ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಮಳೆಯಿಂದ ಹಾನಿ; ಪರಿಶೀಲನೆ ನಡೆಸಿದ ಅಧ್ಯಯನ ತಂಡ

Last Updated 10 ಸೆಪ್ಟೆಂಬರ್ 2022, 6:09 IST
ಅಕ್ಷರ ಗಾತ್ರ

ಗರ್ಲಗುಂಜಿ (ಬೆಳಗಾವಿ ಜಿಲ್ಲೆ): ಖಾನಾಪುರ ತಾಲ್ಲೂಕಿನ ಗರ್ಲಗುಂಜಿಯ ಸರ್ಕಾರಿ ಮರಾಠಿ ಗಂಡು ಮಕ್ಕಳ ಶಾಲೆಯಲ್ಲಿ ಮಳೆಯಿಂದ ತರಗತಿ ಕೊಠಡಿಗಳು ಕುಸಿದಿರುವುದನ್ನು ಕೇಂದ್ರ ಅಧ್ಯಯನ ತಂಡ ಶನಿವಾರ ಬೆಳಿಗ್ಗೆ ಪರಿಶೀಲಿಸಿತು‌.

ಕೇಂದ್ರ ಜಲ ಆಯೋಗದಜಲಶಕ್ತಿ ಸಚಿವಾಲಯದ ನಿರ್ದೇಶಕ ವಿ.ಅಶೋಕಕುಮಾರ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧೀಕ್ಷಕ ಎಂಜಿನಿಯರ್ ವಿ.ವಿ‌.ಶಾಸ್ತ್ರಿ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಸಲಹೆಗಾರ ಜಿ‌.ಎಸ್.ಶ್ರೀನಿವಾಸ ರೆಡ್ಡಿ ನೇತೃತ್ವದ ತಂಡ ಶಾಲೆಗೆ ಭೇಟಿ ನೀಡಿ ಹಾನಿಯ ವಿವರ ಕಲೆಹಾಕಿತು.

ಇದಕ್ಕೂ ಮುನ್ನ, ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ, ನೆರೆ ಹಾನಿ ಮಾಹಿತಿ ಸಂಗ್ರಹಿಸಿತು.

ಯಳ್ಳೂರಿನಲ್ಲಿ ಮಳೆಯಿಂದ ಭತ್ತದ ಬೆಳೆಗೆ ಹಾನಿಯಾಗಿರುವುದನ್ನು ಪರಿಶೀಲಿಸಿತು‌. ಸಿಂಗೆನಕೊಪ್ಪದಲ್ಲಿ ಕುಸಿದ ಶಾಲೆ ಕೊಠಡಿಗಳನ್ನು ವೀಕ್ಷಿಸಿತು.ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಇತರರು ಇದ್ದರು.

ಶನಿವಾರ ಸಂಜೆಯವರೆಗೆ ಖಾನಾಪುರ ತಾಲ್ಲೂಕಿನ ವಿವಿಧೆಡೆ ತಂಡ ಸುತ್ತಾಟ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT