ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಯಾಅವರೆ ಬೆಲೆ ದಿಡೀರ್ ಕುಸಿತ: ಆಕ್ರೋಶ

Last Updated 23 ಸೆಪ್ಟೆಂಬರ್ 2021, 15:02 IST
ಅಕ್ಷರ ಗಾತ್ರ

ಬೆಳಗಾವಿ: ಸೋಯಾಅವರೆ ಬೆಲೆ 2 ದಿನಗಳಲ್ಲಿ ₹ 9ಸಾವಿರದಿಂದ ₹ 6ಸಾವಿರಕ್ಕೆ (ಕ್ವಿಂಟಲ್‌ಗೆ) ಕುಸಿದಿರುವುದನ್ನು ಖಂಡಿಸಿ ಮತ್ತು ₹ 9ಸಾವಿರ ನಿಗದಿಪಡಿಸುವಂತೆ ಸರ್ಕಾರವನ್ನು ಆಗ್ರಹಿಸಿ ರಾಜ್ಯ ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ಗುರುವಾರ ಮನವಿ ಸಲ್ಲಿಸಿದರು.

‘ಜಿಲ್ಲೆಯಲ್ಲಿ ಕಬ್ಬು ಬೆಳೆಯ ನಂತರ ಬೈಲಹೊಂಗಲ, ಬೆಳಗಾವಿ, ಖಾನಾಪುರ, ಕಿತ್ತೂರು ಮತ್ತು ಸವದತ್ತಿ ತಾಲ್ಲೂಕುಗಳಲ್ಲಿ ಸೋಯಾಅವರೆಯನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ. ಈ ಬಾರಿ ಅತಿವೃಷ್ಟಿಯಿಂದ ಬೆಳೆಗಳು ಹಾಳಾದವು. ಸೋಯಾಅವರೆ ಬೆಳೆಗೆ ಜಂಗಮ ರೋಗ (ಬೆಂಕಿ ರೋಗ) ತಗುಲಿ ಇಳುವರಿಯೂ ಕಡಿಮೆ ಬಂದಿದೆ. ಹಿಂದೆ ಎಕರೆಗೆ 10ಕ್ವಿಂಟಲ್‌ಗಿಂತ ಹೆಚ್ಚು ಇಳುವರಿ ಬರುತ್ತಿತ್ತು. ಈ ವರ್ಷ ಕೇವಲ 2 ಕ್ವಿಂಟಲ್ ಸಿಕ್ಕಿದೆ’ ಎಂದು ತಿಳಿಸಿದರು.

‘ರೋಗಕ್ಕೆ ತುತ್ತಾದ ಬೆಳೆ ಬೇರ್ಪಡಿಸಲು ಪ್ರತಿ ಎಕರೆಗೆ ಸರಾಸರಿ ₹ 10ಸಾವಿರ ಖರ್ಚಾಗಿದೆ. ಈ ನಡುವೆ, ದಿಢೀರನೆ ಬೆಲೆ ಕುಸಿದಿರುವುದು ಅವರನ್ನು ಆತಂಕಕ್ಕೆ ದೂಡಿದೆ. ಬೆಳೆಗಳು ಬರುವುದಕ್ಕೆ ಮುಂಚೆ ಹೆಚ್ಚಿನ ಬೆಲೆ ಇದ್ದು, ಬೆಳೆ ಬಂದ ತಕ್ಷಣ ದಿಢೀರ್ ಕುಸಿತ ಮಾಡಿಸುವ ವ್ಯಾಪಾರಿಗಳ ಕುತಂತ್ರವನ್ನು ಸರ್ಕಾರ ನಿರ್ಬಂಧಿಸಬೇಕು’ ಎಂದು ಒತ್ತಾಯಿಸಿದರು.

‘ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಕೂಡಲೇ ಕ್ರಮ ವಹಿಸದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT