ಸಣ್ಣ ಕತೆಗಳ ಕುರಿತ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

ಶುಕ್ರವಾರ, ಮೇ 24, 2019
29 °C

ಸಣ್ಣ ಕತೆಗಳ ಕುರಿತ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

Published:
Updated:

ಬೆಳಗಾವಿ: ಇಲ್ಲಿನ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ಅವರ ಸಣ್ಣ ಕತೆಗಳ ಕುರಿತ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.

ಅವರ ಜನ್ಮಶತಮಾನೋತ್ಸವ ವರ್ಷದ ಅಂಗವಾಗಿ ಸ್ಪರ್ಧೆ ನಡೆಸಲಾಗುತ್ತಿದೆ. ಅವರ ಎಲ್ಲ ಸಣ್ಣ ಕತೆಗಳನ್ನು ಒಟ್ಟಾರೆಯಾಗಿ ವಿಮರ್ಶಾತ್ಮಕ ನೆಲೆಯಲ್ಲಿ ಮರುಓದಿಗೆ ಒಳಪಡಿಸುವ ಅಗತ್ಯ ಇರುವುದರಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಸದಸ್ಯ ಪ್ರೊ.ಚಂದ್ರಶೇಖರ ಅಕ್ಕಿ ತಿಳಿಸಿದ್ದಾರೆ.‌

‘ಕಟ್ಟೀಮನಿ ಅವರ ಸಣ್ಣ ಕಥೆಗಳ ಕುರಿತು ಮಾತ್ರ ಪ್ರಬಂಧ ರಚಿಸಬೇಕು. ಅವರ ಎಲ್ಲ ಕಥೆಗಳನ್ನು, ಅವುಗಳ ವಸ್ತು, ಧೋರಣೆ, ಪಾತ್ರಗಳು, ಕಥಾಸಂವಿಧಾನ, ಒಟ್ಟು ಪರಿಣಾಮ ಮತ್ತು ವರ್ತಮಾನಕ್ಕೆ ಆ ಕಥೆಗಳು ಪ್ರಸ್ತುತವಾಗುವ ರೀತಿ ಮೊದಲಾದ ಅಂಶಗಳ ಹಿನ್ನೆಲೆಯಲ್ಲಿ ವಿಮರ್ಶಾತ್ಮಕವಾಗಿ ಅವಲೋಕಿಸುವ ಪ್ರಬಂಧ ಇದಾಗಿರಬೇಕು ಮತ್ತು ಸ್ವತಂತ್ರವಾಗಿ ಬರೆದಿರಬೇಕು. ಸ್ಪರ್ಧೆಯಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು. ಅವರ ಎಲ್ಲ ಕಥೆಗಳನ್ನು ಸಮಗ್ರವಾಗಿ ಅವಲೋಕನ ಮಾಡಿ ಬರೆದುದಾಗಿರಬೇಕು’.

‘ಮೊದಲ ಮೂರು ಪ್ರಬಂಧಗಳಿಗೆ ಕ್ರಮವಾಗಿ ₹ 10ಸಾವಿರ, ₹ 7ಸಾವಿರ ಹಾಗೂ ₹ 5ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿಪತ್ರ ಕೊಡಲಾಗುವುದು. ಪ್ರಬಂಧಗಳನ್ನು ಜೂನ್ 30ರ ಒಳಗೆ– ಅಧ್ಯಕ್ಷರು, ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಕುಮಾರಗಂಧರ್ವ ರಂಗಮಂದಿರ, ಬೆಳಗಾವಿ-16– ಈ ವಿಳಾಸಕ್ಕೆ ರಿಜಿಸ್ಟರ್ಡ್‌ ಅಂಚೆ ಮೂಲಕ ಮಾತ್ರವೇ ಕಳುಹಿಸಬೇಕು’ ಎಂದು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !