ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ತೀರದಲ್ಲಿ ಪರಿಸ್ಥಿತಿ ಅವಲೋಕನ

Last Updated 26 ಜೂನ್ 2021, 12:54 IST
ಅಕ್ಷರ ಗಾತ್ರ

ಚಿಕ್ಕೋಡಿ: ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಕಾಡಸಿದ್ದೇಶ್ವರ ಮಠದ ಶ್ರೀಶೈಲ ಸ್ವಾಮೀಜಿ, ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರೊಂದಿಗೆ ತಾಲ್ಲೂಕಿನ ಯಡೂರ, ಕಲ್ಲೋಳ, ಚಂದೂರ, ಮಾಂಜರಿ, ಇಂಗಳಿ ಗ್ರಾಮದ ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿನ ಸ್ಥಿತಿಯನ್ನು ಪರಿಶೀಲಿಸಿದರು.

ಎನ್‌ಡಿಆರ್‌ಎಫ್‌ ತಂಡದೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಹಾಗೂ ನಿಗಾ ವಹಿಸುವಂತೆ ಸೂಚಿಸಿದರು.

ಬಳಿಕ ಲೈಫ್‌ ಜಾಕೆಟ್‌ ಧರಿಸಿ ಸ್ವಾಮೀಜಿಗಳೊಂದಿಗೆ ಎನ್‌ಡಿಆರ್‌ಎಫ್‌ ಬೋಟ್‌ನಲ್ಲಿ ಕೃಷ್ಣಾ ನದಿಯಲ್ಲಿ ವಿಹರಿಸಿ ನೀರು ಹರಿವಿನ ಪರಿಸ್ಥಿತಿ ಅವಲೋಕಿಸಿದರು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ರಾಹುಲ ದೇಸಾಯಿ, ಸದಸ್ಯರಾದ ಅಜಯ ಸೂರ್ಯವಂಶಿ, ಮಂಜುನಾಥ ದೊಡ್ಡಮನಿ, ಸಂತೋಷ ಶೇಗನೆ, ಈರಣ್ಣ ಅಮ್ಮಣಗಿ, ಪ್ರಕಾಶ ಕೋಕಣೆ, ಅಮರ ಬೋರಗಾಂವೆ, ನವನಾಥ ಚವಾಣ, ಸತೀಶ ಪುಠಾಣಿ, ಸಿಪಿಐ ಆರ್.ಆರ್. ಪಾಟೀಲ, ಪಿಎಸ್‌ಯ ಆರ್. ಲಕ್ಷ್ಮಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT