ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫಾಫ್‌ ಬದಲಿಗೆ ಸ್ಯಾಮ್‌ ಆಡಬೇಕಿತ್ತು’

Last Updated 23 ಮೇ 2018, 19:30 IST
ಅಕ್ಷರ ಗಾತ್ರ

ಮುಂಬೈ: ‘ಸನ್‌ರೈಸರ್ಸ್‌ ಹೈದರಾಬಾದ್‌  ವಿರುದ್ಧ ಏಕಾಂಗಿ ಹೋರಾಟ ನಡೆಸಿ ನಮ್ಮ ತಂಡವು ಈ ಸಲದ ಐಪಿಎಲ್‌ನಲ್ಲಿ ಫೈನಲ್‌ ತಲುಪಲು ಫಾಪ್‌ ಡು ಪ್ಲೆಸಿ ನೆರವಾದರು. ಆದರೆ, ಆ ಪಂದ್ಯದಲ್ಲಿ ಅವರ ಬದಲಿಗೆ ಸ್ಯಾಮ್‌ ಬಿಲ್ಲಿಂಗ್ಸ್‌ ಆಡಬೇಕಿತ್ತು’ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಹೇಳಿದರು.

‘ಹೌದು. ಸನ್‌ರೈಸರ್ಸ್‌ ವಿರುದ್ಧದ ಪಂದ್ಯದಲ್ಲಿ ಸ್ಯಾಮ್‌ ಅವರನ್ನು ಕಣ ಕ್ಕಿಳಿಸಲು ನಿರ್ಧರಿಸಲಾಗಿತ್ತು. ಆದರೆ ಪ್ಲೇ ಆಫ್‌ನ ಹಿಂದಿನ ಪಂದ್ಯದಲ್ಲಿ ಸ್ಯಾಮ್‌ ಅವರು ಗಾಯಗೊಂಡಿದ್ದರು. ಅವರು ಚೇತರಿಕೆಯಾಗದ ಕಾರಣ ಫಾಫ್‌ ಅವರು ತಂಡದಲ್ಲಿ ಸ್ಥಾನ ಪಡೆದರು’ ಎಂದು ಅವರು ತಿಳಿಸಿದರು.

‘ಪ್ರಮುಖ ಬ್ಯಾಟ್ಸ್‌ಮನ್‌ಗಳೆಲ್ಲ ಔಟಾಗುತ್ತಿದ್ದರೂ ಒತ್ತಡಕ್ಕೊಳಗಾಗದೇ ಕೊನೆಯವರೆಗೂ ತಾಳ್ಮೆಯ ಬ್ಯಾಟಿಂಗ್‌ ಮಾಡಿದ ಫಾಫ್‌ ಅವರದು ಶ್ರೇಷ್ಠ ಇನಿಂಗ್ಸ್‌’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT