ಸೋಮವಾರ, ನವೆಂಬರ್ 18, 2019
28 °C

ಕೌಶಲ ಅಳವಡಿಕೆಗೆ ಡಾ.ಕೆ.ಜಿ. ವಿಶ್ವನಾಥ್ ಸಲಹೆ

Published:
Updated:
Prajavani

ಬೆಳಗಾವಿ: ‘ತಾಂತ್ರಿಕ ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಕೌಶಲ ಅಳವಡಿಕೆಗೆ ಆದ್ಯತೆ ಕೊಡಬೇಕು’ ಎಂದು ಜೈನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ, ನಿರ್ದೇಶಕ ಡಾ.ಕೆ.ಜಿ. ವಿಶ್ವನಾಥ್ ಸಲಹೆ ನೀಡಿದರು.

ಇಲ್ಲಿನ ಜೈನ್‌ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿಗಳ ಸಂಘ ಮತ್ತು ಐಜಿ(ಇ) ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಜ್ಞಾನದ ಬಾಯಾರಿಕೆ ಮಾತ್ರ ನಿಗದಿತ ಗುರಿ ಮುಟ್ಟಿಸುವಲ್ಲಿ ಯಶಸ್ಸಿನ ಮೆಟ್ಟಿಲಾಗುತ್ತದೆ’ ಎಂದರು.

ಉದ್ಯಮಿ ಅನಿಲ್ ಬಾಗಿ ಮಾತನಾಡಿ, ‘ಕಠಿಣ ಪರಿಶ್ರಮದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ. ಜೊತೆಗೆ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ನಲ್ಲಿ ಮೂಲ ಜ್ಞಾನ ಹೊಂದುವುದು ಅಷ್ಟೇ ಮುಖ್ಯ ಪಾತ್ರ ವಹಿಸುತ್ತದೆ’ ಎಂದರು.

ಪ್ರೊ.ವಿನೋದ ಎಸ್. ಪಾಟೀಲ, ಪ್ರೊ.ಶುಭಾ ಬರವಾಣಿ, ಡಾ.ದೇಬರಾಜ್ ಸರ್ಕಾರ, ಪ್ರೊ.ಲಕ್ಷ್ಮಿ ಬೃಂಗಿ, ಪ್ರೊ.ವೀರೇಶಕುಮಾರ ಮಠದ, ಪ್ರೊ.ಸಿದ್ದಲಿಂಗಯ್ಯ ಎಂ. ಛತ್ರದಮಠ, ಪ್ರೊ.ನಾಗರಾಜ ಐಹೊಳಿ, ಪ್ರೊ.ಪಾಸಲಾ ನರೇಶ ಇದ್ದರು.

ಪ್ರಿಯಾ, ಸೌಮ್ಯಾ ಪ್ರಾರ್ಥಿಸಿದರು. ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಡಾ.ಜಿ.ಎಚ್. ಕುಲಕರ್ಣಿ ಸ್ವಾಗತಿಸಿದರು. ಸೌಮ್ಯಾ ಹಾಗೂ ಪ್ರಸಾದ್ ನಿರೂಪಿಸಿದರು. ರೋಹಿತ್‌ ಟಿ. ವಂದಿಸಿದರು.

 

ಪ್ರತಿಕ್ರಿಯಿಸಿ (+)