ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಧ್ಜಜ ತೆರವಾಗದಿದ್ದರೆ ಮಹಾರಾಷ್ಟ್ರದಲ್ಲಿ ಕನ್ನಡಿಗರ ಅಂಗಡಿ ಬಂದ್: ಶಿವಸೇನಾ

Last Updated 15 ಮಾರ್ಚ್ 2021, 15:01 IST
ಅಕ್ಷರ ಗಾತ್ರ

ಬೆಳಗಾವಿ: ನೆರೆಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಅಂಗಡಿಗಳು ಮತ್ತು ಮಳಿಗೆಗಳಲ್ಲಿನ ಕನ್ನಡ ನಾಮಫಲಕಗಳಿಗೆ ಹಾಗೂ ಕರ್ನಾಟಕದ ಸಾರಿಗೆ ಬಸ್‌ಗಳಿಗೆ ಮಸಿ ಬಳಿಯುವುದು ಮೊದಲಾದ ಕೃತ್ಯಗಳಿಂದ ಗಡಿ ವಿವಾದ ಕೆಣಕುತ್ತಿರುವ ಶಿವಸೇನಾ ಕಾರ್ಯಕರ್ತರು, ಇಲ್ಲಿನ ಮಹಾನಗರ‍ಪಾಲಿಕೆಯ ಎದುರು ಹಾರಿಸಿರುವ ಕನ್ನಡ ಧ್ವಜವನ್ನು ತೆರವುಗೊಳಿಸದಿದ್ದರೆ ಮಹಾರಾಷ್ಟ್ರದಲ್ಲಿ ಕನ್ನಡಿಗರ ವ್ಯವಹಾರ ಬಂದ್ ಮಾಡಿಸಲಾಗುವುದು ಎಂದು ಶಿವಸೇನಾದವರು ಎಚ್ಚರಿಕೆ ನೀಡಿದ್ದಾರೆ.

‘ಮಾರ್ಚ್‌ 20ರ ಒಳಗೆ ತೆರವುಗೊಳಿಸಬೇಕು’ ಎಂಬ ಗಡುವನ್ನೂ ವಿಧಿಸಿದ್ದಾರೆ.

‘ಇಲ್ಲವಾದಲ್ಲಿ ಕೊಲ್ಹಾಪುರ, ಸಾಂಗ್ಲಿ ಹಾಗೂ ಸತಾರ ಭಾಗದಲ್ಲಿರುವ ಎಲ್ಲ ಕನ್ನಡಿಗರ ಅಂಗಡಿ, ಮಳಿಗೆಗಳನ್ನು ಬಂದ್ ಮಾಡಿಸಲಾಗುವುದು. ಶಿವಸೇನಾ ಕಾರ್ಯಕರ್ತರು ಈ ದಾಳಿ ನಡೆಸಲಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT