ಸಿರ್ಸಿ ವೃತ್ತದ ಫ್ಲೈಓವರ್‌ಗೆ ಮತ್ತೆ ಡಾಂಬರು

7

ಸಿರ್ಸಿ ವೃತ್ತದ ಫ್ಲೈಓವರ್‌ಗೆ ಮತ್ತೆ ಡಾಂಬರು

Published:
Updated:

ಬೆಂಗಳೂರು: ಸಿರ್ಸಿ ವೃತ್ತದ ಫ್ಲೈ ಓವರ್‌ಗೆ ಮತ್ತೆ ಡಾಂಬರು ಹಾಕುವ ಪ್ರಸ್ತಾವಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಪ್ಪಿಗೆ ನೀಡಿದೆ.

‘ಇತ್ತೀಚೆಗೆ ಸುರಿದ ಅವ್ಯಾಹತ ಮಳೆ, ರಸ್ತೆ ನಿರ್ವಹಣೆಯಲ್ಲಿ ಗುತ್ತಿಗೆದಾರರ ಲೋಪ ಇತ್ಯಾದಿಯಿಂದಾಗಿ ಡಾಂಬರು ಕಿತ್ತು ಹೋಗಿದೆ. ಅದಕ್ಕಾಗಿ ಹೊಸದಾಗಿ ನೀಲನಕ್ಷೆ ಸಿದ್ಧಪಡಿಸಿ ರಸ್ತೆ ದುರಸ್ತಿ ಮಾಡಲಾಗುವುದು’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಪದೇ ಪದೇ ಈ ರೀತಿ ಹಣ ವೆಚ್ಚವಾಗುತ್ತಿರುವ ಕುರಿತು ವ್ಯಕ್ತವಾಗಬಹುದಾದ ಸಾರ್ವಜನಿಕರ ಆಕ್ರೋಶ ತಪ್ಪಿಸಲು ಬಿಬಿಎಂಪಿ ಅಧಿಕಾರಿಗಳು ಗುತ್ತಿಗೆದಾರರಿಂದ ಪಡೆದ ಸ್ಥಿರ ಭದ್ರತಾ ಠೇವಣಿ ಮತ್ತು ಆರಂಭಿಕ ನಗದು ಠೇವಣಿಯ ಮೊತ್ತ ₹ 11.23 ಲಕ್ಷವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಫ್ಲೈಓವರ್‌ ರಸ್ತೆಯನ್ನು 2019ರವರೆಗೆ ಗುತ್ತಿಗೆದಾರರೇ ನಿರ್ವಹಿಸಬೇಕು ಎಂದು ಕರಾರು ಮಾಡಿಕೊಳ್ಳಲಾಗಿತ್ತು. ಕಳಪೆ ನಿರ್ವಹಣೆಯಿಂದ ರಸ್ತೆ ಕೆಟ್ಟು ಹೋಗಿದೆ. ಹೀಗಾಗಿ ರಸ್ತೆಯನ್ನು ತಾವು ಸರಿಪಡಿಸಿಕೊಡುವುದಾಗಿ ಗುತ್ತಿಗೆದಾರರು ಲೋಕಾಯುಕ್ತರಿಗೆ ಲಿಖಿತ ಹೇಳಿಕೆ ಕೊಟ್ಟಿದ್ದರು. ಆದರೆ, ಈಗ ಹೊಸದಾಗಿ ಡಾಂಬರು ಹಾಕುವ ಪ್ರಸ್ತಾವ ಬಿಬಿಎಂಪಿಯಲ್ಲಿ ಸಿದ್ಧವಾಗಿದೆ. ಸಾಯಿ ತ್ರಿಶಾ ಇನ್‌ಫ್ರಾ ಎಂಜಿನಿಯರ್ಸ್‌ ಕಂಪನಿಗೆ ಡಾಂಬರೀಕರಣ ಕಾಮಗಾರಿ ಗುತ್ತಿಗೆ ನೀಡಲು ಬಿಬಿಎಂಪಿ ತೀರ್ಮಾನಿಸಿದೆ.

ಡಾಂಬರು ಹಾಕುವ ಮುನ್ನ ರಸ್ತೆಯ ಮೇಲ್ಮೈಯನ್ನು ಕೆರೆಯಬೇಕಿದೆ. ಅದಕ್ಕಾಗಿ ₹ 33.28 ಲಕ್ಷ ತೆಗೆದಿಡಲು ತೀರ್ಮಾನಿಸಲಾಗಿದೆ. 

ಇಡೀ ಫ್ಲೈಓವರ್‌ ರಸ್ತೆಗೆ ₹ 4.02 ಕೋಟಿ ವೆಚ್ಚದಲ್ಲಿ ಡಾಂಬರು ಹಾಕಲಾಗುತ್ತಿದ್ದು, ಎರಡು ವರ್ಷಗಳ ₹ 2.5 ಕೋಟಿ ವೆಚ್ಚದಲ್ಲಿ 40 ಮಿಲಿಮೀಟರ್‌ ದಪ್ಪದಲ್ಲಿ ಡಾಂಬರು ಲೇಪನ ಮಾಡಲಾಗಿತ್ತು.

‘ಡಾಂಬರು ಹಾಕುವ ಮುನ್ನ ರಸ್ತೆಯ ಮೇಲ್ಮೈಯನ್ನು ಕೆರೆದು ಸಿದ್ಧಗೊಳಿಸುವ ಕಾಮಗಾರಿಗೆ ಬಿಬಿಎಂಪಿ ಕೌನ್ಸಿಲ್‌ನ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ’ ಎಂದು ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌ ಹೇಳಿದರು.

**

ಫ್ಲೈ ಓವರ್‌ ವೃತ್ತಾಂತ

ಸಿರ್ಸಿ ವೃತ್ತದ ಫ್ಲೈಓವರ್‌ ನಗರದ ಮೊದಲ ಫ್ಲೈ ಓವರ್‌. 2.65 ಕಿಲೋಮೀಟರ್‌ ಉದ್ದವಿದೆ. 1999ರಲ್ಲಿ ₹ 97 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಇದು ದಕ್ಷಿಣ ಮತ್ತು ಕೇಂದ್ರ ಬೆಂಗಳೂರನ್ನು ಸಂಪರ್ಕಿಸುತ್ತದೆ.

24 ಫಿಂಗರ್‌

ಸ್ಲ್ಯಾಬ್‌ಗಳನ್ನು ಹಿಡಿದಿಡಲು 24 ಫಿಂಗರ್‌ ಟೈಪ್‌ ವಿಸ್ತರಣಾ ಜೋಡಣೆಗಳಿವೆ. ವಾಹನ ಓಡಾಟದಿಂದ ಉಂಟಾಗುವ ಉಷ್ಣಾಂಶ ಹೀರಲು ಈ ವ್ಯವಸ್ಥೆ ಮಾಡಲಾಗಿದೆ. ಪದೇ ಪದೇ ಸಮಸ್ಯೆಗಳುಂಟಾದ ಹಿನ್ನೆಲೆಯಲ್ಲಿ ₹ 2.65 ಕೋಟಿ ವೆಚ್ಚದಲ್ಲಿ ಈ ಜೋಡಣೆಗಳನ್ನು ಬದಲಾಯಿಸಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !