ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹತ್ತರವಾಟ ಗ್ರಾಮದ ಕಿರಣ ಸಣ್ಣಪ್ಪ ಕಮತೆ (29) ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 53ನೇ ರ್ಯಾಂಕ್ ಹಾಗೂ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದಾರೆ. 6ನೇ ಬಾರಿಗೆ ಯಶಸ್ಸು ಕಂಡಿದ್ದಾರೆ. ‘ಪ್ರಜಾವಾಣಿ’ಗೆ ಸಂದರ್ಶನ ನೀಡಿರುವ ಅವರು, ತಮ್ಮ ಯಶಸ್ಸಿನ ಗುಟ್ಟು ಇಲ್ಲಿ ಹಂಚಿಕೊಂಡಿದ್ದಾರೆ.

* ಕುಟುಂಬದ ವಿವರ

ಹತ್ತರವಾಟ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದೇನೆ. ತಂದೆ ಸಣ್ಣಪ್ಪ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು, ತಾಯಿ ರುಕ್ಮಿಣಿ ಗೃಹಿಣಿ. ಪತ್ನಿ ಲೋಚನಾ ಹಾಗೂ ಸಹೋದರಿ ಕೀರ್ತಿ ಕೂಡ ಯುಪಿಎಸ್ಸಿ ಸಿದ್ಧತೆ ನಡೆಸಿದ್ದಾರೆ. ಅಜ್ಜ, ಅಜ್ಜಿ ಸೇರಿ ಅವಿಭಕ್ತ ಕುಟುಂಬ.

* ಶೈಕ್ಷಣಿಕ ಹಿನ್ನೆಲೆ

ಪ್ರಾಥಮಿಕ ಶಿಕ್ಷಣ ಬೇರೆ ಬೇರೆ ಶಾಲೆಗಳಲ್ಲಿ ಆಗಿದೆ. ಬೆಳಗಾವಿಯ ಜಿಐಟಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ಮುಗಿಸಿದ್ದೇನೆ.

* ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಯ ಸಿದ್ಧತೆ

ಮುಖ್ಯ ಪರೀಕ್ಷೆಯಷ್ಟೇ ಪೂರ್ವಭಾವಿ ಪರೀಕ್ಷೆ ಕೂಡ ಕಠಿಣ. ನಾನು ಹೆಚ್ಚು ಪರೀಕ್ಷೆಗಳನ್ನು ಬರೆಯುವುದನ್ನು ರೂಢಿಸಿಕೊಂಡಿದ್ದೆ. ಪುನರ್ ಮನನ ತುಂಬಾ ಮುಖ್ಯ. ಅದಕ್ಕಾಗಿ ಹೆಚ್ಚು ತಯಾರಿ ಮಾಡಿಕೊಂಡಿದ್ದೆ. ಹೀಗಾಗಿ, ಆರು ಬಾರಿಯೂ ಪಾಸಾದೆ.

* ಮುಖ್ಯ ಪರೀಕ್ಷೆಗೆ ವಿಷಯದ ಆಯ್ಕೆ

ರಾಜ್ಯಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು (ಪಿಎಸ್ಐಆರ್) ನನ್ನ ಆಯ್ಕೆ. ಇದೇ ಪರೀಕ್ಷೆಯಲ್ಲಿ 1750 ಅಂಕಗಳು ಇರುತ್ತವೆ. ಇಲ್ಲಿ ಉತ್ತಮವಾಗಿ ಬರೆಯುವುದು ಮುಖ್ಯ. ನಾನು ಪದೇಪದೇ ಬರೆದು ರೂಢಿಸಿಕೊಂಡೆ. ಒಂದು ಉತ್ತರವನ್ನು ಏಳೇ ನಿಮಿಷಗಳಲ್ಲಿ ಬರೆದು ಬಿಡಬೇಕು ಎಂಬುದು ನನ್ನ ಗುರಿ. ಅದನ್ನು ರೂಢಿಸಿಕೊಂಡಿದ್ದು ಮೂರು ತಾಸುಗಳಲ್ಲಿ ಯಶಸ್ವಿಯಾಯಿತು.

* ಪರೀಕ್ಷೆ ಮತ್ತು ಸಂದರ್ಶನದಲ್ಲಿ ಬಂದ ಅಂಕಗಳು

ಪೂರ್ವಭಾವಿ ಪರೀಕ್ಷೆಯ ಅಂಕಗಳು ಇನ್ನೂ ಗೊತ್ತಾಗಿಲ್ಲ. ಮುಖ್ಯ ಪರೀಕ್ಷೆಯಲ್ಲಿ 811 (1750) ಹಾಗೂ ಸಂದರ್ಶನದಲ್ಲಿ 195 (275) ಅಂಕ ಬಂದಿವೆ. ಒಟ್ಟು 1010 ಅಂಕ ಗಳಿಸಿದ್ದೇನೆ. ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಬೇಕು. ಅಲ್ಲಿ ಏನು ಹೇಳುತ್ತೇವೆ ಎನ್ನುವುದಕ್ಕಿಂತ ಏನನ್ನೂ ಹೇಳಬಾರದು ಎಂಬುದೂ ಗೊತ್ತಿರಬೇಕು.

* ಪರೀಕ್ಷೆಗೆ ಯೋಜನೆ ರೂಪಿಸಿಕೊಂಡ ಬಗೆ

ನಾನೊಬ್ಬ ಸಿವಿಲ್ ಎಂಜಿನಿಯರ್. ಕರಾರುವಾಕ್ ಆದ ನಡೆ ನನ್ನದು. ಪ್ರತಿ ದಿನದ ವೃತ್ತಿ, ಕುಟುಂಬ ನಿರ್ವಹಣೆ ಹೊರತಾಗಿ ನಾನು 6 ಗಂಟೆ ಓದಿಗೆ ಮೀಸಲಿಟ್ಟಿದ್ದೆ. ಮೂಲ ರೆಫರನ್ಸ್ ಪುಸ್ತಕ, ವರ್ತಮಾನದ ವಿಷಯ, ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ಹಾಗೂ ರಿವಿಜನ್, ವೃತ್ತಪತ್ರಿಕೆ ಓದು ಎಲ್ಲದಕ್ಕೂ ಒಂದೊಂದು ಗಂಟೆ ಹೊಂದಿಸಿಕೊಂಡಿದ್ದೆ.

* ದಿನಪತ್ರಿಕೆಗಳ ಓದಿನ ಅವಶ್ಯಕತೆ

ಪ್ರಚಲಿತ ವಿದ್ಯಮಾನಗಳು ಮತ್ತು ವಿಶ್ವವ್ಯಾಪಿಯ ಮಾಹಿತಿ ಬೇಕಾಗುತ್ತದೆ. ಅದಕ್ಕೆ ಪತ್ರಿಕೆಗಳು ಮಾತ್ರ ಸಾಧನ. ನಾನು ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಮತ್ತು ಇತರ ಇಂಗ್ಲಿಷ್ ಪತ್ರಿಕೆಗಳನ್ನು ಪ್ರತಿ ದಿನ 45 ನಿಮಿಷದಿಂದ ಒಂದು ತಾಸು ಮೀಸಲಿಡುತ್ತಿದ್ದೆ. ಅದು ಅವಶ್ಯ ಕೂಡ.

* ಬಳಸಿದ ಅಧ್ಯಯನ ಸಾಮಗ್ರಿಗಳು

ಭಾರತೀಯ ಇತಿಹಾಸಕ್ಕೆ ಎಂ.ಲಕ್ಷ್ಮಿಕಾಂತ, ಅರ್ಥಶಾಸ್ತ್ರಕ್ಕೆ ನಿತಿನ್ ಸಿಂಘಾನಿಯಾ, ಆಧುನಿಕ ಇತಿಹಾಸಕ್ಕೆ ‘ಸ್ಪೆಕ್ಟ್ರಂ’ ಪುಸ್ತಕ, ಮಧ್ಯಕಾಲೀನ ಅಧ್ಯಯನಕ್ಕೆ ಪೂನಂ ದಲಾಲ್ ದಹಿಯಾ, ಪರಿಸರಕ್ಕೆ ಪಿ.ಎಂ. ಹರ್ಷಾ ಅವರ ನೋಟ್ಸ್ ಬಳಸಿಕೊಂಡೆ.

