ಬೆಳಗಾವಿ: ‘ವಿದ್ಯಾರ್ಥಿನಿಯರು ಸ್ವಯಂರಕ್ಷಣೆಗೆ ಪೂರಕ ಕೌಶಲ ಬೆಳೆಸಿಕೊಳ್ಳಬೇಕು. ಅದು ಅವರನ್ನು ಕವಚದಂತೆ ರಕ್ಷಿಸುತ್ತದೆ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ(ಆರ್ಸಿಯು) ಕುಲಸಚಿವ ಸಂತೋಷ ಕಾಮಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಆರ್ಸಿಯುನ ಮಹಿಳಾ ಸಬಲೀಕರಣ ಕೋಶ, ದೈಹಿಕ ಶಿಕ್ಷಣ ವಿಭಾಗ, ಯಕ್ಷಿತ್ ಯುವ ಫೌಂಡೇಶನ್ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ಸಂದರ್ಭ ವಿದ್ಯಾರ್ಥಿನಿಯರಿಗೆ ಸ್ವಯಂ ಸಂರಕ್ಷಣೆ ತರಬೇತಿ ಅಗತ್ಯವಿದೆ. ರಕ್ಷಣಾ ಮತ್ತು ಸುರಕ್ಷತಾ ತಂತ್ರ ಕಲಿಯುವುದರಿಂದ ತುರ್ತು ಸಂದರ್ಭ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಒಂದು ವಾರದ ತರಬೇತಿ ಆಯೋಜಿಸಿರುವುದು ಪ್ರಮುಖ ಹೆಜ್ಜೆ’ ಎಂದು ಶ್ಲಾಘಿಸಿದರು.

ಯಕ್ಷಿತ್ ಯುವ ಫೌಂಡೇಶನ್ ತರಬೇತುದಾರ ಶ್ರೀಪಾದ ರಾವ್ ಮಾತನಾಡುತ್ತಾ, ‘ಪಿ.ಎಂ ಉಷಾ ಮೇರು ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂಥ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿನಿಯರು ಮನಸ್ಸು ಪ್ರಕ್ಷುಬ್ಧಗೊಳಿಸದೆ ಶಾಂತಿಯಿಂದ ಇರಬೇಕು. ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಬೇಕು’ ಎಂದರು.

ಪ್ರಾಚಾರ್ಯ ಪ್ರೊ. ಎಸ್.ಸಿ.ಪಾಟೀಲ, ಮಹಿಳಾ ಸಬಲೀಕರಣ ಕೋಶದ ನಿರ್ದೇಶಕಿ ಪ್ರೊ. ಚಂದ್ರಿಕಾ ಕೆ.ಬಿ. ಮಾತನಾಡಿದರು.

ಸುಮನಾ ಮುದ್ದಾಪುರ, ರೋಹಿಣಿ ಪಾಟೀಲ, ಪದ್ಮಪ್ರಸಾದ ಹೂಲಿ, ಅವಧೂತ ಪಿ., ವೈಭವ ಪಾಟೀಲ, ಸ್ವಪ್ನಿಲ್ ಪಾಟೀಲ ಉಪಸ್ಥಿತರಿದ್ದರು. ಜಗದೀಶ ಗಸ್ತಿ ಸ್ವಾಗತಿಸಿದರು. ಕರುಣಾ ಅಮೃಸ್ಕರ್ ನಿರೂಪಿಸಿದರು. ಅಶ್ವಿನಿ ಜಾಮೂನಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.