ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡಿದ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ. ₹50 ಕೋಟಿಗೂ ಹೆಚ್ಚಿನ ಬಡ್ಡಿ ವ್ಯವಹಾರ ಮಾಡಿದ್ದು ಮೊದಲ ಹಂತದಲ್ಲೇ ಖಾತ್ರಿಯಾಗಿದೆ. 35 ಸಾವಿರಕ್ಕೂ ಹೆಚ್ಚು ಜನ ಇವನ ಬಳಿ ಠೇವಣಿ ಇಟ್ಟಿದ್ದಾರೆ. ಇಷ್ಟೂ ಹಣ ಅವನು ಪಡೆದುಕೊಂಡಿರುವುದು ಕೈಸಾಲದ ರೂಪದಲ್ಲಿ. ಹುಬ್ಬಳ್ಳಿಯ ಉಣಕಲ್ ಮೂಲದ ಶಿವಾನಂದ ನೀಲಣ್ಣವರ ಜೀವನ ಸಾಮಾನ್ಯ ಹಿನ್ನೆಲೆಯಿಂದ ಆರಂಭವಾಗಿತ್ತು. ಮೆಡಿಕಲ್ ಕಾಲೇಜಿನಲ್ಲಿ ಜವಾನನಾಗಿ ಕೆಲಸ ಶುರು ಮಾಡಿದ ನೀಲಣ್ಣವರ, ‘ಶಿವಂ ಅಸೋಸಿಯೇಟ್ಸ್’ ಹೆಸರಿನಲ್ಲಿ ಸಾವಿರಾರು ಕೋಟಿ ಮೌಲ್ಯದ ಹೂಡಿಕೆ ಸಂಸ್ಥೆ ಸ್ಥಾಪಿಸಿದ್ದೇ ರೋಚಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.