಆತಂಕ ಬೇಡ 

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
Published 7 ಜೂನ್ 2023, 13:01 IST
Last Updated 7 ಜೂನ್ 2023, 13:01 IST
ಅಕ್ಷರ ಗಾತ್ರ

ಮೂಡಲಗಿ: ‘ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ತಾಲ್ಲೂಕಿನ ಅರಭಾವಿಯ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಧನದ ಬಿತ್ತನೆ ಬೀಜ ವಿತರಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಅರಭಾವಿ ರೈತ ಸಂಪರ್ಕ ಕೇಂದ್ರ, ಮೂಡಲಗಿ, ಯಾದವಾಡ, ಲಕ್ಷ್ಮೇಶ್ವರ, ಕುಲಗೋಡ ಉಪಕೇಂದ್ರಗಳಲ್ಲಿ ರೈತರಿಗೆ ಅನುಕೂಲವಾಗಲು ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಸೋಯಾಬಿನ್‌ 655 ಕ್ವಿಂಟಲ್, ಹೆಸರು 45 ಕ್ವಿಂಟಲ್‌, ಗೋವಿನಜೋಳ 513 ಕ್ವಿಂಟಲ್‌ ದಾಸ್ತಾನು ಇದೆ. ರೈತರು ಬೀಜಕ್ಕಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದರು.

‘ಈ ವರ್ಷ ಕಿಕ್‌ ಕೋಡ್‌ ಸ್ಕ್ಯಾನರ್‌ ಮೂಲಕ ರೈತರಿಗೆ ಬೀಜ ವಿತರಿಸಲಾಗುತ್ತಿದ್ದು, ಆಧಾರ್‌ ಕಾರ್ಡ್, ಭೂಮಿ ಉತಾರ, ಬ್ಯಾಂಕ್ ಪಾಸ್‌ಬುಕ್‌ ತೋರಿಸಿ ಬೀಜ ಪಡೆಯಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ ಹೇಳಿದರು.

ಬಸವರಾಜ ಗಾಡವಿ, ಕೃಷಿ ಅಧಿಕಾರಿ ಪರಸಪ್ಪ ಹುಲಗಬಾಳ, ವಿ.ಬಿ. ಬಿರಾಜ, ಪೂರ್ಣಿಮಾ ವಡ್ರಾಳೆ, ಸತೀಶ ಕೆಂಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT