ಬೆಳಗಾವಿ: ತಾಲ್ಲೂಕಿನ ರಾಜಹಂಸಗಡ ಕೋಟೆಯಲ್ಲಿ ನಿರ್ಮಿಸಿದ ಛತ್ರಪತಿ ಶಿವಾಜಿ ಮಹಾರಾಜರ 50 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಈಗ ‘ರಾಜಕೀಯ ಪ್ರತಿಷ್ಠೆ’ಯ ಕಣವಾಗಿ ಮಾರ್ಪಟ್ಟಿದೆ.

ಮೂರ್ತಿ ನಿರ್ಮಾಣದ ಕ್ರೆಡಿಟ್ ತೆಗೆದುಕೊಳ್ಳಲು, ಬದ್ಧ ವೈರಿಗಳಾದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ಶಾಸಕ ರಮೇಶ ಜಾರಕಿಹೊಳಿ ಮಧ್ಯೆ ತೀವ್ರ ಜಟಾಪಟಿ ನಡೆದಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾರ್ಚ್ 4 ಹಾಗೂ 5ರಂದು ಮೂರ್ತಿ ಲೋಕಾರ್ಪಣೆ ಸಮಾರಂಭ ಏರ್ಪಡಿಸಿದ್ದಾರೆ. ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡರನ್ನೂ ಆಹ್ವಾನಿಸಿದ್ದಾರೆ.

ಶಾಸಕ ರಮೇಶ ಜಾರಕಿಹೊಳಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಹಾಗೂ ಹಲವು ಬಿಜೆಪಿ ನಾಯಕರು ಇದಕ್ಕೆ ತಕರಾರು ತೆಗೆದಿದ್ದಾರೆ.

‘ಕೋಟೆಯನ್ನು ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗಿದೆಯೇ ಹೊರತು, ಶಾಸಕಿಯ ಮನೆ ದುಡ್ಡಿನಿಂದ ಅಲ್ಲ. 2010ರಲ್ಲಿ ನಾನು ಜಿಲ್ಲಾ ಉಸ್ತುವಾರಿ ಸಚಿವ ಇದ್ದಾಗಲೇ ಇದನ್ನು ಆರಂಭಿಸಿದ್ದೇನೆ. ಇದರ ಲೋಕಾರ್ಪಣೆ ಜವಾಬ್ದಾರಿ ಜಿಲ್ಲಾಧಿಕಾರಿಯದ್ದು. ಸರ್ಕಾರದ ಶಿಷ್ಟಾಚಾರದಂತೆ ಕಾರ್ಯಕ್ರಮ ಮಾಡದೇ, ಕಾಂಗ್ರೆಸ್ ನಾಯಕರಿಗಷ್ಟೇ ಆಹ್ವಾನ ನೀಡಲಾಗಿದೆ’ ಎಂದು ರಮೇಶ ಜಾರಕಿಹೊಳಿ ತಕರಾರು ತೆಗೆದಿದ್ದಾರೆ.

‘ರಾಜಹಂಸಗಡ ಕೋಟೆ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಬರುತ್ತದೆ. ಇದರ ಅಭಿವೃದ್ಧಿಗೆ, ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗಾಗಿ ಶ್ರಮಿಸಿದ್ದೇನೆ. ₹4.5 ಕೋಟಿ ವೆಚ್ಚವಾಗಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ₹3 ಕೋಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹50 ಲಕ್ಷ ಮಂಜೂರಾಗಿದೆ. ಉಳಿದ ₹ 1ಕೋಟಿ ನನ್ನ ಸ್ವಂತ ಹಣ ಹಾಕಿದ್ದೇನೆ’ ಎನ್ನುವುದು ಲಕ್ಷ್ಮೀ ಹೆಬ್ಬಾಳಕರ
ವಾದ.

ಮರಾಠ ಮತದಾರರಿಗೆ ಗಾಳ: ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮರಾಠಿ ಭಾಷಿಕ ಮತದಾರರು ಶೇ 50ರಷ್ಟಿದ್ದಾರೆ. ಅವರನ್ನು ಓಲೈಸುವ ಕಸರತ್ತನ್ನು ಕಾಂಗ್ರೆಸ್– ಬಿಜೆಪಿ ನಾಯಕರು ಮಾಡುತ್ತಿದ್ದಾರೆ.

ಮೂರ್ತಿ ಉದ್ಘಾಟನಾ ಕಾರ್ಯಕ್ರಮಕ್ಕೆ ಶಿವಾಜಿ ಮಹಾರಾಜರ ವಂಶಸ್ಥರಾದ ಯುವರಾಜ ಸಂಭಾಜಿರಾಜೇ ಛತ್ರಪತಿ, ಮಹಾರಾಷ್ಟ್ರದ ವಿಧಾನಪರಿಷತ್ ಸದಸ್ಯ ಸತೇಜ್ (ಬಂಟಿ) ಪಾಟೀಲ, ಮರಾಠಿ ನಟ, ಸಂಸದ ಡಾ.ಅಮೋಲ್ ಕೋಲ್ಲೆ, ಲಾತೂರು ಶಾಸಕ ಧೀರಜ್ ದೇಶಮುಖ್, ಮಾಜಿ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಪುತ್ರ ರಿತೇಶ ದೇಶಮುಖ್ ಅವರನ್ನು ಲಕ್ಷ್ಮೀ ಹೆಬ್ಬಾಳಕರ ಆಹ್ವಾನಿಸಿದ್ದಾರೆ.

ಕಾರುಗಳ ಮುಖಾಮುಖಿ: ಕೆಲಕಾಲ ಉದ್ವಿಗ್ನ

ಶಾಸಕ ರಮೇಶ ಜಾರಕಿಹೊಳಿ ಹಾಗೂ ವಿಧಾನಪರಿಷತ್ ಸದಸ್ಯ, ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರ ಕಾರುಗಳು ಶನಿವಾರ ರಾಜಹಂಸಗಡ ಕೋಟೆ ಬಳಿ ಮುಖಾಮುಖಿಯಾದವು. ಎರಡೂ ಕಾರುಗಳ ಚಾಲಕರು ಒಬ್ಬರಿಗೊಬ್ಬರು ದಾರಿ ಬಿಡಲಿಲ್ಲ.

ಕಾರುಗಳಿಗೆ ಮುತ್ತಿಕೊಂಡ ಇಬ್ಬರ ಕಡೆಯ ಕಾರ್ಯಕರ್ತರು ಅವರ ನಾಯಕರಿಗೆ ಜೈಕಾರ ಕೂಗಲು ಶುರು ಮಾಡಿದರು. ಇದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಕಾರಿನಿಂದ ಇಳಿದ ರಮೇಶ ಜಾರಕಿಹೊಳಿ ಕೋಟೆಯತ್ತ ಹೆಜ್ಜೆ ಹಾಕಿದರು. ಆದರೂ ಅವರ ಚಾಲಕ ಕಾರನ್ನು ಹಿಂತೆಗೆಯಲಿಲ್ಲ. ಕೆಲ ಸಮಯ ಕಾದ ಚನ್ನರಾಜ ತಮ್ಮ ಕಾರನ್ನು ಹಿಂದಕ್ಕೆ ತೆಗೆದು, ಬದಿಯಿಂದ ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.