ಬುಧವಾರ, ಸೆಪ್ಟೆಂಬರ್ 22, 2021
29 °C

ಸಮಾಜ ಸೇವೆಯಿಂದ ಹೆಚ್ಚಿನ ಸಂತೋಷ ಲಭ್ಯ: ಮುರುಘಾ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ (ಬೆಳಗಾವಿ ಜಿಲ್ಲೆ): ‘ಕೊರೊನಾ ಹಾಗೂ ಪ್ರವಾಹದಂತಹ ಸಂಕಷ್ಟದ ಸಮಯವನ್ನು ಜನರು ಧೈರ್ಯದಿಂದ ಎದುರಿಸಬೇಕು. ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ತಾಲ್ಲೂಕಿನ ಪ್ರವಾಹಪೀಡಿತ ಆಡಿಬಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ 425 ಸಂತ್ರಸ್ತರಿಗೆ ಚಿತ್ರದುರ್ಗ ಶ್ರೀಮಠದ ವತಿಯಿಂದ ಆಹಾರ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

‘12ನೇ ಶತಮಾನದಲ್ಲಿ ಬಸವಣ್ಣನವರು ಕಲ್ಯಾಣಕ್ಕೆ ಕರೆ ನೀಡಿದ್ದರು. ಆದರೆ, ಪ್ರಸ್ತುತ ಸಂದರ್ಭದಲ್ಲಿ ಪ್ರಕೃತಿ ನಮಗೆ ನಮ್ಮ ಕರ್ತವ್ಯದ ಕಡೆ ಕರೆ ನೀಡುತ್ತಿದೆ. ಈ ನಿಟ್ಟಿನಲ್ಲಿ ರಾಜಕಾರಣಿಗಳು, ಸಮಾಜ ಸೇವಕರು, ಸಂತರು, ಶರಣರು, ಧರ್ಮಬೋಧಕರು, ಮಠಾಧೀಶರು ನಾಡಿನಲ್ಲಿ ಸಂಕಷ್ಟವನ್ನು ಎದುರಿಸುತ್ತಿರುವವರ ಸಹಾಯಕ್ಕೆ ಧಾವಿಸಬೇಕು’ ಎಂದರು.

‘ಈಗಿನ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಕರ್ತವ್ಯ ಏನೆಂದು ಅರಿತು ಸಮಾಜ ಕಟ್ಟುವ ಕಾರ್ಯವನ್ನು ಸರ್ಮಥವಾಗಿ ಮಾಡಬೇಕಾಗಿದೆ. ವಾಸ್ತವವಾಗಿ ದೇವರ ಪೂಜೆಗಿಂತ ಹೆಚ್ಚಿನ ಸಂತೋಷ ಸಮಾಜ ಸೇವೆ ಮಾಡಿದಾಗ ಲಭಿಸುತ್ತದೆ. ಕೊರೊನಾದಂತಹ ರೋಗದಿಂದ ಜನತೆ ತತ್ತರಿಸುತ್ತಿರುವಾಗ ನಮ್ಮ ಶ್ರೀಮಠ ಅವರ ನೆರವಿಗೆ ಧಾವಿಸಿತ್ತು’ ಎಂದು ತಿಳಿಸಿದರು.

ಗೋಕಾಕ ಶೂನ್ಯ ಸಂಪಾದನ ಮಠದ ಮುರುಘಾಜೇಂದ್ರ ಸ್ವಾಮೀಜಿ, ಅಥಣಿಯ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಘಟಪ್ರಭಾದ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ರಾಮದುರ್ಗ-ಬಟಕುರ್ಕಿಯ ಬಸವಪ್ರಭು ಸ್ವಾಮೀಜಿ, ಕಪರಟ್ಟಿ-ಕಳ್ಳಿಗುದ್ದಿಯ ಬಸವರಾಜ ಹಿರೇಮಠ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ, ಬಸವರಾಜ ಕಡಾಡಿ, ಗ್ರಾ.ಪಂ. ಅಧ್ಯಕ್ಷೆ ಯಲವ್ವ ಶಿಂತ್ರೆ, ಮುಖಂಡರಾದ ಆನಂದ ಮೂಡಲಗಿ, ಅಡಿವೆಪ್ಪ ಕಂಕ್ರಾಳಿ, ನಿಂಗಪ್ಪ ಶಿಂತ್ರೆ, ಸದಾಶಿವ ಮೂಡಲಗಿ, ಬಾಳಪ್ಪ ಮೆಳವಂಕಿ ಸೇರಿದಂತೆ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು