ಮುನವಳ್ಳಿ: ಸಮೀಪದ ಕಟಕೋಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆಯಿತು.
ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಮಹಾದೇವಪ್ಪ ಆತಾರ, ಶ್ರೀಕಾಂತ ಢವಣ, ನಿಂಗಪ್ಪ ದಂಡಿನದುರ್ಗಿ, ಲಿಂಗರಾಜ ದೇಸಾಯಿ, ಸಂಗಮೇಶ ಶೆಟ್ಟಿಸದಾವರ್ತ, ಸಾಲಗಾರ ಮಹಿಳಾ ಕ್ಷೇತ್ರದಿಂದ ಗಿರೆವ್ವ ತೋಲಗಿ, ಸುಕನ್ಯಾ ಕುಂಬಾರ ಆಯ್ಕೆಯಾಗಿದ್ದಾರೆ.
ಅ ವರ್ಗದಿಂದ ಸಿ. ಸಿದ್ರಾಯಪ್ಪ ವಾದಿ, ಬ ವರ್ಗದಿಂದ ಬಾಳನಗೌಡ ಹೊಸಮನಿ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ನಾರಾಯಣ ಅಜ್ಜನ್ನವರ, ಪರಿಶಿಷ್ಟ ಪಂಗಡ ಮೀಸಲು ಕೇತ್ರದಿಂದ ವಿಠ್ಠಲ ಕಣವಿ, ಬಿನ್ ಸಾಲಗಾರರ ಕ್ಷೇತ್ರದಿಂದ ವೆಂಕಟೇಶ ಜಾಧವ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಸ್.ಎಸ್.ಕರಬಸವನವರ ಘೋಷಿಸಿದ್ದಾರೆ ಎಂದು ಸಂಘದ ವ್ಯವಸ್ಥಾಪಕ ರೆವಪ್ಪಾ ಹಾವಣ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.