ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಶಿವಬಸವ ಶ್ರೀ ಜಯಂತ್ಯುತ್ಸವ ಡಿ.5ರಿಂದ

4 ದಿನಗಳ ಕಾರ್ಯಕ್ರಮ, ವಿವಿಧ ಪ್ರಶಸ್ತಿ ಪ್ರದಾನ
Last Updated 30 ನವೆಂಬರ್ 2021, 5:54 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ನಾಗನೂರು ರುದ್ರಾಕ್ಷಿ ಮಠದ ಲಿಂ.ಶಿವಬಸವ ಸ್ವಾಮೀಜಿ ಅವರ 132ನೇ ಜಯಂತ್ಯುತ್ಸವವನ್ನು ಡಿ.5ರಿಂದ 8ರವರೆಗೆ ಶಿವಬಸವ ನಗರದಲ್ಲಿರುವ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ.

ಗದಗ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ಮತ್ತು ನಾಗನೂರು ರುದ್ರಾಕ್ಷಿಮಠದ ಪೀಠಾಧೀಶ ಡಾ.ಅಲ್ಲಮಪ್ರಭು ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ.

ಡಿ.5ರಂದು ಬೆಳಿಗ್ಗೆ 9.30ಕ್ಕೆ ಶ್ರೀಮಠದ ಆವರಣದಲ್ಲಿ ಷಟಸ್ಥಲ ಧ್ವಜಾರೋಹಣದೊಂದಿಗೆ ಚಾಲನೆ ಸಿಗಲಿದೆ. ಸಂಜೆ 5.30ಕ್ಕೆ ಅಥಣಿಯ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ವಿರಚಿತ ‘ಮಹಾತ್ಮರ ಚರಿತಾಮೃತ’ ಗ್ರಂಥ ಬಿಡುಗಡೆ ನಡೆಯಲಿದೆ. ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ಮತ್ತು ಪ್ರಭುಚನ್ನಬಸವ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಡಾ.ವಿ.ಎಸ್. ಮಾಳಿ ಗ್ರಂಥ ಪರಿಚಯಿಸಲಿದ್ದಾರೆ. ವಿಲಾಸ್ ಕಾರ್ ಜಿನ್ನಿ, ಡಾ.ಬಸವರಾಜ ಜಗಜಂಪಿ ಮತ್ತು ಸರಜೂ ಕಾಟ್ಕರ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕನ್ನಡಪರ ಹೋರಾಟಗಾರರಾದ ಸಾಗರ ಬೋರಗಲ್ಲ ಮತ್ತು ಶಂಕರ ಬಾಗೇವಾಡಿ ಅವರಿಗೆ ‘ಕನ್ನಡ ನುಡಿ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ವಿಜಯಲಕ್ಷ್ಮಿಗೆ ಪ್ರಶಸ್ತಿ:

ಡಿ.6ರಂದು ಸಂಜೆ 5.30ಕ್ಕೆ ಶ್ರೀಮಠದ ಹಳೆಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ‘ಆತ್ಮ ಸ್ವಾಸ್ಥ್ಯ ಶ್ರೀ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿದೆ. ಗದಗ ಶಿವಾನಂದ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ, ಬೆಳಗಾವಿಯ ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ನೇತೃತ್ವ ಮತ್ತು ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ.ಎಂ.ಆರ್. ಉಳ್ಳೇಗಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಮಾರ್ಟ್ ಸಿಟಿ ಕಂಪನಿಯ ಇಇ ಪಿ.ಎಂ. ಪಾಟೀಲ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಈಶ್ವರಪ್ಪ ಬಾಳೆಕುಂದ್ರಿ ಅವರಿಗೆ ‘ಆತ್ಮ ಸ್ವಾಸ್ಥ್ಯ ಶ್ರೀ’ ಪ್ರದಾನ ಮಾಡಲಾಗುವುದು. ಅಶೋಕ ಮಳಗಲಿ, ಬಿ.ಎ. ಪಾಟೀಲ, ಶಶಿಧರ ಬಗಲಿ, ಅನಂತ ಕುಲಕರ್ಣಿ ಹಾಗೂ ಡಾ.ಗುರುದೇವಿ ಹುಲೆಪ್ಪನವರಮಠ ಅವರಿಗೆ ‘ಪ್ರಸಾದ ಶ್ರೀ’ ಗೌರವ ಪ್ರಶಸ್ತಿ ನೀಡಲಾಗುವುದು. ಜ್ಯೋತಿ ಬದಾಮಿ ವಿರಚಿತ ‘ಪರಿಕ್ರಮ ಕೈಲಾಸ ಮಾನಸ ಮಡಿಲಲ್ಲಿ’ ಕೃತಿ ಬಿಡುಗಡೆಯಾಗಲಿದೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ:

ಡಿ.7ರಂದು ಸಂಜೆ 5.30ಕ್ಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸನ್ಮಾನ ಕಾರ್ಯಕ್ರಮವು ಭಾಲ್ಕಿ ಸಂಸ್ಥಾನ ಹಿರೇಮಠದ ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ನಡೆಯಲಿದೆ. ಗದಗದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜ ನೇತೃತ್ವ ವಹಿಸಲಿದ್ದಾರೆ. ಆರ್‌ಸಿಯು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ, ವಿಟಿಯು ಮೌಲ್ಯಮಾಪನ ಕುಲಸಚಿವ ಡಾ.ಬಿ.ಇ. ರಂಗಸ್ವಾಮಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಿ.ಎಲ. ಪಾಟೀಲ, ಸಿದ್ದಪ್ಪ ಬಿದರಿ, ಡಾ.ಜಿ.ಎನ್. ರಾಮಕೃಷ್ಣೇಗೌಡ ಮತ್ತು ಕೃಷ್ಣ ಕೊಲ್ಹಾರ ಕುಲಕರ್ಣಿ ಅವರನ್ನು ಸನ್ಮಾನಿಸಲಾಗುವುದು.

ಶ್ರೀಗಳ ಪುತ್ಥಳಿ ಅನಾವರಣ

8ರಂದು ಬೆಳಿಗ್ಗೆ 10.30ಕ್ಕೆ ಲಿಂ.ಶಿವಬಸವ ಸ್ವಾಮೀಜಿ ಪುತ್ಥಳಿ ಅನಾವರಣ ಹಾಗೂ ಸೇವಾರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಿರಿಗೆರೆಯ ತರಳಬಾಳು ಮಹಾಸಂಸ್ಥಾನ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಹಾಲಕೆರೆಯ ಅನ್ನದಾನೀಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ನೇತೃತ್ವ ವಹಿಸಲದ್ದಾರೆ. ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ‘ಶಿವಬಸವ ಚಿತ್ರ ಸಂಪುಟ’ ಬಿಡುಗಡೆ ಮಾಡಲಿದ್ದಾರೆ.

ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಗಿರೀಶ ಹೊಸೂರ ಆಗಮಿಸಿಲಿದ್ದಾರೆ. ಧಾರವಾಡದ ಡಾ.ಗುರುಲಿಂಗ ಕಾಪ್ಸೆ, ಕಲಬುರಗಿಯಯ ವಿಲಾಸವತಿ ಖೂಬಾ, ವಿಜಯಪುರದ ಎನ್.ಕೆ. ಕುಂಬಾರ, ಧಾರವಾಡದ ಸಿ.ಆರ್. ಯರವಿನ ತೆಲಿಮಠ, ಗದಗದ ಚನ್ನಯ್ಯ ಹಿರೇಮಠ ಹಾಗೂ ಅಶೋಕ ಚಂದರಗಿ ಅವರಿಗೆ ‘ಸೇವಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಮೀರಜ್‌ನ ವಿಜಯ್ ಗುಜ್ಜರ್, ಶಿರಸಿಯ ಆರ್.ಎಂ. ಹೆಗ್ಡೆ ಮತ್ತು ಬೆಳಗಾವಿಯ
ಮಹೇಶ ಹೆಬ್ಬಾಳೆ ಅವರನ್ನು ಸನ್ಮಾನಿಸಲಾಗುವುದು.

ಸಂಜೆ ಬಸವನಕುಡಚಿಯ ಚನ್ನಮ್ಮ ಹಿರೇಮಠ ವೃದ್ಧಾಶ್ರಮದ ಆವರಣದಲ್ಲಿ ಲಿಂ.ಶಿವಬಸವ ಸ್ವಾಮೀಜಿ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT