ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯ ಪ್ರತಿಷ್ಠಾನದ ಕಾರ್ಯಕ್ಕೆ ಮೆಚ್ಚುಗೆ

ಅಥಣಿ: ರಾಜ್ಯಮಟ್ಟದ ನೃತ್ಯ ಸ್ಪರ್ಧೆ
Last Updated 10 ಸೆಪ್ಟೆಂಬರ್ 2019, 14:30 IST
ಅಕ್ಷರ ಗಾತ್ರ

ಅಥಣಿ: ‘ಸಮಾಜಮುಖಿ ಕಾರ್ಯದಲ್ಲಿ ಅದರಲ್ಲೂ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವು ಕಲ್ಪಿಸಲು ತೊಡಗಿಸಿಕೊಂಡ ಸಹಾಯ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾದುದು’ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.

ಇಲ್ಲಿ ಸಹಾಯ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ಪರ್ಧೆಯಲ್ಲಿ ವಿಜೇತರಾಗುವ 3 ತಂಡಗಳಿಗೆ ಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.

ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ‘ಇಲ್ಲಿನವರು ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅಥವಾ ನೋಡಲು ಮೈಸೂರು ದಸರಾ ಮೊದಲಾದ ಕಡೆಗಳಿಗೆ ಹೋಗಬೇಕಾಗಿತ್ತು. ಈಗ, ಅಥಣಿಯಲ್ಲೇ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿ, ಪ್ರತಿಭೆಗಳಿಗೆ ವೇದಿಕೆ ಒದಗಿಸಿದ್ದು ಅಭಿನಂದನಾರ್ಹ’ ಎಂದರು.

ಮುಖಂಡರಾದ ಬಸವರಾಜ ಬುಟಾಳಿ, ಧರೆಪ್ಪ ಠಕ್ಕನ್ನವರ, ಗಜಾನನ ಮಂಗಸೂಳಿ, ಪ್ರತಿಷ್ಠಾನದ ಕಾರ್ಯದರ್ಶಿ ಸಂತೋಷ ಬಡಕಂಬಿ ಮಾತನಾಡಿದರು.

ಸ್ಪರ್ಧೆಯಲ್ಲಿ, ಗೋಕಾಕದ ಜ್ಯೋತಿ ತಂಡ ಹಾಗೂ ಗದಗದ ವೆಲ್‌ನೌನ್‌ ತಂಡ ಪ್ರಥಮ ಸ್ಥಾನ ಪಡೆದವು. ಹಾರೊಗೇರಿಯ ವಿ.ಕೆ. ಸ್ಟೈಲ್, ಎ.ಜೆ. ಸ್ಟಾರ್ಸ್‌, ಬೆಳಗಾವಿಯ ಡಿ ಸ್ಕ್ವೇರ್ ತಂಡ ಮತ್ತು ಅಥಣಿಯ ಅಪೂರ್ವಾ ತಂಡ ಕ್ರಮವಾಗಿ 3, 4 ಹಾಗೂ 5ನೇ ಸ್ಥಾನ ಗಳಿಸಿದವು.

ಮುಖಂಡರಾದ ಮಲ್ಲಿಕಾರ್ಜುನ ಬುಟಾಳಿ, ಸಂತೋಷ ಸಾವಡಕರ, ಶ್ರೀಶೈಲ ಹಳ್ಳದಮಳ, ಸುನೀಲ ಸಂಕ, ಎ.ಎಂ. ಖೋಬ್ರಿ, ನರಸು ಬಡಕಂಬಿ, ಎಸ್.ಕೆ. ಹೊಳೆಪ್ಪನವರ, ಸಿದ್ದು ಪಾಟೀಲ, ಪ್ರಹ್ಲಾದ ವಾಘಮೋರೆ, ಸದಾಶಿವ ಲಗಳಿ, ಸುಶಾಂತ ಪಟ್ಟಣ, ರವಿ ಬಡಕಂಬಿ, ಪ್ರಮೋದ ಬಿಳ್ಳೂರ, ಸಂತೋಷ ಬಡಕಂಬಿ, ಶಶಿಧರ, ಸಚಿನ ಅವಟಿ, ಚಂದ್ರಶೇಖರ ರೋಖಡಿ, ಯಶೋದಾ ಕರೋಲಿ, ಪ್ರೇಮಾ ಬುಟಾಳಿ, ಸಂತೋಷ ಪವಾರ, ಅಮೀತ ಬಡಿಗೇರ, ವಿನೋದ ಬಾಡಗಿ, ಸಂತೋಷ ಮಾಕಾಣೆ, ರಾಕೇಶ ಗೊಟ್ಟಿ, ತಿಕಾರಾಮ ವಂಜಾರೆ, ಮಂಜುನಾಥ ಸವದತ್ತಿ, ಗಂಗಯ್ಯ ಪೂಜಾರಿ, ವಿದ್ಯಾ ಬಿರಾದಾರ, ಸುನಂದಾ ಅಳ್ಳಿಮಟ್ಟಿ, ಶೃತಿ ಬಡಚಿ, ಸಚಿನ ಮಾಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT