ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಪರಿಕಲ್ಪನೆಗೆ ಅರ್ಥ ತಂದ ಶಿವಾಜಿ: ಹಿರೇಮಠದ ವೀರೇಶ್ವರ ದೇವರು

Last Updated 19 ಫೆಬ್ರುವರಿ 2021, 10:09 IST
ಅಕ್ಷರ ಗಾತ್ರ

ತೆಲಸಂಗ: ‘ಛತ್ರಪತಿ ಶಿವಾಜಿ ಮಹಾರಾಜರು ಭಾರತೀಯ ಎನ್ನುವ ಪರಿಕಲ್ಪನೆಗೆ ಅರ್ಥ ತಂದವರು’ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.

ಗ್ರಾಮದ ಶಿವಾಜಿ ವೃತ್ತದಲ್ಲಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಶಿವಾಜಿ ಮಹಾರಾಜರ ಆದರ್ಶ, ತತ್ವಗಳನ್ನು ಇಂದಿನ ಯುವ ಪೀಳಿಗೆ ಪಾಲಿಸಿದ್ದೇ ಆದಲ್ಲಿ, ದೇಶದ ಪ್ರಗತಿ ಸುಲಭವಾಗಲಿದೆ. ಅವರು ಕೇವಲ ಮಹಾರಾಜ ಮಾತ್ರವಲ್ಲ. ಇಂದಿಗೂ ಸ್ಫೂರ್ತಿಯ ಸೆಲೆ ಹಾಗೂ ಹೆಮ್ಮೆಯ ಪ್ರತೀಕ. ದೇಶದ ಶಕ್ತಿ. ಅವರು ಕಡಿಮೆ ಅವಧಿಯಲ್ಲಿ ದೇಶ ಸಂಚರಿಸಿ, ಸಾಮ್ರಾಜ್ಯ ಕಟ್ಟಿದ ಮಹಾನ್ ಪರಾಕ್ರಮಿಯಾಗಿದ್ದರು. ಸೈನ್ಯ ಸಂಘಟನೆಯಲ್ಲಿ ಚತುರರಾಗಿದ್ದರು. ಅವರನ್ನು ಜಾತಿಗೆ ಸೀಮಿತಗೊಳಿಸಬಾರದು’ ಎಂದರು.

ವಕೀಲ ಪ್ರಕಾಶ ಮೋರೆ, ನಿವೃತ್ತ ಸೈನಿಕ ಅನಿಲ ಚವಾಣ, ಮುಖಂಡರಾದ ಅರವಿಂದ ಉಂಡೋಡಿ, ವಿಲಾಸ ಮೋರೆ, ಸುಧಾಕರ ಮೋರೆ, ಡಾ.ಬಿ.ಎಸ್. ಕಾಮನ್, ಮಲ್ಲಪ್ಪ ಗಂಗಾಧರ, ಮಲ್ಲಿಕಾರ್ಜುನ ಹತ್ತಿ, ಡಾ.ಎಸ್.ಐ. ಇಂಚಗೇರಿ, ವಾಸುದೇವ ಮೋರೆ, ಡಾ.ಬಸವರಾಜ ರೋಡಗಿ, ಸಂದೀಪ ಮೋರೆ, ಸಹದೇವ ದಶವಂತ, ಜಗದೀಶ ಮಠದ, ಸಿದ್ದಲಿಂಗ ಮಾದರ, ಕೇಶವ ಉಂಡೋಡಿ, ಬಾಬಾಜಿ ಶಿಂಧೆ, ಸುಖದೇವ ಮೋರೆ, ರಾಮು ಚವಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT