ಸೋಮವಾರ, ಆಗಸ್ಟ್ 26, 2019
20 °C

ಗಂಜಿ ಕೇಂದ್ರದಲ್ಲಿದ್ದ ಶಿಕ್ಷಕಗೆ ಪಾರ್ಶ್ವವಾಯು

Published:
Updated:

ಚಿಕ್ಕೋಡಿ: ತಾಲ್ಲೂಕಿನ ಅಂಕಲಿಯಲ್ಲಿ ಸಂತ್ರಸ್ತರಿಗೆ ಆರಂಭಿಸಿರುವ ಗಂಜಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ಜಿನಪ್ಪ ಕಾಂಬಳೆ (40) ಪಾರ್ಶ್ವವಾಯುಪೀಡಿತರಾದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು.

ಕೂಡಲೇ ಅವರನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿ‍ಪ್ಪಾಣಿ ತಾಲ್ಲೂಕಿನ ಗಳತಗಾ ಗ್ರಾಮದಲ್ಲಿ ಪ್ರವಾಹ ಸಿಲುಕಿದ್ದ ಜಾನುವಾರನ್ನು ಅಗ್ನಿಶಾಮಕ ಸಿಬ್ಬಂದಿ ಸುಮಾರು 2 ಕಿ.ಮೀ.ನಷ್ಟು ಈಜಿಕೊಂಡು ಹೋಗಿ ರಕ್ಷಿಸಿದರು. ಜಕ್ಕಪ್ಪ, ರವಿಪೂಜಾರಿ, ವಿಜಯಕುಮಾರ್‌ ಮೊದಲಾದವರು ಎಮ್ಮೆಯನ್ನು ರಕ್ಷಿಸಿ, ಸ್ಥಳೀಯರ ಮೆಚ್ಚುಗೆಗೆ ಪಾತ್ರವಾದರು.

Post Comments (+)