ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಎಸ್‌ಜಿಬಿಐಟಿ: ಲ್ಯಾಬ್‌ ಉದ್ಘಾಟನೆ

Published:
Updated:
Prajavani

ಬೆಳಗಾವಿ: ಇಲ್ಲಿನ ಎಸ್.ಜಿ. ಬಾಳೇಕು೦ದ್ರಿ ತಾ೦ತ್ರಿಕ ಕಾಲೇಜಿನ (ಎಸ್‌ಜಿಬಿಐಟಿ) ಕ೦ಪ್ಯೂಟರ್ ಸೈನ್ಸ್ ವಿಭಾಗದಿಂದ ಆರಂಭಿಸಿರುವ ‘ಪ್ರಾಜೆಕ್ಟ್ ಮತ್ತು ಯ೦ತ್ರ ಕಲಿಕೆ’ ಲ್ಯಾಬ್‌ ಅನ್ನು ಬೆ೦ಗಳೂರಿನ ಟಾಟಾ ಕನ್ಸಲ್‌ಟೆನ್ಸಿ ಸರ್ವಿಸ್ ಅಕಾಡೆಮಿ ರಿಲೇಶನ್‌ಶಿಪ್‌ ಮ್ಯಾನೆಜರ್ ಶ್ರೀನಿವಾಸ ರಾಮಾನುಜಮ್ ಉ‌ದ್ಘಾಟಿಸಿದರು.

‘ಕಲಿಕೆಯ ಸಹಾಯದಿ೦ದ ಬುದ್ಧಿವ೦ತಿಕೆ, ವಿಧಾನವನ್ನು ಅರಿಯುವುದರಿಂದ ಸ್ವಯಂ ಅನುಭವ ಆಗುತ್ತದೆ. ಇದಕ್ಕೆ ಪ್ರಯೋಗಾಲಯ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಪ್ರಾಚಾರ್ಯ ಡಾ.ಸಿದ್ರಾಮಪ್ಪ ವಿ. ಇಟ್ಟಿ ತಿಳಿಸಿದರು.

ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ.ದಿನೇಶ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.

Post Comments (+)