ಶುಕ್ರವಾರ, ನವೆಂಬರ್ 15, 2019
26 °C

‘ವಿವೇಕ ಆಗಮನ’ ಕಾರ್ಯಕ್ರಮ ಇಂದಿನಿಂದ

Published:
Updated:

ಬೆಳಗಾವಿ: ‘ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ 127ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಅ.16ರಿಂದ ‘ವಿವೇಕ ಆಗಮನ’ ಕಾರ್ಯಕ್ರಮದಲ್ಲಿ ಯುವ ಸಮಾವೇಶ, ಭಕ್ತ ಸಮ್ಮೇಳನ ಮತ್ತು ನಗರದ ವಿವಿಧೆಡೆ 8 ವಿಶೇಷ ಸತ್ಸಂಗಗಳನ್ನು ಆಯೋಜಿಸಲಾಗಿದೆ’ ಎಂದು ಇಲ್ಲಿನ ಕೋಟೆಯಲ್ಲಿರುವ ಶ್ರೀರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದ ತಿಳಿಸಿದ್ದಾರೆ.

‘ರಿಸಾಲ್ದಾರ ಗಲ್ಲಿಯ ಸ್ವಾಮಿ ವಿವೇಕಾನಂದ ಸ್ಮಾರಕದಲ್ಲಿ ಅ. 16ರಂದು ಬೆಳಿಗ್ಗೆ 7.45ರಿಂದ 9.15, ಸಂಜೆ 6.30ರಿಂದ 7.45ರವರೆಗೆ ವಿಶೇಷ ಸತ್ಸಂಗಗಳನ್ನು ಆಯೋಜಿಸಲಾಗಿದೆ. 17ರಂದು ಬೆಳಿಗ್ಗೆ 10ರಿಂದ 1.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಗಾಗಿ (ನೋಂದಾಯಿತ) ಯುವ ಸಮ್ಮೇಳನ ನಡೆಸಲಾಗುವುದು. 20ರಂದು ಬೆಳಿಗ್ಗೆ 10ರಿಂದ 1.30ರವರೆಗೆ ಸಾರ್ವಜನಿಕರಿಗಾಗಿ ಭಕ್ತ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)