ಬುಧವಾರ, ಜನವರಿ 22, 2020
25 °C

ಸ್ಮಾರ್ಟ್‌ ಸಿಟಿ: ರಸ್ತೆ ಕಾಮಗಾರಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಸುಮಾರು ₹ 7 ಕೋಟಿ ವೆಚ್ಚದಲ್ಲಿ ಎ.ಪಿ.ಎಂ.ಸಿ.ಯಾರ್ಡ್‌ನಿಂದ ಕಂಗ್ರಾಳಿ ಕೆ.ಎಚ್ ಗ್ರಾಮದ ಶಿವಾಜಿ ಮೂರ್ತಿಯವರೆಗೆ ವೈಟ್ ಟಾಪಿಂಗ್ ರಸ್ತೆ ನಿರ್ಮಾಣಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮತ್ತು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಶನಿವಾರ ಪೂಜೆ ನೆರವೇರಿಸಿದರು.

ಸುಮಾರು 9.20 ಕಿ.ಮೀ ಉದ್ದದ ವೈಟ್ ಟಾಪಿಂಗ್ ರಸ್ತೆಯ ನಿರ್ಮಾಣ, ರಸ್ತೆಯ ಎರಡೂ ಬದಿಗೆ ಎರಡು ಮೀಟರ್  ಫುಟ್‌ಪಾತ್‌ ನಿರ್ಮಾಣ ಹಾಗೂ ಪೇವರ್ಸ್ ಅಳವಡಿಕೆ, ಅಲಂಕಾರಿಕ ಬೀದಿ ದೀಪಗಳ ಅಳವಡಿಕೆ ಹಾಗೂ ಇನ್ನಿತರ ಕಾಮಗಾರಿಗಳು ಈ ಯೋಜನೆಯಡಿ ನಡೆಯಲಿವೆ.

ಯುವರಾಜ ಕದಂ, ಸರಸ್ವತಿ ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೃಣಾಲ್‌ ಹೆಬ್ಬಾಳಕರ, ಕೆಂಪಣ್ಣ ಸನದಿ, ಚಂದ್ರಾ ಪಾಟೀಲ, ಪಕ್ಷದ ಮುಖಂಡರಾದ ಬಾಳು ಪಾಟೀಲ, ಮನೋಹರ್ ಪಾಟೀಲ, ವಿಶಾಲ್ ಭೋಸಲೆ, ಜ್ಯೋತಿಬಾ ಪಾಟೀಲ, ಬಾಳಕೃಷ್ಣ ಪಾಟೀಲ, ಅನಿಲ ಪಾವಸೆ, ಲತಾ ಪಾಟೀಲ, ಅನಿತಾ ಪಾಟೀಲ, ಸುರೇಖಾ, ಪಕ್ಷದ ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು