ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕರಿಯಾಗುತ್ತಿವೆ ‘ಬಕರಿ’ಗಳು

ಬಕ್ರೀದ್‌: ಭಾನುವಾರ ಸಂತೆಗೆ ಬರುತ್ತಿದ್ದಾರೆ ವಿವಿಧ ಗ್ರಾಮಗಳ ಗ್ರಾಹಕರು
Last Updated 3 ಜುಲೈ 2022, 14:31 IST
ಅಕ್ಷರ ಗಾತ್ರ

ರಾಯಬಾಗ: ಬಕ್ರೀದ್‌ (ಜುಲೈ 10) ಹಬ್ಬ ಸಮೀಪಿಸುತ್ತಿದ್ದಂತೆಯೇ ಪಟ್ಟಣದ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿದೆ. ಕುರಿ, ಮೇಕೆ, ಕೋಳಿಗಳ ಸಂತೆಯಲ್ಲಿ ಈಗ ಜನಜಂಗುಳಿ ಉಂಟಾಗಿದೆ.

ಪಟ್ಟಣದಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತದೆ. ಆದರೆ, ಈಗ ತರಕಾರಿ, ಕಾಳು, ಹಣ್ಣುಗಳ ಮಾರಾಟಕ್ಕಿಂತ ಹೆಚ್ಚು ಸುದ್ದಿಯಲ್ಲಿರುವುದು ಕುರಿ, ಮೇಕೆಗಳು.

ಪಟ್ಟಣ ಹೊರವಲಯದ ಬ್ಯಾಕುಡ ರಸ್ತೆಯಲ್ಲಿ ಈ ಕುರಿ– ಮೇಕೆ ಸಂತೆ ಸೇರು
ತ್ತಿದೆ. ತಾಲ್ಲೂಕಿನ ವಿವಿಧ ಗ್ರಾಮಗಳ ಜನ ಕುರಿ– ಮೇಕೆ ಮಾರಲು ಬರುತ್ತಾರೆ. ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗೋವಾ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಅಪಾರ ಸಂಖ್ಯೆಯ ಜನ ಇಲ್ಲಿ ಕುರಿ, ಮೇಕೆಗಳನ್ನು ಖರೀದಿ
ಸಲು ಬರುತ್ತಾರೆ. ಸೂಕ್ತ ದರದಲ್ಲಿ ಕಟ್ಟುಮಸ್ತಾದ ದೇಸಿ ತಳಿಗಳು ಇಲ್ಲಿ ಸಿಗುತ್ತವೆ ಎಂಬುದೇ ಇದಕ್ಕೆ ಕಾರಣ.

ಪ್ರತಿ ಭಾನುವಾರ ಕುರಿ ಸಂತೆ ಸೇರುತ್ತದೆ. ಈಗ ಹಬ್ಬದ ಕಾರಣ ಕುರಿ– ಮೇಕೆ ಸಾಕಿದವರು ಮತ್ತು ಗ್ರಾಹಕರ ಜಾತ್ರೆಯೇ ಸೇರುತ್ತಿದೆ. ದಷ್ಟ‍ಪುಷ್ಠ ಕುರಿಗಳಿಗೆ ಎಲ್ಲಿಲ್ಲದ ಬೇಡಿಕೆ.

ಕೆಲವು ಕುರಿ ಮತ್ತು ಮೇಕೆಗಳು ಸುಮಾರು 140ರಿಂದ 160 ಕೆ.ಜಿ ತೂಕ ಹೊಂದಿದ್ದು, ಇಡೀ ಸಂತೆಯಲ್ಲಿ ಆಕರ್ಷಣೆಯ ಕೇಂದ್ರವಾಗಿವೆ. ₹ 1.20 ಲಕ್ಷದಿಂದ ₹ 1.40 ಲಕ್ಷದವರೆಗೂ ಈ ಕುರಿಗಳು ಬಿಕರಿಯಾಗುತ್ತಿವೆ.

ಮಹಿಳೆಯರೂ ಭಾಗಿ: ಗ್ರಾಮೀಣ ಭಾಗದ ಮಹಿಳೆಯರು ಕೂಡ ಪುರುಷರಿ
ಗಿಂತ ಒಂದು ಹೆಜ್ಜೆ ಮುಂದೆ ಬಂದು ಕುರಿ ವ್ಯಾಪಾರ ಮಾಡುತ್ತಿರುವುದು ಸಾಮಾನ್ಯ
ವಾಗಿದೆ. ಅದರಲ್ಲೂ ಗ್ರಾಮೀಣ ಮಹಿಳೆಯರು ನಾಟಿಕೋಳಿಗಳನ್ನು ಮಾರುವಲ್ಲಿ ಸಿದ್ಧಹಸ್ತರಾಗಿದ್ದಾರೆ.

ಮುದ್ರಾಂಕ ಇಲಾಖೆ ಅಧಿಕಾರಿಯೂ ವ್ಯಾಪಾರಿ: ಇಲ್ಲಿನ ಮುದ್ರಾಂಕ ಇಲಾಖೆಯ ಅಧಿಕಾರಿ ಆಗಿದ್ದರೂ ಸದಾಶಿವ ಡಬ್ಬಗೊಳ ಅವರು ಕುರಿ– ಮೇಕೆ ಸಾಕಣೆ ಮುಂದುವರಿಸಿದ್ದಾರೆ. ಇದೇ ಸಂತೆಯಲ್ಲಿ ಅವರು ತಮ್ಮ ಕುರಿಗಳನ್ನೂ ಮಾರಾಟಕ್ಕೆ ತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT