ಶಿರಸಂಗಿ: ಪೌರಾಣಿಕ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ, ದೇಶದ ಶಕ್ತಿ ಕ್ಷೇತ್ರಗಳಲ್ಲಿ ಒಂದಾದ ಶಿರಸಂಗಿಯಲ್ಲಿ ಈಗ ಯುಗಾದಿ ಹಬ್ಬದ ಸಂಭ್ರಮ ಹಾಗೂ ಶಕ್ತಿಮಾತೆ ಕಾಳಿಕಾದೇವಿ ಜಾತ್ರೆಯ ಸಡಗರ ಮನೆ ಮಾಡಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನಲ್ಲಿರುವ ಅತ್ಯಂತ ಪ್ರಮುಖ ಪೌರಾಣಿಕ ಕ್ಷೇತ್ರಗಳಲ್ಲಿ ಸವದತ್ತಿ ರೇಣುಕಾದೇವಿ ಹಾಗೂ ಶಿರಸಂಗಿ ಕಾಳಿಕಾದೇವಿ ಮಹಾತ್ಮೆ ಅಪಾರ. ರಾಜ್ಯ, ಹೊರರಾಜ್ಯ ಮಾತ್ರವಲ್ಲದೇ ವಿದೇಶಗಳಿಂದಲೂ ಅಪಾರ ಸಂಖ್ಯೆಯ ಭಕ್ತರು ಈ ಕ್ಷೇತ್ರಕ್ಕೆ ಬರುತ್ತಾರೆ.

ರೋಚಕ ಸ್ಥಳ ಪುರಾಣ: ಶೃಂಗಋಷಿ ಇಲ್ಲಿ ತಪಸ್ಸು ಮಾಡುತ್ತಿದ್ದರು. ಶೃಂಗ ಎಂದರೆ ತಲೆಯಲ್ಲಿ ಒಂದು ಕೊಂಬು ಹೊಂದಿದವರು ಎಂಬ ಅರ್ಥವಿದೆ. ಅವರ ಹೆಸರನ್ನೇ ಆಧರಿಸಿ ಶಿರಸಂಗಿ ಎಂದು ಈ ಕ್ಷೇತ್ರವನ್ನು ಕರೆಯಲಾಗಿದೆ ಎನ್ನುತ್ತಾರೆ ಇತಿಹಾಸಕಾರರು.

ಶೃಂಗಋಷಿಯ ಯಜ್ಞ, ಯಾಗಾದಿಗಳನ್ನು ಹಾಳು ಮಾಡಲು ರಾಕ್ಷಸರು ದಾಳಿ ಇಟ್ಟರು. ಅವರ ಸಂಹಾರಕ್ಕಾಗಿ ಋಷಿ– ಮುನಿಗಳು ಕಾಳಿಕಾದೇವಿ ಮೊರೆ ಹೋದರು. ಕಾಳಿಯು ಎಟ್ಟಾಸುರ, ಬೆಟ್ಟಾಸುರ, ನಲುಂದ, ನರುಂದ, ಚಿಕ್ಕುಂಬ, ಹಿರೇಕುಂಬ ಎಂಬ ಆರು ರಾಕ್ಷಸರನ್ನು ಸಂಹಾರ ಮಾಡಿದಳು ಎಂಬುದು ಪುರಾಣ ಲಿಖಿತ.

ಈಗ ಇರುವ ಎಡಸೂರ (ಎಟ್ಟಾಸುರ), ಬೆಡಸೂರ (ಬೆಟ್ಟಾಸುರ), ನವಲಗುಂದ (ನಲುಂದ), ನರಗುಂದ (ನರುಂದ), ಚಿಕ್ಕುಂಬಿ (ಚಿಕ್ಕುಂಬ), ಹಿರೇಕುಂಬಿ (ಹಿರೇಕುಂಬ) ಎಂಬ ಊರುಗಳ ಹೆಸರುಗಳು ಇದೇ ಐತಿಹ್ಯದಲ್ಲಿ ಬಂದಿವೆ!

ಆರು ಅಸುರರೇ ಈಗಿರುವ ಆರು ಬೆಟ್ಟಗಳಾದರು ಎಂಬುದು ಪ್ರತೀತಿ ಎಂಬ ಮಾಹಿತಿಯನ್ನು ದೇವಸ್ಥಾನದವರು ನೀಡುತ್ತಾರೆ. ರಾಕ್ಷಸ ಸಂಹಾರ ಮಾಡಿದ ಖಡ್ಗವನ್ನು ದೇವಿ ಬೆಟ್ಟದಲ್ಲಿ ಹೊಂಡದಲ್ಲಿ ತೊಳೆದಳು. ಈಗ ಆ ಸ್ಥಳವನ್ನು ಖಡ್ಗತೀರ್ಥ ಎಂದು ಕರೆಯಲಾಗುತ್ತದೆ.

ಮಂದಿರದಲ್ಲಿ ಶಿಲಾ ಶಾಸನವಿದ್ದು, ಸಂಸ್ಕೃತದಲ್ಲಿ ದೇವಿಯ ಈ ಮಹಿಮೆಯನ್ನು ಕೆತ್ತಲಾಗಿದೆ. ಶಾಸನವು ಈಗಲೂ ಸುಭದ್ರವಾಗಿದ್ದು ಓದಲು ಸಿಗುತ್ತದೆ.

ಇತಿಹಾಸವೇನು?: ಕಾಳಿಕಾ ದೇವಸ್ಥಾನವನ್ನು ಕ್ರಿ.ಶ. 8ನೇ ಶತಮಾನದಲ್ಲಿ ಜೀರ್ಣೋದ್ಧಾರ ಮಾಡಿದ ಬಗ್ಗೆ ದಾಖಲೆಗಳು ಹೇಳುತ್ತವೆ. ಅಂದರೆ ಅದಕ್ಕೂ ನೂರಾರು ವರ್ಷಗಳ ಮುಂಚೆಯೇ ಈ ದೇವಸ್ಥಾನ ನಿರ್ಮಿಸಲಾಗಿತ್ತು. ಜೀರ್ಣೋದ್ಧಾರ ಮಾಡಿದ ರಾಜ ಯಾರು ಹಾಗೂ ಅದಕ್ಕೂ ಮುಂಚೆ ಎಷ್ಟು ವರ್ಷಗಳ ಹಿಂದೆ ಇದನ್ನು ಕಟ್ಟಲಾಗಿತ್ತು ಎಂಬ ಬಗ್ಗೆ ಉಲ್ಲೇಖಗಳು ಸಿಕ್ಕಿಲ್ಲ.

ಸುವರ್ಣ ಸಾಲಿಗ್ರಾಮದ ಮೂರ್ತಿ

ಕಾಳಿಕಾದೇವಿಯು ವಿಶ್ವಕರ್ಮರ ಕುಲದೇವತೆ. ಇಲ್ಲಿರುವ ಮೂರ್ತಿಯು ಪೀಠವನ್ನು ಬಿಟ್ಟು ಏಳೂವರೆ ಅಡಿ ಎತ್ತರವಿದೆ. ಮೈಮೇಲೆ ಸುವರ್ಣ ರೇಖೆಗಳಿರುವ ಕಾರಣ ಸುವರ್ಣ ಸಾಲಿಗ್ರಾಮ ಮೂರ್ತಿ ಎನ್ನುತ್ತಾರೆ. ಹಾಗಾಗಿ ಇತಿಹಾಸಕಾರರು ಈ ದೇವಸ್ಥಾನವನ್ನು ‘ಗೋಲ್ಡ್ಸ್ಮಿತ್ ಟೆಂಪಲ್’ ಎಂದು ಬರೆದಿದ್ದಾರೆ. ‘ಮೂರ್ತಿಯ ಮೇಲೆ ಸುರಿಯುವ ಬಹುಪಾಲು ಹಾಲು ಮೂರ್ತಿಯ ಒಳಗೇ ಇಂಗಿ ಹೋಗುವುದು ಇಲ್ಲಿನ ಚಮತ್ಕಾರ. ಶೃಂಗಋಷಿ ನಮ್ಮ ಪೂರ್ವಜರು. ಆನುವಂಶಿಕವಾಗಿ ನಾವು ಟ್ರಸ್ಟ್ ನಡೆಸಿಕೊಂಡು ಬಂದಿದ್ದೇವೆ’ ಎನ್ನುತ್ತಾರೆ ವಿಶ್ವನಾಥ ಆಚಾರ್ಯ ಪೂಜಾರ.

ಐದೂ ದಿನ ಸಂಭ್ರಮ

ಶಿರಸಂಗಿ ಕಾಳಿಕಾದೇವಿ ಯುಗಾದಿ ಯಾತ್ರಾ ಮಹೋತ್ಸವಕ್ಕೆ ಬುಧವಾರ ಚಾಲನೆ ದೊರೆಯಿತು. ಕಾಳಿಕಾದೇವಿಗೆ ಪಂಚಾಮೃತ ಅಭಿಷೇಕ ಹೂವಿನ ವಿಶೇಷ ಅಲಂಕಾರ ಮಾಡಿ ಮಹಾಮಂಗಳಾರತಿ ಮಾಡಲಾಯಿತು. ಹೊಸ ಗೋಧಿ ನಿಧಿ ಅರ್ಪಣೆ: ವಿಶ್ವಕರ್ಮ ಕುಲಬಾಂಧವರು ದೇವಿಗೆ ಹೊಸಗೋಧಿ ನಿಧಿ ಅರ್ಪಿಸಿ ಉಳ್ಳುಗಾಯಿ (ತೆಂಗಿನಕಾಯಿ) ಉರುಳಿಸಿದರು.

ಈ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಬುತ್ತಿ ಹಾರಿಸುವುದು: ಯುಗಾದಿ ಪಾಡ್ಯ (ಗುರುವಾರ)ದಂದು ಬ್ರಾಹ್ಮಿ ಮುಹೂರ್ತಕ್ಕೂ ಮೊದಲು ಪೂಜೆ ಬ್ರಾಹ್ಮಿ ಮುಹೂರ್ತದಲ್ಲಿ ಅರ್ಚಕ ಬಂಧುಗಳು ಬುತ್ತಿ ಹಾರಿಸುತ್ತಾರೆ. ಕಾಳಿಕಾದೇವಿ ರಕ್ಷಸರ ರುಂಡಗಳನ್ನು ಹಾರಿಸಿದ್ದರ ಪ್ರತೀಕವಾಗಿ ನವ ಬುತ್ತಿ ಉಂಡೆ (ಅನ್ನದಿಂದ ತಯಾರಿಸಿದ ಉಂಡೆ ಅದಕ್ಕೆ ಕುಂಕುಮ ಹಚ್ಚಿರುತ್ತಾರೆ) ಹಾರಿಸುವುದು ಸಂಪ್ರದಾಯ ಎಂದು ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ನ ಧರ್ಮದರ್ಶಿ ವಿಶ್ವನಾಥ ಆಚಾರ್ಯ ಪೂಜಾರ (ಖರೇಬಣ) ತಿಳಿಸಿದರು.

ಬುತ್ತಿ ಪ್ರಸಾದ ಪಡೆದರೆ ಮನೆತನಕ್ಕೆ ಒಳ್ಳೆದಾಗುತ್ತದೆ ಎಂಬ ನಂಬಿಕೆಯಿದೆ. ಅದನ್ನು ಬಟ್ಟೆಯಲ್ಲಿ ಕಟ್ಟಿ ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಾರೆ. ಯುಗಾದಿಗೆ ಹೊಸ ವರ್ಷ ಆರಂಭ ಈ ಸಂದರ್ಭದಲ್ಲಿ ಹೊಸ ಫಸಲು ಗೋಧಿಯನ್ನು ದೇವಿಗೆ ನಿಧಿ ಅರ್ಪಿಸಿದ ನಂತರವೇ ಆಹಾರಕ್ಕಾಗಿ ಬಳಸುತ್ತಾರೆ. ನಿಧಿ ಅರ್ಪಣೆಯ ನಂತರ ಪಾಡ್ಯದಂದು ಹೊಸಗೋಧಿ ಹುಗ್ಗಿಯನ್ನು ಒಣ ಹಣ್ಣುಗಳೊಂದಿಗೆ ತಯಾರಿಸಿ ನೈವೇದ್ಯ ಅರ್ಪಿಸುವರು. ನಂತರ ಪ್ರಸಾದವಾಗಿ ಸ್ವೀಕರಿಸುವುದು ರೂಢಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.