* ಕನ್ನಡ ಮಾಧ್ಯಮ ಅಭ್ಯರ್ಥಿಗಳು ಎದುರಿಸುವ ಸವಾಲುಗಳು

ಕನ್ನಡದಲ್ಲಿ ಈಗ ಸಾಕಷ್ಟು ಉಪಯುಕ್ತ ಪುಸ್ತಕಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಸಿಗುತ್ತಾರೆ. ಕೋಚಿಂಗ್ ಕೇಂದ್ರಗಳೂ ಇವೆ. ಗೂಗಲ್, ಎಐ ನಲ್ಲಿ ಮಾಹಿತಿ ಸಿಗುತ್ತದೆ. ಇದರೊಂದಿಗೆ ತಕ್ಕಷ್ಟು ಇಂಗ್ಲಿಷ್ ಜ್ಞಾನ ಬೇಕೇಬೇಕು.

* ಕೋಚಿಂಗ್ ಅನಿವಾರ್ಯತೆ ಇದೆಯೇ

ಎಲ್ಲರಿಗೂ ಅನಿವಾರ್ಯ ಅಲ್ಲ. ನಮ್ಮ ಸಾಮರ್ಥ್ಯ ಏನು ಎಂಬುದನ್ನು ಅರ್ಥ ಮಾಡಿಕೊಂಡು ನಿರ್ಧರಿಸಬೇಕು. ನಾನು ಯಾವುದೇ ಕೋಚಿಂಗ್ ತೆಗೆದುಕೊಂಡಿಲ್ಲ. ಸ್ವಯಂ ಅಧ್ಯಯನ ಮಾಡಿ ಯಶಸ್ಸು ಗಳಿಸಬಹುದು ಎಂಬುದಕ್ಕೆ ನಾನೇ ಉದಾಹರಣೆ. ಯಾರಿಗಾದರೂ ಕೋಚಿಂಗ್ ಸಹಕಾರಿ ಆಗುತ್ತದೆ ಎಂದರೆ ಖಂಡಿತ ಬಳಸಿಕೊಳ್ಳಬೇಕು. ವಿನಾಕಾರಣ ಅವಕಾಶಗಳನ್ನು ಕೈಚೆಲ್ಲಬಾರದು.

* ಪರೀಕ್ಷೆ ತೆಗೆದುಕೊಳ್ಳುವವರಿಗೆ ನಿಮ್ಮ ಸಲಹೆ

ನನ್ನಿಂದ ಕಷ್ಟ ಅಂದುಕೊಂಡರೆ ಸಾಧ್ಯವೇ ಇಲ್ಲ. ಸಾಧಕರು ನಮ್ಮ ಮುಂದೆಯೇ ಇದ್ದಾರೆ. ಗ್ರಾಮೀಣ ಪ್ರದೇಶದವರಿಗೆ ಹೆಚ್ಚು ನೆಲದ ಜ್ಞಾನ ಇರುತ್ತದೆ. ಆಸಕ್ತಿ, ಹುಮ್ಮಸ್ಸು ಇರುತ್ತದೆ. ಇನ್ನೊಬ್ಬರ ಗೆಲುವು ನೋಡಿ ಸೋಲಬಾರದು. ಅವರ ಗೆಲುವು ನೋಡಿ ಗೆಲ್ಲಬೇಕು. ಸಾಧನೆ ಎಲ್ಲರಿಂದಲೂ ಸಾಧ್ಯವಿದೆ. ನಿರ್ಧಾರ ಎಷ್ಟು ದೃಢವಾಗಿದೆ ಎಂಬುದು ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.