ಗುರುವಾರ , ಜೂನ್ 24, 2021
22 °C

ಬಾಲಕನ ಮೇಲೆ ಯುವಕರಿಂದ ಲೈಂಗಿಕ ದೌರ್ಜನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾನಾಪುರ: ತಾಲ್ಲೂಕಿನ ಇಟಗಿ ಗ್ರಾಮದ ಕನ್ನಡ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ಬಾಲಕನೊಬ್ಬನ ಮೇಲೆ ಅದೇ ಗ್ರಾಮದ ಇಬ್ಬರು ಯುವಕರು ಕಳೆದ ಹಲವು ದಿನಗಳಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ.

ಬಾಲಕನನ್ನು ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕದ ಅಧಿಕಾರಿಗಳು ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಬುಧವಾರ ರಾತ್ರಿ ದಾಖಲಿಸಿದ್ದಾರೆ. ದೌರ್ಜನ್ಯ ಎಸಗಿದ ಯುವಕರ ವಿರುದ್ಧ ನಂದಗಡ ಪೊಲೀಸ್ ಠಾಣೆಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ.

ಗ್ರಾಮದಿಂದ ಒಂದು ಕಿಲೊ ಮೀಟರ್‌ ದೂರದ ಶಾಲೆಗೆ ಬಾಲಕ ಪ್ರತಿದಿನ ನಡೆದು ಹೋಗುತ್ತಿದ್ದ. ಶಾಲೆಗೆ ಹೋಗುವಾಗ ಅಥವಾ ವಾಪಸ್‌ ಬರುವಾಗ ಮಧ್ಯದಲ್ಲಿ ಅಡ್ಡಗಟ್ಟುತ್ತಿದ್ದ ಈ ಇಬ್ಬರೂ ಆತನನ್ನು ಊರಾಚೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದರು. ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.

ಸೆ.16ರಂದು ಮನೆಗೆ ಬಂದ ಬಾಲಕ ನಿತ್ರಾಣಗೊಂಡಿದ್ದ. ವಿಪರೀತ ಜ್ವರದಿಂದ ಬಳಲುತ್ತಿದ್ದ. ಕೈಕಾಲು ಎತ್ತಲು ಆಗುತ್ತಿರಲಿಲ್ಲ. ಆಗ, ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಾಲಕ ವೈದ್ಯರಿಗೆ ಎಲ್ಲವನ್ನೂ ವಿವರಿಸಿದ್ದಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು