ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಚಾರದ ಮುನ್ನ ಪರವಾನಗಿ ಕಡ್ಡಾಯ’

ಆಟೊ ಚಾಲಕ, ಮಾಲೀಕರಿಗೆ ಕಾರ್ಯಾಗಾರ
Last Updated 29 ಏಪ್ರಿಲ್ 2018, 14:21 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಪಟ್ಟಣ ಹಾಗೂ ಗ್ರಾಮೀಣ ಭಾಗದ ಆಟೊ ಚಾಲಕರು ಮತ್ತು ಮಾಲೀಕರು ಯಾವುದೇ ಪಕ್ಷ, ಅಭ್ಯರ್ಥಿ ಪರ ಪ್ರಚಾರ ಮಾಡಬೇಕಾದರೆ ಕಡ್ಡಾಯವಾಗಿ ಚುನಾವಣಾ ಆಯೋಗದಿಂದ ಪರವಾನಗೆ ಪಡೆದು ಕೊಳ್ಳಬೇಕು ಎಂದು ಸಹಾಯಕ ಚುನಾ ವಣಾ ಅಧಿಕಾರಿ, ತಹಶೀಲ್ದಾರ್ ಸುಭಾಸ ಸಂಪಗಾವಿ ಹೇಳಿದರು.

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಶುಕ್ರವಾರ ಆಟೊ ಚಾಲಕರು ಹಾಗೂ ಮಾಲೀಕರಿಗೆ ಚುನಾವಣೆ ನೀತಿ ಸಂಹಿತೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಆಟೊ ಚಾಲಕರು ಮತ್ತು ಮಾಲೀಕರು ಚುನಾವಣೆ ದಿನದಂದು 3–4 ಮತ್ತು ಅದಕ್ಕಿಂತ ಹೆಚ್ಚಿನ ಜನರನ್ನು ಮತಗಟ್ಟೆಯತ್ತ ಕರೆದುಕೊಂಡು ಹೋಗುವ ಮುನ್ನ ಮತದಾರರಿಗೆ ಇಂತಹ ಪಕ್ಷಕ್ಕೆ ಮತ ನೀಡಿ, ಇಂತಹ ಅಭ್ಯರ್ಥಿಗೆ ಮತ ನೀಡಿ ಎಂದು ಹೇಳುವುದು ಹಾಗೂ ವಾಹನದಲ್ಲಿ ಯಾವುದಾದರು ಪಕ್ಷದ ಚಿಹ್ನೆ, ವಸ್ತುಗಳು ಕಂಡುಬಂದಲ್ಲಿ ಅಂತಹ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿದರು.

ಅಭ್ಯರ್ಥಿ ಇಲ್ಲವೇ ಪಕ್ಷದ ಪರವಾಗಿ ತಮ್ಮ ವಾಹನದಲ್ಲಿ ಧ್ವನಿವರ್ಧಕ ಹಚ್ಚುವ ಮುನ್ನ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಯಾರೋ ಹೇಳಿದರೆಂದು ಅಭ್ಯರ್ಥಿ, ಪಕ್ಷದ ಪರ ಪ್ರಚಾರ ಮಾಡಬಾರದು ಎಂದು ಹೇಳಿದರು.

ಸಿ.ಪಿ.ಐ. ಜಿ.ಕರಣೇಶಗೌಡ, ಪುರಸಭೆ ಸಿಬ್ಬಂದಿ ಶಬ್ಬೀರ್‌ ರೇವರಕರ, ಭೀರಪ್ಪ ಶೆಟ್ಟಪ್ಪಗೋಳ ಸೇರಿದಂತೆ ಆಟೊ ಚಾಲಕರು, ಮಾಲೀಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ವಿವಿ ಪ್ಯಾಟ್‌ ಮತಯಂತ್ರದ ಕಾರ್ಯ ಕುರಿತು ಮಾಹಿತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT