ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶನಿವಾರ ಮಹಾಶಿವರಾತ್ರಿಯ ಸಡಗರ ಮನೆ ಮಾಡಿತು. ನಸುಕಿನಿಂದಲೇ ಹಲವು ಭಕ್ತರು ಶಿವಾಲಯಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ನಗರದ ಕಪಿಲೇಶ್ವರ ಮಂದಿರ, ಮಿಲಿಟರಿ ಮಹಾದೇವ ಗುಂಡಿ, ಕೆಎಲ್ಇ ಶಿವಾಲಯ, ಕಣಬರಗಿಯ ಸಿದ್ಧೇಶ್ವರ ದೇವಾಲಯ, ಶಿವಾಜಿನಗರದ ವೀರಭದ್ರೇಶ್ವರ ದೇವಸ್ಥಾನ, ಪೊಲೀಸ್ ಕೇಂದ್ರ ಸ್ಥಾನದಲ್ಲಿರುವ ವೀರಭದ್ರೇಶ್ವರ ದೇವಸ್ಥಾನ, ಶಹಾಪುರದ ಮಹಾದೇವ, ಶಾಹುನಗರ ಶಿವ ಮಂದಿರ, ಮಹಾಂತೇಶ ನಗರದ ಶಿವಾಲಯ, ಶಿವಶಕ್ತಿ ಕಾಲೊನಿ, ಸದಾಶಿವ ನಗರದ ಸದಾಶಿವ, ಸಹ್ಯಾದ್ರಿ ನಗರದ ಮಹಾಬಳೇಶ್ವರ, ಶಿವಬಸವ ನಗರದ ಪಶುಪತಿ, ಸಂಗಮೇಶ್ವರ ನಗರ ಸಂಗಮೇಶ್ವರ ಮಂದಿರ, ರಾಮತೀರ್ಥ ನಗರದ ಶಿವಾಲಯ, ಬಿ.ಕೆ. ಕಂಗ್ರಾಳಿಯ ಕಲ್ಮೇಶ್ವರ ದೇಗುಲ, ರಾಮಲಿಂಗ ಖಿಂಡ ಗಲ್ಲಿಯ ರಾಮಲಿಂಗೇಶ್ವರ ದೇಗುಲದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.

ನಸುಕಿನ 4ರಿಂದಲೇ ಪರಮಶಿವನಿಗೆ ರುದ್ರಾಭಿಷೇಕ ಮಾಡಲಾಯಿತು. ಗರ್ಭಗುಡಿಗಳನ್ನು ವಿವಿಧ ಪುಷ್ಪ ಹಾಗೂ ಬಿಲ್ವಪತ್ರಿಗಳಿಂದ ಅಲಂಕರಿಸಿದ್ದರೆ, ಹೊರಾಂಗಣವನ್ನು ವರ್ಣರಂಜಿತ ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿತ್ತು.

ಬಿಲ್ವಪತ್ರಿ, ಕಾಯಿ, ಕರ್ಪೂರ, ಚೆಂಡುಹೂವು ಹಿಡಿದು ಮಹಿಳೆಯರು ಶಿವನ ಪೂಜೆಗೆ ಬಂದರು. ಕಪಿಲೇಶ್ವರ ಮಂದಿರದಲ್ಲಂತೂ ಕಿಲೋಮೀಟರ್ ಉದ್ದಕ್ಕೂ ಸರದಿ ಇತ್ತು. ರಾತ್ರಿ ಇಡೀ ಶಿವನಾಮ ಜಪ, ಶಿವಭಜನೆ, ಶಿವಸ್ತುತಿಗಳು ಸಾಂಗವಾಗಿ ನೆರವೇರಿದವು.

ಬಹುಪಾಲು ಜನ ಉಪವಾಸ ವ್ರತ ಆಚರಿಸಿದರು. ಅವರಿಗಾಗಿ ಹಣ್ಣು, ಕರ್ಜೂರ, ಕಡಲೆ– ಬೆಲ್ಲದ ಪ್ರಸಾದ ವಿತರಿಸಲಾಯಿತು.

ಮುಗಳಖೋಡ ವರದಿ: ಮಹಾಶಿವರಾತ್ರಿ, ಜಾಗರಣೆಯ ಅಂಗವಾಗಿ ಮುಗಳಖೋಡದ ಈಶ್ವರ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಾಜಿ ಶಾಸಕ ಎಸ್.ವಿ.ಘಾಟಗೆ ಪೂಜೆಯಲ್ಲಿ ಭಾಗಿಯಾದರು. ಬೆಳಿಗ್ಗೆ 8ರಿಂದ ಸಚಿನ ಹಿರೇಮಠ ಅವರ ನೇತೃತ್ವದಲ್ಲಿ ಪೂಜೆ, ಅಭಿಷೇಕ ನೆರವೇರಿತು. ಮಹಿಳೆಯರು ವಸ್ತ್ರಧಾರಣ ಹಾಗೂ ಉಡಿತುಂಬುವ ಕಾರ್ಯಕ್ರಮ ಮಾಡಿದರು.

ತಲ್ಲೂರ ವರದಿ: ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ವಿಶೇಷ ಅಲಂಕಾರ ಹಾಗೂ 101 ಪತ್ರಿಗಳಿಂದ ಮಹಾಪೂಜೆ ಸಲ್ಲಿಸಲಾಯಿತು. ವೇದಮೂರ್ತಿ ನಂದಿಮಠದ ಬಾಳಯ್ಯಜ್ಜ ಆಶೀರ್ವಚನ ನೀಡಿದರು. ಅರ್ಚಕರಾದ ಶಿವಪ್ಪ ಹೂಗಾರ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಜಾಲಿಕಟ್ಟಿ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ನಿಮಿತ್ಯ ವಿಶೇಷ ಪೂಜೆ ಅಲಂಕಾರವನ್ನು ಗುತ್ತಿಗೋಳೆ ಹೋಸಕೋಟೆ ರೇವಯ್ಯಜ್ಜ ನಡೆಸಿಕೊಟ್ಟರು.

ತ್ರಿಮೂರ್ತಿ ಶಿವ ಜಯಂತಿ

ಬೆಳಗಾವಿ: ಇಲ್ಲಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಶಹಾಪುರ ಸೇವಾಕೇಂದ್ರದಿಂದ 87ನೇ ಶಿವರಾತ್ರಿ ಹಾಗೂ ತ್ರಿಮೂರ್ತಿ ಶಿವ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು.

ಕಪಿಲೇಶ್ವರ ದೇವಸ್ಥಾನ ಸಮಿತಿ ಉಪಾಧ್ಯಕ್ಷ ಸತೀಶ ಎಸ್. ನೀಲಜಕರ, ಸಂಸ್ಕೃತ ಪಂಡಿತ ಚಂದ್ರಶೇಖರಯ್ಯ ಹಿರೇಮಠ, ಉಪನ್ಯಾಸಕ ಶ್ರೀಕಾಂತ ಶಾನವಾಡ, ಯೋಗಗುರು ಮುರಳಿಧರ ಪ್ರಭು, ಡಾ.ಮನೀಷ್ ಬಾಗಿ, ದೇವಾಂಗ ಸಮಾಜದ ಅಧ್ಯಕ್ಷ ನಾರಾಯಣ ಕುಲಗೋಡ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಬ್ರಹ್ಮಾ ಕುಮಾರಿ ಮೀನಾಕ್ಷಿ ಅಕ್ಕ ಅವರು ರಾಜಯೋಗದ ಮಹತ್ವ ಮತ್ತು ಶಿವರಾತ್ರಿ ರಹಸ್ಯ ತಿಳಿಸಿದರು. ರಾಧಿಕಾ ಅಕ್ಕ, ದತ್ತಾತ್ರೇಯ ದಿವಟೆ, ಸುರೇಶ ಪತ್ತಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.