ಶನಿವಾರ, ಆಗಸ್ಟ್ 24, 2019
28 °C
ವರಮಹಾಲಕ್ಷ್ಮಿ ಹಬ್ಬಕ್ಕೆ ಪೂಜಾ ಸಾಮಗ್ರಿಗಳ ಖರೀದಿ

ಮಳೆಯಲ್ಲಿಯೇ ಹೂ–ಹಣ್ಣುಗಳ ಮಾರಾಟ

Published:
Updated:
Prajavani

ಬೆಳಗಾವಿ: ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಆಚರಿಸುವ ಹಿನ್ನೆಲೆಯಲ್ಲಿ ಗುರುವಾರ ನಗರದ ಮಾರುಕಟ್ಟೆಯಲ್ಲಿ ಮಳೆಯ ಮಧ್ಯೆಯೇ ವ್ಯಾಪಾರ‍‍–ವಹಿವಾಟು ನಡೆಯಿತು. 

ಛತ್ರಿ ಹಿಡಿದು, ರೇನ್‌ ಕೋಟ್‌ಗಳನ್ನು ಧರಿಸಿ ಗ್ರಾಹಕರು ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿರುವುದು ಕಂಡುಬಂತು. ಹಬ್ಬ ಹಾಗೂ ಕಡಿಮೆ ಪೂರೈಕೆಯ ಹಿನ್ನೆಲೆಯಲ್ಲಿ ಹೂ–ಹಣ್ಣುಗಳನ್ನು ಹೆಚ್ಚಿನ ಬೆಲೆಗೆ ಮಾರಲಾ‌ಗುತ್ತಿದೆ.

ಚೆಂಡು ಹಾಗೂ ಸೇವಂತಿಗೆಯ ಮಾಲೆಗಳನ್ನು ₹ 10 ರಿಂದ ₹ 120 ರವರೆಗೂ ಮಾರಾಟ ಮಾಡಲಾಯಿತು. ಬಿಡಿಯಾಗಿಯೂ ಹೂಗಳನ್ನು ಮಾರಲಾಗುತ್ತಿದ್ದು, ಒಂದು ಚಿಕ್ಕ ಪಾವ್‌ ಹೂವಿಗೆ ₹ 30 ರಿಂದ 40 ದರ ಇದೆ. ಪೂಜೆಯ ವಿಶೇಷವಾದ ಕೇದಿಗೆ ಹೂವಿಗೆ ₹ 80 ರಿಂದ ₹ 150ರವರೆಗೂ ಬೆಲೆ ಇತ್ತು. 

ಸೇಬು, ಕಿತ್ತಳೆ, ಪೇರು, ಚಿಕ್ಕು, ದಾಳಿಂಬೆ ಹಣ್ಣುಗಳಿಗೂ ಗ್ರಾಹಕರಿಂದ ಬೇಡಿಕೆ ಕಂಡುಬಂತು. ತೆಂಗಿನಕಾಯಿ, ಹಸಿ ಶೇಂಗಾ, ಕುಂಬಳಕಾಯಿ, ಗೋವಿನಜೋಳವನ್ನು ಮಾರಾಟ ಮಾಡಲಾಯಿತು. 

ಮಾರುಕಟ್ಟೆಯ ಕೆಲವು ಕಡೆ ಮಾತ್ರ ತರಕಾರಿಗಳ ಮಾರಾಟ ಕಂಡುಬಂತು. ದರವೂ ಹೆಚ್ಚಾಗಿದೆ.      

Post Comments (+)