ಬೆಳಗಾವಿ: '620 ಅಂಕ ಬರುವ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, 625 ಅಂಕ ಪಡೆದಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ. ಎಲ್ಲ ಶಿಕ್ಷಕರೂ ನನಗೆ ಬಹಳಷ್ಟು ಪ್ರೋತ್ಸಾಹ ಮಾಡಿದರು. ತಂದೆ-ತಾಯಿ ಬೆಂಬಲ ನೀಡಿದರು. ಶ್ರಮಪಟ್ಟು ಓದಿದ್ದು ಸಾರ್ಥಕವಾಯಿತು...'

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ ತಾಲ್ಲೂಕಿನ ಕಟಗೇರಿಯ ಗ್ರಾಮೀಣ ಪ್ರತಿಭೆ; ಪ್ರಾರ್ಥನಾ ನಾಗಪ್ಪ ಬಿರಾದಾರ ಪಾಟೀಲ ಅವರ ಮನದ ಮಾತಿತು.

ಫಲಿತಾಂಶದ ಬಳಿಕ 'ಪ್ರಜಾವಾಣಿ' ಪ್ರತಿಕ್ರಿಯೆ ನೀಡಿದ ಪ್ರಾರ್ಥನಾ, ಸರ್ಕಾರಿ ಶಾಲೆಗಳೂ ಯಾವುದಕ್ಕೂ ಕಮ್ಮಿ ಇಲ್ಲ ಎಂಬುದಕ್ಕೆ ನಾನೇ ಸಾಕ್ಷಿ ಎಂದರು.

ಮುಂದೆ ಪಿಯಸಿ ವಿಜ್ಞಾನ ವಿಭಾಗ ಸೇರಿಕೊಂಡು, ಬಳಿಕ ವೈದ್ಯೆ ಅಥವಾ ಯುಪಿಎಸ್ಸಿ ಪರೀಕ್ಷೆ ಎದುರಿಸುವ ಗುರಿ ಹೊಂದಿದ್ದೇನೆ ಎಂದರು.

ಏಕಾಗ್ರತೆಯಿಂದ ಪಾಠ ಕೇಳಿದ್ದೆ. ಇದರಿಂದ ಅಲ್ಲಿಯೇ ಶೇ 80ರಷ್ಟು ಅರ್ಥ ಆಗುತ್ತಿತ್ತು. ಬಳಿಕ ಮನೆಗೆ ಹೋದ ಮೇಲೆ ಶೇ 20ರಷ್ಟು ಮನನ ಆಗುತ್ತಿತ್ತು. ಒಮ್ಮೆ ಓದಿ ಬಿಟ್ಟು ಬಿಡುತ್ತಿರಲಿಲ್ಲ. ಪಠ್ಯ ಪುನರ್ ಮನನ ಮಾಡಿದ್ದರಿಂದಲೇ 625 ಅಂಕ ಗಳಿಸಲು ಸಾಧ್ಯವಾಗಿದೆ ಎಂದು ತನ್ನ ಓದಿನ ಕ್ರಮವನ್ನು ಪ್ರಾರ್ಥನಾ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.